ವಿಜಯ್ ದೇವರಕಕೊಂಡ ಟಾಲಿವುಡ್‌ ಲೋಕದಲ್ಲಿ ಬಹುಬೇಡಿಕೆಯ ನಟ. ಅರ್ಜುನ್ ರೆಡ್ಡಿ ಚಿತ್ರದಿಂದ ಕುಲಾಯಿಸಿದ ಅದೃಷ್ಟ ಇತ್ತೀಚೆಗೆ ಬಿಡುಗಡೆ ಆದ ಡಿಯರ್ ಕಾಮ್ರೆಡ್ ಚಿತ್ರದ ತನಕವೂ ಮುಂದುವರೆದುಕೊಂಡು ಬಂದಿದೆ. ಹೌದು ವಿಜಯ್ ದೇವರಕೊಂಡ ಇದೀಗ ಡಿಯರ್ ಕಾಮ್ರೆಡ್ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಈ ಚಿತ್ರವನ್ನು ನೋಡಿ ಇಷ್ಟಪಟ್ಟಿರೋ ಕರಣ್ ಜೋಹರ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಹಾಗಾದರೆ ಹಿಂದಿಯಲ್ಲೂ ವಿಜಯ್ ದೇವರಕೊಂಡ ಅವರೇ ಅಭಿನಯಿಸುತ್ತಾರೆಯೇ ಎನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ.


ಹಿಂದಿ ರಿಮೇಕ್ ಮಾಡೋಕೆ ನಿರ್ದೇಶಕರಾದ ಕರಣ್ ಜೋಹರ್ ಅವರು ಖ್ಯಾತ ನಟ ವಿಜಯ್ ದೇವರಕೊಂಡ ಅವರಿಗೆ ಆಫರ್ ನೀಡಿದ್ದರು. ಆದರೆ ಈ ಆಫರ್‌ಗೆ ವಿಜಯ್ ದೇವರಕೊಂಡ ಅವರು ನೋ ಎಂದಿದ್ದಾರೆ. ಹೌದು 'ಮುಂಬೈ ಮಿರರ್' ಮಾಡಿರೋ ವರದಿಯ ಪ್ರಕಾರ, ವಿಜಯ್ ದೇವರಕೊಂಡ ಈ ಚಿತ್ರದ ಹಿಂದಿ ರಿಮೇಕ್‌ ನಲ್ಲಿ ನಟಿಸೋಕೆ ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.


ಅಷ್ಟಕ್ಕೂ ಕರಣ್ ಜೋಹರ್ ಅವರು ವಿಜಯ್ ದೇವರಕೊಂಡ ಅವರಿಗೆ ನೀಡಿದ ಆಫರ್ ಕೇಳಿದರೆ ನೀವು ಬೆರಗಾಗೋದು ಗ್ಯಾರಂಟಿ? ಈ ಆಫರ್ ಎಷ್ಟು ಗೊತ್ತಾ? 40 ಕೋಟಿ. ಬೇರೆ ಯಾವುದೇ ಸೌತ್ ಇಂಡಿಯಾದ ನಟ ಆಗಿದ್ದರೆ ಈ ಆಫರ್‌ ಅನ್ನು ಕಣ್ಮುಚ್ಚಿ ಒಪ್ಪಿಕೊಂಡು ಬಿಡುತ್ತಿದ್ದರು. ಆದರೆ, ವಿಜಯ್ ದೇವರಕೊಂಡ ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಅಷ್ಟೇ ಅಲ್ಲದೇ, ವಿಜಯ್ ದೇವರಕೊಂಡ ಅವರನ್ನು ಬಾಲಿವುಡ್‌ ಲೋಕದಲ್ಲಿ ಲಾಂಚ್ ಮಾಡಬೇಕು ಎಂದು ಕರಣ್ ಅವರ ಧರ್ಮ ಪ್ರೊಡಕ್ಷನ್ ಪ್ರಯತ್ನ ಪಡುತ್ತಿದ್ದರೂ ಇನ್ನೂ ಅದು ಸಾಧ್ಯವಾಗಿಲ್ಲ ಎನ್ನಬಹುದು.


ಅಷ್ಟಕ್ಕೂ ವಿಜಯ್ ದೇವರಕೊಂಡ ಈ ಆಫರ್ ತಿರಸ್ಕರಿಸೋಕೆ ಕಾರಣ ಆದರೂ ಏನು ಅನ್ನೋದನ್ನು ಅವರೇ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆ ಸಂದರ್ಶನದ ಪ್ರಕಾರ, ಒಂದೇ ಸಿನಿಮಾವನ್ನು ಮತ್ತೊಮ್ಮೆ ಮಾಡೋಕೆ ವಿಜಯ್ ದೇವರಕೊಂಡ ಅವರಿಗೆ ಸಾಧ್ಯವಿಲ್ಲವಂತೆ. ಅಲ್ಲದೇ ಅವರು ತಮ್ಮ ಭವಿಷ್ಯವನ್ನು ಬಾಲಿವುಡ್‌ನಲ್ಲಿ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.


మరింత సమాచారం తెలుసుకోండి: