ನವದೆಹಲಿ: ಚಂದ್ರಯಾನ-2 ಮೂಲಕ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ್ದು ಇಸ್ರೋ. ಇದೇ ಇಸ್ರೋದ ಅಧ್ಯಕ್ಷ ಡಾ.ಕೆ ಶಿವನ್  ಇದೀಗ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಅದೇನೆಂದರೆ, ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-2 ಉದ್ದೇಶಗಳು ಶೇ.98ರಷ್ಟು ಈಡೇರುವ ಮೂಲಕ ಯೋಜನೆ ಬಹುಪಾಲು ಯಶಸ್ವಿಯಾಗಿದೆ ಎಂದಿದ್ದಾರೆ. ಆದರೆ, ಲ್ಯಾಂಡರ್​ ವಿಕ್ರಂ ಸಾಫ್ಟ್​ ಲ್ಯಾಂಡಿಂಗ್​ನಲ್ಲಿ ನಾವು ವಿಫಲರಾಗಿದ್ದೇವೆ. ಸಂಪರ್ಕ ಕಡಿತಗೊಂಡ ಲ್ಯಾಂಡರ್​ ವಿಕ್ರಂ ಮರುಸಂಪರ್ಕ ಇನ್ನು ಅಸಾಧ್ಯವಾಗದೆ ಇರಬಹುದು ಎಂದು ಅವರು ಇದೇ ವೇಳೆ ತಿಳಿಸಿದರು.


ಆದರೆ ಇದೀಗ ಇದಕ್ಕೊಂದು ವಿಘ್ನ ಎದುರಾಗಿದೆ. ಅದೇನೆಂದರೆ ಲ್ಯಾಂಡರ್ ವಿಕ್ರಂ ಇಳಿದಿರುವ ಸ್ಥಳದಲ್ಲಿ ಇನ್ನು ಮುಂದೆ ಸೂರ್ಯ ಬೆಳಕು ಬೀಳದೆ, ಸಂಪೂರ್ಣ ಕತ್ತಲು ಆವರಿಸಲಿದೆ. ಲ್ಯಾಂಡರ್​ ವಿಕ್ರಂ ಸಂಪೂರ್ಣ ಸೌರಶಕ್ತಿ ಬಳಸಿಕೊಂಡು ಕಾರ್ಯನಿರ್ವಹಿಸುವಂತಹದ್ದು, ಸೂರ್ಯನ ಬೆಳಕು ಬೀಳದ ಕಾರಣ ಲ್ಯಾಂಡರ್ ವಿಕ್ರಂ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಚಂದ್ರಯಾನ-2ರ ಉದ್ದೇಶಿತ 14 ದಿನದೊಳಗೆ ವಿಕ್ರಂ ಸಂಪರ್ಕ ಸಾಧಿಸಬೇಕಿತ್ತು. ಅಂದರೆ ಲ್ಯಾಂಡರ್ ವಿಕ್ರಂ ಚಂದ್ರನ ಅಂಗಳ ತಲುಪಿದ ಸೆ.7ರಂದು ಇಂದಿನವರೆಗೆ ಮಾತ್ರ ವಿಕ್ರಂ ಇಳಿದಿರುವ ಸ್ಥಳದಲ್ಲಿ ಸೂರ್ಯನ ಬೆಳಕಿತ್ತು. ಆದರೆ, ಇಂದಿನಿಂದ 14 ದಿನಗಳ ಕಾಲ ಆ ಭಾಗದಲ್ಲಿ ಕತ್ತಲು ಇರಲಿದೆ. 


ಭೂಮಿಯ ಭ್ರಮಣೆ ಮತ್ತು ಚಂದ್ರನ ಪರಿಭ್ರಮಣೆ ಸಮಕಾಲೀನವಾಗಿರುವುದರಿಂದ ವರ್ಷದ ಎಲ್ಲ ದಿನಗಳೂ ಎಲ್ಲ ಕಾಲದಲ್ಲೂ ಚಂದ್ರನ ಒಂದು ಮುಖ ಮಾತ್ರ ಭೂಮಿಗೆ ಗೋಚರವಾಗುತ್ತದೆ. ಅಂದರೆ ಚಂದ್ರ ನಮಗೆ ಕಾಣುವುದು ಅರ್ಧ ಭಾಗ ಮಾತ್ರ. ಶೇ56ರಷ್ಟು. ಉಳಿದರ್ಧ ಭಾಗ ಯಾವಾಗಲೂ ಭೂಮಿಗೆ ವಿರುದ್ಧ ದಿಕ್ಕಿನಲ್ಲೇ ಇರುತ್ತದೆ. ಭೂಮಿಯಿಂದ ಕಾಣುವ ಚಂದ್ರನ ಮುಖವನ್ನು ಮುಮ್ಮುಖವೆಂದು, ವಿರುದ್ಧ ದಿಕ್ಕಿನ ಭಾಗವನ್ನು ಹಿಮ್ಮುಖವೆಂದು ಕರೆಯುತ್ತಾರೆ. ಹುಣ್ಣಿಮೆಯ ದಿನ ಕಾಣುವ ಚಂದ್ರನ ಕಾಣದ ಮುಖದಲ್ಲಿ ಅಮಾವಾಸ್ಯೆಯಾಗಿರುತ್ತದೆ. ಅಮಾವಾಸ್ಯೆಯ ದಿನ ಕಾಣದ ಮುಖದಲ್ಲಿ ಹುಣ್ಣಿಮೆ ಇರುತ್ತದೆ. ಇದೀಗ ಲ್ಯಾಂಡರ್​ ವಿಕ್ರಂ ಬಿದ್ದಿರುವ ಪ್ರದೇಶದಲ್ಲಿ ನಾಳೆಯಿಂದ ಕತ್ತಲು ಆವರಿಸಲಿದೆ. ಹೀಗಾಗಿ ಲ್ಯಾಂಡರ್​ ಸಂಪರ್ಕಕ ಕನಸನ್ನು ಎಲ್ಲರೂ ಬಿಡಬೇಕಾಗಿದೆ


మరింత సమాచారం తెలుసుకోండి: