ಬೆಂಗಳೂರು: ಜೈಲಿನಿಂದ ಜಾಮೀನು ಪಡೆದ ಡಿ. ಕೆ ಶಿವಕುಮಾರ್ ಕನಕಪುರ ಮೆಡಿಕಲ್ ಕಾಲೇಜ್ ಆಗಿಯೇ ತಿರುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ.ಇಂತಹ ​​ ಬೆದರಿಕೆಗೆ ನಾವು ಹೆದರಬಾರದು ಎಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಅಶ್ವಥ್​​ ನಾರಾಯಣ್​​ ಖಡಕ್ಕಾಗಿಯೇ ಹೇಳಿದ್ದಾರೆ. "ಡಿಕೆಶಿ ಬೆದರಿಕೆಗೆ ಯಾರು ಬಗ್ಗಬಾರದು. ಯಾವುದೇ ಬೆದರಿಕೆಗೂ ಬಗ್ಗದೇ ಡೋಂಟ್ ಕೇರ್ ಎನ್ನುವ ಮನೋಭಾವ ಇರಿಸಿಕೊಳ್ಳೋಣ" ಎಂದು ತಿಳಿಸಿದ್ದಾರೆ. 


"ಯಾವುದೇ ಕಾರಣಕ್ಕೂ ಕನಕಪುರಕ್ಕೆ ಮೆಡಿಕಲ್ ಕಾಲೇಜು ಕೊಡಬಾರದು. ನಿಯಾಮವಳಿ ಪ್ರಕಾರ ತಾಲ್ಲೂಕಿಗೊಂದು ಮೆಡಿಕಲ್ ಕಾಲೇಜು ಕೊಡುವಂತಿಲ್ಲ. ಡಿಕೆಶಿ ಏನೇ ಬೆದರಿಕೆ ಹಾಕಲಿ, ಉಪವಾಸ ಕೂರಲಿ, ನಾವ್ ಕೇರ್ ಮಾಡಬಾರದು. ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರದಲ್ಲಿ ನಾವು ಹಿಂದೆ ಸರಿಯಲೇಬಾರದು" ಎಂದು ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಅಶ್ವಥ್​​ ನಾರಾಯಣ್​​ ಹೇಳಿದ್ಧಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಸಂಪುಟ ಒಗ್ಗಟ್ಟು ಪ್ರದರ್ಶನ ಮಾಡುವ ತೀರ್ಮಾನಕ್ಕೆ ಬಂದಿರುವಂತೆ ಕಂಡುಬಂದಿತು.


ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಡಾ.ಸಿ.ಎನ್.ಅಶ್ವತ್ ನಾರಾಯಣ್​​ ಪ್ರಸ್ತಾಪಿಸಿದ ಈ ವಿಷಯಕ್ಕೆ ಎಲ್ಲಾ ಮಂತ್ರಿಗಳು ಸಹಮತ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಬೆದರಿಕೆಗೆ ಕೇರ್​ ಮಾಡಬೇಡಿ ಎಂದು ಸಚಿವರು ಸಿಎಂ ಬಿ.ಎಸ್​​ ಯಡಿಯೂರಪ್ಪ ಅವರಿಗೂ ಮನವಿ ಮಾಡಿದ್ದಾರೆ. ಈ ವೇಳೆ ತಾನು ಸಚಿವ ಸಂಪುಟ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಸಿಎಂ ಮಾತು ನೀಡಿದ್ದಾರೆನ್ನಲಾಗಿದೆ.


ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಈಗ ದೊಡ್ಡಬಳ್ಳಾಪುರದ ಪಾಲಾಗಿದೆ. ಅನರ್ಹ ಶಾಸಕ ಡಾ. ಸುಧಾಕರ್​​ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಕೊನೆಗೂ ಕನಕಪುರ ಮೆಡಿಕಲ್ ಕಾಲೇಜು ದೊಡ್ಡಬಳ್ಳಾಪುರಕ್ಕೆ ಶಿಫ್ಟ್​​​ ಮಾಡಿದೆ. ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೆ ಈಗಾಗಲೇ ಚಿಕ್ಕಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪಿಸುವ ಬಗ್ಗೆ ಸರ್ಕಾರದಿಂದ ತೀರ್ಮಾನ ಆಗಿದೆ.ನೀವು ಏನು ಚಿಂತೆ ಮಾಡಬೇಡಿ, ನಿಮ್ಮ ಕ್ಷೇತ್ರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣ ಆಗಲಿದೆ. ಇದಕ್ಕೆ ಸರ್ಕಾರ ಬದ್ದವಿದೆ ಎಂದು ಸಿಎಂ ಯಡಿಯೂರಪ್ಪ ಅನರ್ಹ ಶಾಸಕ ಸುಧಾಕರ್​​ಗೆ ಭರವಸೆ ನೀಡಿದ್ದರು.


మరింత సమాచారం తెలుసుకోండి: