ಗ್ರಾಮ ಪಂಚಾಯತ್ ಗಳಲ್ಲಿ ಇನ್ಮೇಲೆ ಕೆಡಿಪಿ ಅಂದರೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು. ಈ ಹಿಂದೆ ಕೇವಲ ತಾಲೂಕು ಹಾಗೂ ಜಿಲ್ಲಾ ಮಟ್ಟಗಳಲ್ಲಿ ನಡೆಯುತ್ತಿದ್ದ ಸಭೆ ಇನ್ನು ಮುಂದೆ ಗ್ರಾಮ್ ಪಂಚಾಯತ್ ನಲ್ಲಿಯೂ ನಡೆಯಲಿವೆ.

 

ಈ ಕುರಿತು ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಎಲ್ಲರೂ ಇದನ್ನು ಅನುಸರಿಸಬೇಕು ಎಂದು ಹೇಳಿದರು. ಗ್ರಾಮ್ ಪಂಚಾಯತ್ ಗಳು ತೆರಿಗೆ ವಸೂಲಾತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. 

 

ಈ ತೆರಿಗೆಗಳಿಂದ ಗ್ರಾಮಪಂಚಾಯತಿಗಳು ಹೆಚ್ಚು ಬಲಗೊಳ್ಳುತ್ತವೆ. ಆರ್ಥಿಕವಾಗಿ ಶಕ್ತಿಯುತವಾಗುತ್ತವೆ. ತಮಗೆ ಬೇಕಾದ ಕಾರ್ಯಕ್ರಮವನ್ನು ತಾವೇ ರೂಪಿಸಿಕೊಳ್ಳಲು ಅನುಕೂಲ ಮಾಡಬೇಕು ಎಂದು ಹೇಳಿದರು.

 

మరింత సమాచారం తెలుసుకోండి: