ಇತ್ತೀಚೆಗೆ ಬಾಲಿವುಡ್ ನಲ್ಲಿ ಕಲಾವಿದರನ್ನು ದ್ವೇಶಿಸುವಂತಹ ಗುಂಪು ರೂಪಗೊಳ್ಳುತ್ತಿದೆ ಈ ಗುಂಪು ಖ್ಯಾತ ಕಲಾವಿದರ ಹೆಸರನ್ನು ಹಾಳು ಮಾಡುವಂತಹ ಪ್ರಯತ್ನಗಳು ನಡೆಯುತ್ತಲೇ ಇದೆ ಈಗಾಗಲೇ ಕೆಲವು ಕಲಾವಿದರು ಈ ಬಗ್ಗೆ ಹೇಳಿಕೊಂಡಿದ್ದು ಈಗ ಎಆರ್ ರೆಹಮಾನ್ ತಮಗೆ ಆಗುತ್ತಿರುವ ತೊಂದರೆಯನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಆ ತೊಂದರೆ ಏನು ಗೊತ್ತಾ..?
ಹೌದು ಬಾಲಿವುಡ್ನಲ್ಲಿ ಒಬ್ಬೊಬ್ಬರೇ ಗಣ್ಯರು ತಮ್ಮ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗೆಷ್ಟೇ ಖ್ಯಾತ ಗಾಯಕ ಸೋನು ನಿಗಮ್ ಈ ಬಗ್ಗೆ ಧ್ವನಿ ಎತ್ತಿದ್ದರು. ಮ್ಯೂಸಿಕ್ ಮಾಫಿಯಾ ಇದೆ ಎಂದಿದ್ದರು. ಇದೀಗ ಅದೇ ಸಾಲಿಗೆ ಪ್ರಸಿದ್ಧ ಸಂಗೀತ ಸಂಯೋಜಕ, ಗಾಯಕ ಎ.ಆರ್.ರೆಹಮಾನ್ ಸೇರಿದ್ದಾರೆ.
ರೇಡಿಯೋ ಮಿರ್ಚಿ ಜತೆ ಮಾತನಾಡಿದ ಅವರು, ನಾನು ಇತ್ತೀಚೆಗೆ ತುಂಬ ಸಿನಿಮಾಗಳಿಗೆ ಕೆಲಸ ಮಾಡುತ್ತಿಲ್ಲ. ಸಂಗೀತ ನಿರ್ದೇಶನ ಮಾಡುತ್ತಿಲ್ಲ ಎಂದು ತುಂಬ ಜನರಿಗೆ ಅನ್ನಿಸಿರಬಹುದು. ಹಲವರು ನನ್ನ ಬಳಿ ಈ ಬಗ್ಗೆ ಕೇಳಿದ್ದಾರೆ. ಆದರೆ ನಾನಾಗೇ ಮಾಡುವುದಿಲ್ಲ ಎಂದು ಹೇಳುತ್ತಿಲ್ಲ ಎಂದಿದ್ದಾರೆ.
ಒಳ್ಳೆಯ ಸಿನಿಮಾಗಳು ಬಂದರೆ ನಾನು ಯಾವ ಕಾರಣಕ್ಕೂ ತಿರಸ್ಕರಿಸುವುದಿಲ್ಲ. ಆದರೆ ಕೆಲವು ತಪ್ಪು ವದಂತಿಗಳು ಹರಡುತ್ತಿವೆ. ಒಂದು ಗ್ಯಾಂಗ್ ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ ಎಂದು ಹೇಳಿದ್ದಾರೆ.
ಒಂದು ದಿನ ಕಾಸ್ಟಿಂಗ್ ಡೈರಕ್ಟೆರ್ ಮುಖೇಶ್ ಛಬರಾ ನನ್ನ ಬಳಿ ಬಂದರು. ನಾನವರಿಗೆ ಎರಡು ದಿನಗಳಲ್ಲಿ ನಾಲ್ಕು ಹಾಡು ಕೊಟ್ಟೆ. ಆಗವರು ಹೇಳಿದರು…ಸರ್..ನಿಮ್ಮ ಬಳಿ ಹೋಗಬೇಡಿ..ಅವರೊಂದಿಗೆ ಕೆಲಸ ಮಾಡಬೇಡಿ ಎಂದು ಅದೆಷ್ಟೋ ಜನರು ನನ್ನ ಬಳಿ ಹೇಳಿದರು. ಅಲ್ಲದೆ ನಿಮ್ಮ ಬಗ್ಗೆ ಏನೇನೋ ಕತೆ ಹೇಳಿದರು ಎಂದು ನನಗೆ ತಿಳಿಸಿದರು. ಆಗ ವಾಸ್ತವ ಇನ್ನಷ್ಟು ಸ್ಪಷ್ಟವಾಯಿತು. ಯಾಕೆ ಒಳ್ಳೊಳ್ಳೆ ಸಿನಿಮಾಗಳ ಆಫರ್ ನನಗೆ ಬರುತ್ತಿಲ್ಲ. ಸಂಗೀತ ಸಂಯೋಜನೆ, ಗಾಯನ ಯಾವುದಕ್ಕೂ ನನಗೆ ಆಹ್ವಾನ ಸಿಗುತ್ತಿಲ್ಲ ಎಂಬುದು ಗೊತ್ತಾಯಿತು ಎಂದು ರೆಹಮಾನ್ ನೋವು ಹಂಚಿಕೊಂಡಿದ್ದಾರೆ.
ಒಂದಷ್ಟು ಜನರು ನನ್ನಿಂದ ಒಳ್ಳೆಯ ಹಾಡು, ಸಂಗೀತವನ್ನು ನಿರೀಕ್ಷಿಸುತ್ತಾರೆ. ಆದರೆ ಇದು ಆಗದಂತೆ ಮತ್ತೊಂದಷ್ಟು ಜನರ ಗುಂಪು ತಡೆಯುತ್ತಿದೆ. ಆಗಲಿ..ಎಲ್ಲವೂ ಒಳ್ಳೇಯದೇ..ನಾನು ನನ್ನ ಗುರಿ ಮತ್ತು ದೇವರಲ್ಲಿ ನಂಬಿಕೆಯಿಟ್ಟಿದ್ದೇನೆ. ಎಲ್ಲವನ್ನೂ ಕೊಡುವವನು ದೇವರು ಎಂದು ಹೇಳಿದ್ದಾರೆ.
ಬಂದ ಚಲನಚಿತ್ರಗಳನ್ನು ಒಪ್ಪಿಕೊಂಡು ನನ್ನ ಕೆಲಸ ಮಾಡುತ್ತಿದ್ದೇನೆ. ಒಳ್ಳೊಳ್ಳೆ ಸಿನಿಮಾಗಳನ್ನು ತರುವ ಯಾರಿಗೂ ನಿರಾಸೆಯನ್ನಂತೂ ಖಂಡಿತ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
click and follow Indiaherald WhatsApp channel