ನಟ ಚಿರಂಜೀವಿ ಸರ್ಜನ ಅಕಾಲಿಕ ಮರಣದಿಂದಾಗಿ ಕನ್ನಡ ಚಿತ್ರರಂಗಕ್ಕೆ ಸಿಡಿಲು ಬಡಿದಂತಾಗಿದೆ, ಕನ್ನಡ ಚಿತ್ರರಂಗದ ಭರವಸೆಯ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಾ, ಉತ್ತಮ ಚಿತ್ರಗಳನ್ನು ನೀಡುತ್ತಿದ್ದ ಚಿರಂಜೀವಿ ಸರ್ಜಾ ಕೈಯಲ್ಲಿ ಸಾಕಷ್ಟು ಚಿತ್ರಗಳಿತ್ತು ಆದರೆ ಇನ್ನೂ ಕೆಲವು ಶೂಟಿಂಗ್ ಮುಗಿದು ಡಬ್ಬಿಂಗ್ ಬಾಕಿ ಇತ್ತು, ಇನ್ನೂ ಕೆಲವು ಸಿನಿಮಾಗಳು ಶೂಟಿಂಗ್ ಅನ್ನು ಅರ್ಧ ಮುಗಿದಿತ್ತು,  ಆದರೆ ಈಗ ಚಿರು ಸಾವಿನಿಂದ ನಿರ್ಮಾಪಕರನ್ನು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವಂತೆ  ಮಾಡಿದೆ. ಹಾಗಾದರೆ ಚಿರು ನಟಿಸುತ್ತಿದ್ದ ಚಿತ್ರಗಳು ಯಾವುವು ಗೊತ್ತಾ..?

 

ಆಕಾಲಿಕ ಮರಣಕ್ಕೆ ತುತ್ತಾದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಟಿಸುತ್ತಿದ್ದ ಚಿತ್ರದ ನಿರ್ಮಾಪಕರ ಪಾಲಿಗೆ ಹೊಸ ಸವಾಲನ್ನು ತಂದೊಡ್ದಿದೆ. ಈಗಾಗಲೇ ಚಿತ್ರೀಕರಣಗೊಂಡ ಚಿತ್ರಗಳ ಭಾಗಗಳನ್ನು ಡಬ್ ಮಾಡಲು ಅತ್ಯುತ್ತಮ ಧ್ವನಿಗಾಗಿ ಶೋಧ ನಡೆದಿದೆ. ಇನ್ನು ಹಾಡುಗಳನ್ನು ಬಿಟ್ಟು ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಶೂಟ್ ಮಾಡದ ಭಾಗಗಳಿಗೆ ಬಳಸಿಕೊಳ್ಳಲು ಅವರು ಯೋಜಿಸುತ್ತಿದ್ದಾರೆ.

ಕಳೆದ ಕೆಲ ವರ್ಷಗಳಿಂಡ ಅತ್ಯಂತ ಸಕ್ರೀಯ ನಟರಲ್ಲಿ ಒಬ್ಬರೆನಿಸಿದ್ದ ನಟ ಚಿರಂಜೀವಿ ಸರ್ಜಾ ಜೂನ್ 7 ರಂದು ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಏಕಕಾಲದಲ್ಲಿ ಎರಡು ಮೂರು ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ನಟ 2020 ರಲ್ಲಿ ಖಾಕಿ, ಆದ್ಯಾ, ಮತ್ತು ಶಿವರ್ಜುನ ಸೇರಿದಂತೆ ಮೂರು ಬ್ಯಾಕ್-ಟು-ಬ್ಯಾಕ್ ಚಿತ್ರಗಳ ಬಿಡುಗಡೆಗೆ ಸಾಕ್ಷಿಯಾಗಿದ್ದರು.

ಸತ್ಯ ರಾಯಲಾ ಅವರ ಏಪ್ರಿಲ್, ಮತ್ತು ಇರುವುದೆಲ್ಲವ ಬಿಟ್ಟುನಿರ್ದೇಶಕ ಕಾಂತರಾಜ್ ಕನಳ್ಳಿಯವರ ಕಮರ್ಷಿಯಲ್ ಎಂಟರ್ಟೈನರ್ ಸೇರಿದಂತೆ ಕೆಲವು ಯೋಜನೆಗಳಿಗೆ ಚಿತ್ರೀಕರಣ ಪ್ರಾರಂಭಿಸಲು ನಟ ಸಜ್ಜಾಗಿದ್ದರು ಅಲ್ಲದೆ ಇನ್ನೂ ಮೂರು ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ. ಲಾಕ್‌ಡೌನ್‌ಗೆ ಒಂದು ದಿನ ಮೊದಲು ಬಿಡುಗಡೆಯಾದ ಶಿವ ತೇಜಸ್ ನಿರ್ದೇಶನದ ಶಿವಾರ್ಜುನ ಚಿತ್ರವನ್ನು ನಿರ್ಮಾಪಕರು ರೀ ರಿಲೀಸ್ ಗೆ ತಯಾರಿ ನಡೆಸಿದ್ದಾರೆ.


