ರಾಜ್ಯದಲ್ಲಿ ಮೈತ್ರಿ ಸರ್ಕಾರದ ನಾಯಕರು ಸರ್ಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಇತ್ತ ಅಧಿಕಾರಿಗಳೂ ಜನರ ಸಮಸ್ಯೆಗೆ ಕಿವಿಗೊಡುತ್ತಿಲ್ಲ. ಹೀಗಾಗಿ ಇಂದು ಯಡಿಯೂರಪ್ಪ ಅವರು ಸರ್ಕಾರಿ ಅಧಿಕಾರಿ ವಿರುದ್ಧ ಗರಂ ಆದರು. ಹಾಗಾದರೆ ನಡೆದಿರೋದಾದರೂ ಏನು ? ಇಲ್ಲಿದೆ ನೋಡಿ.
"ಕಪಾಳಕ್ಕೆ ಕೊಡಬೇಕಾ? ಏನ್ ತಮಾಷೆ ಮಾಡಿದ್ದೀಯಾ" ಹೀಗೆ ಗರಂ ಆದವರು ಬೇರೆ ಯಾರೂ ಅಲ್ಲ. ಮಾಜಿ ಸಿಎಂ ಬಿ.ಎಸ್.ವೈ. ಹೌದು, ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಚತ್ತರ ತಾಂಡಾದಲ್ಲಿನ ಬರ ಪರಿಶೀಲನೆ ವೇಳೆ ಯಡಿಯೂರಪ್ಪ ಗರಂ ಆದರು.
ತಾಂಡಾದಲ್ಲಿ ಕುಡಿಯುವ ನೀರಿಲ್ಲ. ಉದ್ಯೋಗ ಇಲ್ಲ ಎಂದು ಗ್ರಾಮಸ್ಥರು ಯಡಿಯೂರಪ್ಪ ಅವರಿಗೆ ಅಹವಾಲು ಸಲ್ಲಿಸಿದರು. ಈ ಅಹವಾಲು ಸ್ವೀಕರಿಸಿದ ಅವರು ಸಂಬಂಧಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
click and follow Indiaherald WhatsApp channel