ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕುರಿತು ಡಿ.ಕೆ.ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ತಾವು ಮುಖ್ಯಮಂತ್ರಿ ಆಗಬೇಕೆಂದು ಯಡಿಯೂರಪ್ಪ ಅವರು ಆಸೆ ಪಡೋದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
ಸರಕಾರ ಬೀಳುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರಿಗೆ ಸಂತೋಷ ಸಿಗುವುದಾದರೆ ಸಿಗಲಿ, ನಮಗೇನೂ ಬೇಸರ ಇಲ್ಲ. ಕಳೆದ ಒಂದು ವರ್ಷದಿಂದ ಯಡಿಯೂರಪ್ಪ ಅವರು ಇದೇ ಮೈತ್ರಿ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದರು. ನಾವು ಯಡಿಯೂರಪ್ಪ ಅವರ ಭವಿಷ್ಯ ನೋಡಿದ್ದೇವೆ. ಬಿಜೆಪಿಯ ಭವಿಷ್ಯವನ್ನು ನೋಡಿದ್ದೇವೆ ಎಂದು ವ್ಯಂಗ್ಯವಾಡಿದರು.
ಮೈತ್ರಿ ಸರ್ಕಾರ ಸುಸೂತ್ರವಾಗಿ ನಡೆಯಬೇಕಾದರೆ ನಾವು ಸೂಕ್ಷ್ಮವಾಗಿ ಆಡಳಿರ ಮಾಡಬೇಕಾಗಿದೆ. ಹೀಗಾಗಿ ಯಾರನ್ನು ಸೇರಿಸಿಕೊಂಡು ಸಂಪುಟ ರಚಿಸಬೇಕೋ ಅಂತರವನ್ನು ಸೇರಿಸಿಕೊಂಡಿದ್ದೇವೆ. ಪ್ರಾಮಾಣಿಕ ಹಿರಿಯ ನಾಯಕರಿಗೂ ಮುಂದೆ ಅವಕಾಶ ಇದೆ ಎಂದರು.
click and follow Indiaherald WhatsApp channel