ಭಾರತದ ಲಡಾಕ್ ನ ಗಲ್ವಾನ ಗಡಿಯಲ್ಲಿ ಪದೇ ಪದೆ ಕ್ಯಾತೆ ತೆಗೆದು ದಾಳಿ ಮಾಡುತ್ತಿದ್ದ ಚೀನಾಕ್ಕೆ ಪ್ರಧಾನಿ ಮೋದಿ ಸರಿಯಾದ ಉತ್ತರವನ್ನು ನೀಡಿದ್ಧಾರೆ. ಭಾರತದ್ಲಿ ಬಳಕೆಯಲ್ಲಿದ್ದ ಚೀನೀ ಆಫ್ ಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಅಷ್ಟಕ್ಕ ಕೇಂದ್ರ ಸರ್ಕಾರ ರದ್ದು ಪಡಿಸಿದ ಚೀನಿ ಆಪ್ ಗಳು ಯಾವುವು ಗೊತ್ತಾ..?
ಗಡಿಯಲ್ಲಿ ಕಾಲ್ಕೆರೆದು ಕಿರಿಕ್ ಮಾಡುತ್ತಿದ್ದ ನರಿ ಬುದ್ದಿಯ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಸೈಲೆಂಟಾಗಿ ಹೊಡೆತಕೊಟ್ಟಿದ್ದು ಟಿಕ್ ಟಾಕ್ ಸೇರಿ ಚೀನಾ ಮೂಲಕ 59 ಆಪ್ ಗಳನ್ನು ಭಾರದಲ್ಲಿ ಬ್ಯಾನ್ ಮಾಡಿದೆ. ಲಡಾಖ್ ಗಡಿಯಲ್ಲಿ ಚೀನಾ ಯೋಧರಿಂದ ಸಂಘರ್ಷ ಉಂಟಾದ ನಂತರದಲ್ಲಿ ಚೀನಾಗೆ ಸರಿಯಾಗೇ ಬಿಸಿ ಮುಟ್ಟಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದ್ದು, ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ ಗಳನ್ನು ಬ್ಯಾನ್ ಮಾಡಲಾಗಿದೆ.
ಜನಪ್ರಿಯವಾಗಿರುವ ಟಿಕ್‌ಟಾಕ್ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿದ್ದು, ಚೀನಾ ಮತ್ತು ಯುಎಸ್ ನಂತರದ ಸ್ಥಾನದಲ್ಲಿದೆ. 2020 ರ ಮೊದಲ ತ್ರೈಮಾಸಿಕದಲ್ಲಿ 1.5 ಬಿಲಿಯನ್ ಗಡಿ ದಾಟಿದ ಕೂಡಲೇ ಟಿಕ್‌ಟಾಕ್ 2 ಬಿಲಿಯನ್ ಗಡಿ ದಾಟಿದೆ. 2 ಬಿಲಿಯನ್‌ಗಳಲ್ಲಿ, ಭಾರತವು 611 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿರುವ ಅತಿದೊಡ್ಡ ಹಿಂಬಾಲಕರನ್ನು ಹೊಂದಿದೆ.
ಕಳೆದ ಕೆಲದಿನಗಳಿಂದ ಭಾರತದಲ್ಲಿ ಚೀನಾ ಪ್ರಾಡಕ್ಟ್‌ಗಳನ್ನ ಬಹಿಷ್ಕರಿಸಿ, ಚೀನಿ ಆಪ್‌ಗಳನ್ನ ಆನ್‌ಇನ್‌ಸ್ಟಾಲ್ ಮಾಡಿ ಅಭಿಯಾನ ಜೊರಾಗಿಯೇ ನಡೆಯುತ್ತಿದೆ. ಇದರ ಪರಿಣಾಮವಾಗಿ ಈಗಾಗಲೇ ಹಲವು ಆಪ್‌ಗಳು, ಹಲವು ಪ್ರಾಡಕ್ಟ್‌ಗಳನ್ನ ಬಾಯ್ಕಾಟ್ ಮಾಡಲಾಗುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳಲ್ಲಿರುವ ಚೀನಿ ಆಪ್‌ಗಳನ್ನ ಅನ್‌ಇನ್‌ಸ್ಟಾಲ್ ಮಾಡುತ್ತಿರುವುದರ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ.
ಇನ್ನು ಬ್ಯಾನ್ ಮಾಡಲಾದ ಚೀನೀ ಆಪ್ ಗಳೆಂದರೆ ಬ್ಯಾನ್ ಮಾಡಲಾದ ಆಫ್ಗಳೆಂದರೆ ಟಿಕ್ ಟಾಕ್ ಜೊತೆಗೆ ಶೇರ್ ಇಟ್, ಯುಸಿ ಬ್ರೌಸರ್, ಯು ಕ್ಯಾನ್, ಹೆಲೋ, ವಿಡಿಯೋ ಕಾಲ್, ಡಿಯು ಕ್ಲೀನರ್, ಡಿಯು ಬ್ರೌಸರ್, ಕ್ಯಾಮ್ ಸ್ಕ್ಯಾನರ್, ಕ್ಲೀನ್ ಮಾಸ್ಟರ್, ವಂಡರ್ ಕ್ಯಾಮೆರಾ, ಫೋಟೋ ವಂಡರ್, ಕ್ಯೂಕ್ಯೂ ಪ್ಲೇಯರ್, ವಿಡ್ಮೇಟ್, ಸ್ವೀಟ್ ಸೆಲ್ಫಿ, ಬೈದು ಟ್ರಾನ್ಸ್ಲೇಟ್, ವಿಮೇಟ್, ಯೂಟ್ಯೂಬ್ ಇಂಟರ್ನ್ಯಾಷನಲ್, ಯೂಟ್ಯೂಬ್ ಸೆಕ್ಯೂರಿಟಿ, ಮೊಬೈಲ್ ಲೆಜೆಂಡ್ಸ್, ಕ್ಸೆಂಡರ್, ವೈರಸ್ ಕ್ಲೀನರ್, ಕಲ್ಬ್ ಫ್ಯಾಕ್ಟರಿ, ಕ್ಲೀನ್ ಮಾಸ್ಟರ್, ಪ್ಯಾರಲಲ್ ಸ್ಪೇಸ್ ಸೇರಿದಂತೆ 59 ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ
click and follow Indiaherald WhatsApp channel