ಇನ್ನು ನಟರಾದ ಚೇತನ್ ಮತ್ತು ಚಿರಂಜೀವಿ ಸರ್ಜಾ ಅವರನ್ನು ಒಟ್ಟಿಗೆ ತೆರೆ ಮೇಲೆ ತರಲಿದ್ದ ರಣಂ ಚಿತ್ರದಲ್ಲಿ ನಟ ಎನ್‌ಕೌಂಟರ್ ಸ್ಪೆಷಲಿಸ್ಟ್ ಪಾತ್ರವನ್ನು ನಿರ್ವಹಿಸಿದ್ದರು. ಸಮುದ್ರ ನಿರ್ದೇಶನದ ಮತ್ತು ಆರ್‌ಎಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಗೀತರಚನೆಕಾರ-ನಿರ್ದೇಶಕ ರಾಮ್ ನಾರಾಯಣ್ ನಿರ್ದೇಶನದ ರಾಜಮಾರ್ತಾಂಡ ಚಿತ್ರದ ಚಿತ್ರೀಕರಣ ಸಹ ಪೂರ್ಣಗೊಂಡಿದ್ದು ಯುಗಳ ಗೀತೆ ಮತ್ತು ಡಬ್ಬಿಂಗ್ ಚಿತ್ರೀಕರಣ ಮಾತ್ರ ಬಾಕಿ ಇದೆ.


ನಿರ್ದೇಶಕರ ಪ್ರಕಾರ, ರಾಜಮಾರ್ತಾಂಡ ಚಿರಂಜೀವಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡ ಕೊನೆಯ ಚಿತ್ರವಾಗಿದೆ. ರಣಮ್ ನಲ್ಲಿ ಇನ್ನೊಬ್ಬ ನಟನೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿರುವ ನಟ ಕ್ಷತ್ರಿಯ ಚಿತ್ರೀಕರಣದ ಶೇ. 70 ಭಾಗವನ್ನಷ್ಟೇ ಪೂರ್ತಿ ಮಾಡಿದೆ. ಹೀಗಾಗಿ ನಮ್ಮ ಚಿತ್ರ ಚಿರು ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡ ಕಡೆಯ ಚಿತ್ರ. ಎಂದು ನಿರ್ದೇಶಕರು ಹೇಳುತ್ತಾರೆ, ಅವರು ಈ ಯೋಜನೆಯ ಬಗ್ಗೆ ಮೂರು ವರ್ಷಗಳ ಕಾಲ ನಟರೊಂದಿಗೆ ಮಾತುಕತೆ ನಡೆಸಿದ್ದರು.


ಅನಿಲ್ ಮಂಡ್ಯ ನಿರ್ದೇಶನದ ಚೊಚ್ಚಲ ಚಿತ್ರಣವಾದ ಕ್ಷತ್ರಿಯ ನಾಲ್ಕು ದಿನಗಳ ಟಾಕಿ ಭಾಗಗಳ ಚಿತ್ರೀಕರಣ ಮತ್ತು ಒಂದೆರಡು ಹಾಡುಗಳನ್ನು ಹೊರತು ಎಲ್ಲ ಶೂಟಿಂಗ್ ಮುಗಿದಿದೆ. ನಾವು 70 ಪ್ರತಿಶತದಷ್ಟು ಚಿತ್ರೀಕರಣಮುಗಿಸಿದ್ದೇವೆ. ಅದನ್ನು ಮುಂದಿನ ಪ್ರಕ್ರಿಯೆಗೆ ತೆಗೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ನಾನು ನಿರ್ಮಾಪಕರೊಂದಿಗೆ ಚರ್ಚಿಸಿ ಉಳಿದವುಗಳನ್ನು ಯೋಜಿಸಲಾಗುವುದು ಎಂದು ನಿರ್ದೇಶಕರು ಹೇಳುತ್ತಾರೆ.



ಉಳಿದ ಭಾಗಗಳನ್ನು ಪೂರ್ಣಗೊಳಿಸಲು ಕಂಪ್ಯೂಟರ್ ಗ್ರಾಫಿಕ್ಸ್ ಸಹಾಯದಿಂದ ಹಾಡುಗಳ ತಯಾರಿಗೆ ನಿರ್ಧರಿಸಲಾಗಿದೆ. ಕೊರೋನಾವೈರಸ್ ಹರಡುವಿಕೆ ಇಲ್ಲದಿದ್ದಲ್ಲಿ ನಮ್ಮ ಶೂಟಿಂಗ್ ಪೂರ್ಣವಾಗಿರುತ್ತಿತ್ತು ಎಂದ ನಿರ್ದೇಶಕ, ಚಿರಂಜೀವಿ ಸರ್ಜಾ ಅವರ ಸಹೋದರ ಧ್ರುವ ಸರ್ಜಾ ಅವರೊಂದಿಗೆ ಯೋಜನೆಯನ್ನು ಚರ್ಚಿಸಿದ ನಂತ ಒಪ್ಪಿದ ಚಿತ್ರವಿದಾಗಿತ್ತು. ಈ ಚಿತ್ರದಲ್ಲಿ ಸರ್ಜಾ ಜತೆಗೆ ಸಂಜಾನಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಧರಾಣಿ ಮತ್ತು ಸಾಧು ಕೋಕಿಲಾ ಪ್ರಮುಖ ಪಾತ್ರದಲ್ಲಿದ್ದಾರೆ.

 

మరింత సమాచారం తెలుసుకోండి: