ಕಳೆದ ಒಂದು ವಾರದಿಂದ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಮಳೆ ಆಗಿದೆ. ಅದರಲ್ಲೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ದಕ್ಚಿಣ ಕನ್ನಡದ ಭಾಗಗಳಲ್ಲಿ ಸುರಿದ ಮಳೆ ದೊಡ್ಡ ಮಟ್ಟದಲ್ಲಿ ಆತಂಕವನ್ನು ಸೃಷ್ಡಿಸಿದೆ. ಮಹಾಮಳೆಯಿಂದ ಆದ ಪ್ರವಾಹದಿಂದ ನಿರೀಕ್ಷೆಗೂ ಮೀರಿ ಹಾನಿ ಉಂಟಾಗಿದೆ. ಹೀಗಾಗಿ ಇದರ ವೀಕ್ಷಣೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಂದಿದ್ದರು. ಬೆಳಗಾವಿಗೆ ಆಗಮಿಸಿ ಪರಿಶೀಲನೆ ನಡೆಸಿದ ಅವರು ಹೇಳಿದ್ದೇನು ಅನ್ನೋದನ್ನು ನಿಮಗೆ ಡಿಟೇಲಾಗಿ ಹೇಳ್ತೀವಿ ನೋಡಿ.

ಶನಿವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರವಾಹ ಪೀಡಿತ ಬೆಳಗಾವಿ ಮತ್ತು ಬಾಗಲಕೋಟೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ನಂತರ ಅವರು ಬೆಳಗಾವಿಯ ಸಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಕಳೆದ ಕೆಲ ದಿನಗಳಿಂದ ಕರ್ನಾಟಕ ರಾಜ್ಯದ ಎಮಟಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಬಾಗಲಕೋಟ,ಧಾರವಾಡ ಮತ್ತು ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಇದನ್ನು ಯಾರೂ ಊಹೆ ಮಾಡಿರಲೇ ಇಲ್ಲ. ಇದಕ್ಕೆ ಶೀಘ್ರವೇ ಪರಿಹಾರ ಘೋಷಣೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು. 

ಮಲಪ್ರಭೆ ಮತ್ತು ಕೃಷ್ಣೆ ನದಿಗಳು ಉಕ್ಕಿ ಹರಿಯುತ್ತಿವೆ. ಇದೇ ಕಾರಣಕ್ಕೆ ಜಿಲ್ಲೆಯ ಅನೇಕ ಗ್ರಾಮಗಳು ಜಲಾವೃತವಾಗಿದೆ. ಅಷ್ಟೇ ಅಲ್ಲದೇ ಮಳೆಯ ಹೊಡೆತಕ್ಕೆ ರಸ್ತೆಯೂ ಕಿತ್ತುಕೊಂಡು ಹೋಗಿದೆ. ಹೀಗಾಗಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಹಾಳಾಗಿದ್ದು, ಬೆಳಗಾವಿ, ಬಾಗಲಕೋಟದಲ್ಲಿ ಹೆಚ್ಚಿನ ಹಾನಿಯಾಗಿದೆ ಎನ್ನಲಾಗಿದೆ.

ಈ ನೆರೆ ಸಮಸ್ಯೆಗೆ ಎಲ್ಲ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಅವರು ಪ್ರಶಂಸೆ ವ್ಯಕಕ್ತಪಡಿಸಿದರು. ಅಲ್ಲದೇ ಈ ಜಿಲ್ಲಾಧಿಕಾರಿಗಳಿ ಎನ್​ಡಿಆರ್​ಎಫ್​​ ಉತ್ತಮ ಸಾಥ್​ ನೀಡುತ್ತಿದ್ದಾರೆ ಎಂದು ಹೇಳಿದರು. ಈಗಾಗಲೇ ಕೆಲವು ಜಿಲ್ಲೆಗಳ ನೆರೆ ಪೀಡಿತ ಗ್ರಾಮಗಳ ನೆರೆಹಾವಳಿ ಬಗ್ಗೆ ಮಾಹಿತಿ ಬಂದಿದೆ. ಕೇಂದ್ರದೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿ ಮತ್ತೆ ದೆಹಲಿಯತ್ತ ಪ್ರಯಾಣ ಬೆಳೆಸಿದರು.


మరింత సమాచారం తెలుసుకోండి: