ಕೆಜಿಎಫ್, ಕನ್ನಡದ ಚಿತ್ರ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಪಾರ್ಟ್ 2 ಗಾಗಿ ಎದುರು ನೋಡುತ್ತಿರುವಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮೊನ್ ಮೊನ್ನೆ , 20 ವರ್ಷದ ನಂತರ ಕೆಜಿಎಫ್ ಸಿನಿಮಾಕ್ಕಾಗಿ ಮೈಸೂರು ಫ್ಲೈಟ್ ಹತ್ತಿದ್ರು ರವೀನಾ ಟಂಡನ್. ಆದ್ರೆ ಮೊನ್ನೆ ಬಂದವರು ಆಗ್ಲೇ ಮುಂಬೈ ಫ್ಲೈಟ್ ಹತ್ತಿದ್ದಾರಂತೆ. ಹೌದು, ಯಾಕೆಂದರೆ,,, ಮುಂದೆ ಓದಿ... 
 
ಕೆಜಿಎಫ್ ಚಾಪ್ಟರ್-2, ಭಾರತೀಯ ಸಿನಿ ಇತಿಹಾಸದಲ್ಲೇ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈಗಾಗಲೇ ಅಭಿಮಾನಿಗಳು ಸಾವಿರ ಕಣ್ಣುಗಳಿಂದ ಎದುರು ನೋಡುತ್ತಿದ್ದಾರೆ. ಆದ್ದರಿಂದಲೇ ಪ್ರಸ್ತುತ ಚಾಪ್ಟರ್ 2 ಅತಿ ಜಾಗರೂಕತೆಯಿಂದ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್​. ಆದ್ರೂ ಆವಾಗೊಂದು ಇವಾಗೊಂದು ಸಣ್ಣ ಪುಟ್ಟ ಸ್ವೀಟ್ ಆಂಡ್ ಸ್ಪೈಸಿ ನ್ಯೂಸ್​​​ ಕೊಡುತ್ತಾ ಬಂದಿದೆ ಹೊಂಬಾಳೆ ಫಿಲ್ಸ್ಂ​. ಈಗ ಅದರಂತೆ ಕೆಜಿಎಫ್ ಬಳಗದಿಂದ ಹೊಸದೊಂದು ಸಮಾಚಾರ ಹೊರಬಂದಿದೆ. ಅದುವೆ ಕೆಜಿಎಫ್ ಸಿನಿಮಾದ ಪ್ರಧಾನಿ ರಮಿಕಾ ಸೇನ್​​​ ಪಾತ್ರಧಾರಿಯ ವಿಚಾರ.
 
ರಮೀಕಾ ಸೇನ್ ಅನ್ನೋ ಪಾತ್ರವನ್ನು ಕೆಜಿಎಫ್ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಸೃಷ್ಟಿಸಿದ್ದಾರೆ. ಮೊದಲ ಭಾಗದಲ್ಲಿ ಅಷ್ಟಾಗಿ ಆ ಪಾತ್ರ ಕಾಣಿಸದಿದ್ರು ಎರಡನೇ ಭಾಗದಲ್ಲಿ ಸ್ಪಷ್ಟವಾಗಿ ರಮಿಕಾ ಸೇನ್ ಪಾತ್ರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿಯೇ ಬಾಲಿವುಡ್ ​​​ನ ಬೆಡಗಿ ರವೀನಾ ಟಂಡನ್ ಬಾಂಬೆಯಿಂದ ಮೈಸೂರಿನ ತನಕ ಬಂದಿದ್ದಾರೆ. ಆದ್ರೆ ಬಂದಷ್ಟೇ ವೇಗವಾಗಿ ವಾಪಸ್ ಮುಂಬೈಗೆ ಹಾರಿದ್ದಾರೆ ರವೀನಾ. ರಮಿಕಾ ಸೇನ್ ಪಾತ್ರಕ್ಕಾಗಿ ಕೆಜಿಎಫ್ ಸಿನಿಮಾ ತಂಡದ ಬುಲಾವಿನ ಮೇರೆಗೆ 20 ವರ್ಷದ ನಂತರ ಸ್ಯಾಂಡಲ್ ​ವುಡ್​​ಗೆ ಬಲಗಾಲಿಟ್ಟಿದ್ರು ರವೀನಾ ಟಂಡನ್​. ಮೊನ್ ಮೊನ್ನೆ ಶೂಟಿಂಗ್​​ಗಾಗಿ ಕೆಜಿಎಫ್​ಗೆ ಬಂದವರು ಈಗ ವಾಪಸ್ ಹೊರಟ್ಟಿದ್ದಾರೆ. ಅದೂ ತನ್ನ ಭಾಗದ ಪೂರ್ತಿ ಕೆಲಸ ಮುಗಿಸಿಕೊಂಡು. 
 
ಕೆಜಿಎಫ್ ಸಿನಿಮಾದ ಶೂಟಿಂಗ್ ಮುಗಿದಿರುವ ಬಗ್ಗೆ ಮತ್ತು ಶೂಟಿಂಗ್ ಅನುಭವದ ಬಗ್ಗೆ ಇನ್​​ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ರವೀನಾ ಟಂಡನ್. ಕೆಜಿಎಫ್ ಚಾಪ್ಟರ್​-2 ಸಿನಿಮಾ ಶೂಟಿಂಗ್​ ಪ್ರಗತಿಯಲ್ಲಿದ್ದು, ಅದಷ್ಟು ಏಪ್ರಿಲ್ ಅಥವಾ ಮೇ ಹೊತ್ತಿಗೆ ತೆರೆಗಪ್ಪಳಿಸಲಿದೆ.

మరింత సమాచారం తెలుసుకోండి: