ಬೆಂಗಳೂರು: ರಾಜ್ಯಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆಯು ಭರ್ಜರಿಯಾಗಿದ್ದು, ಯುವಕರು ಮೋಜು ಮಸ್ತಿಯಲ್ಲಿ ಫುಲ್ ಬ್ಯೂಸಿಯಾಗಿರುವುದರಿಂದ ರಾಜ್ಯದ ಅಬಕಾರಿ ಇಲಾಖೆ ಫುಲ್ ದಿಲ್ ಖುಷ್ ಆಗಿದೆ. ಅರೇ, ಯುವಕರು ಮೋಜು ಮಸ್ತಿ ಮಾಡಿದರೇ, ಅಬಕಾರಿ ಇಲಾಖೆಗೆ ಏಕೆ ಖುಷಿ ಎಂದು ಡೌಟ್ ಬಂತ. ಚಿಂತಿಸಬೇ೦ಿ ಅದಕ್ಕೆ ಉತ್ತರ ನಾವ್ ಹೇಳ್ತೀವಿ ಕೇಳಿ. 
 
2020 ಜನವರಿ 1 ಹೊಸ ವರ್ಷದ ಸಂಭ್ರಮಾ ಚರಣೆಯಲ್ಲಿ ಯುವಕರು ಸೇರಿದಂತೆ ಬಹುತೇಕ ಜನರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿದೆ. ಕಳೆದ ಕೆಲವು ದಿನಗಳಿಂದ ವ್ಯಾಪಾರ ಇಲ್ಲದೇ ಗೊಣಗುತ್ತಿದ್ದ ಮದ್ಯದ ಅಂಗಡಿಯವರು ಹೊಸ ವರ್ಷಕ್ಕೆ ಫುಲ್ ಕಿಲ ಕಿಲ ಆಗಿದ್ದಾರೆ. ಹೊಸ ವರ್ಷಕ್ಕೆ ನಾವಿದ್ದೇವೆ ಎಂದು ಕುಡುಕರು ಅಬಕಾರಿ ಇಲಾಖೆ ಸಖತ್ ಆದಾಯ ತಂದುಕೊಟ್ಟಿದ್ದಾರೆ. ಈ ಬಾರಿ ಹೊಸ ವರ್ಷದ ಪಾರ್ಟಿ ಮೂಡ್ ಅಬಕಾರಿ ಇಲಾಖೆಯ ಹಳೆ ದಾಖಲೆಗಳನ್ನು ಪೀಸ್ ಪೀಸ್ ಮಾಡಿದೆ. ಖಜಾನೆಯ ಚಿಂತೆಯಲ್ಲಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಅಷ್ಡಕ್ಕೂ ದಾಖಲೆಯ ಮದ್ಯ ಮಾರಾಟ ವಾಗಿದ್ದು ಎಷ್ಟು ಗೊತ್ತಾ! 
 
ಅತಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿದೆ. ರಾಜ್ಯಾದ್ಯಂತ ಈ ವರ್ಷ ಭರ್ತಿ ಶೇ.10 ರಷ್ಟು ಮದ್ಯ ಮಾರಾಟ ಹೆಚ್ಚಳವಾದರೆ, ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಶೇ.15 ರಷ್ಟು ಮಾರಾಟವಾಗಿದೆ. ಕಳೆದ ವರ್ಷ ಡಿಸೆಂಬರ್ 21 ರಿಂದ ಜನವರಿ 31 ರ ಮಧ್ಯರಾತ್ರಿಯ ವರೆಗೆ 481 ಕೋಟಿ ಆದಾಯ ಬಂದಿತ್ತು. ಈ ವರ್ಷ ಅಂದ್ರೆ ಹೊಸ ವರ್ಷಾ ಚರಣೆಗೆ ಬರೋಬ್ಬರಿ 597 ಕೋಟಿ ಆದಾಯ ಅಬಕಾರಿ ಖಜಾನೆ ಗೆ ಸೇರಿದೆ.  ಕಳೆದ ವರ್ಷ ಶೇ. 21.75 ಕೇಸಸ್ ಮದ್ಯ ಮರಾಟಾ ವಾದರೆ ಈ ವರ್ಷ ಶೇ.23.72 ಮದ್ಯ ಮಾರಾಟವಾಗಿದೆ. ವ್ಯಾಪಾರ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಅಬಕಾರಿ ಅಧಿಕಾರಿ ಗಳು ಈ ಬಾರಿ ಆದಾಯ ಹೆಚ್ಚಳ ನೋಡಿ ದಿಲ್ ಖುಷ್ ಆಗಿದ್ದಾರೆ. ಇದರಿಂದ ರಾಜ್ಯದ ಖಜಾನೆ ಒಂದಿಷ್ಟು ತೂಕ ಹೆಚ್ಚಾಗಿದೆ.

మరింత సమాచారం తెలుసుకోండి: