ಹಾವೇರಿ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಅವರು ಇತ್ತೀಚೆಗಷ್ಟೇ ನಂಬರ್ ಗೇಮ್ ನಿಂದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಅದಕ್ಕೆ ನೇರೆ  ಕಾರಣವಾದವರಲ್ಲಿ ಬಿ ಸಿ ಪಾಟೀಲ್ ಸಹ ಒಬ್ಬರು. ಇದೀಗ ಅವರೇ ಹೇಳಿದಂತೆ  ಕುಮಾರಸ್ವಾಮಿ ಎರಡು ಸಾರಿ ಮುಖ್ಯಮಂತ್ರಿ ಆಗಬೇಕಾದರೆ ಅವರೇ ಶಾಸಕನಾಗಿ ಸಹಿ ಹಾಕಿದ್ದರಂತೆ. ಈ ಹೇಳಿಕೆಯ ಒಳ ಮರ್ಮವೇನು? ನೀವೆ ಓದಿ. 


ಹಿರೇಕೆರೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ ಸಿ ಪಾಟೀಲ ಹಗುರವಾಗಿ ಮಾತನಾಡಬಾರದು, ನೈತಿಕತೆ ಇಲ್ಲಾ ಅವರಿಗೆ ಎನ್ನುವ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.  ಬಿ.ಸಿ ಪಾಟೀಲಗೆ ನೈತಿಕ ಹಕ್ಕಿಲ್ಲವೇ. ನಾವು ಅನೈತಿಕತೆ ಮಾಡಿದ್ದೇವಾ..? ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ಈ ಮೂಲಕ ಕುಮಾರ ಸ್ವಾಮಿ ಅವರ ಮೇಲಿದ್ದ ಆಕ್ರೋಶ ವನ್ನು ಹೊರ ಹಾಕಿದ್ದಾರೆ.


ನಾವು ನೈತಿಕತೆ ಕಳೆದುಕೊಂಡಿಲ್ಲಾ , ಯಾಕೆ ಹಾಗೇ ಮಾತನಾಡುತ್ತಾರೋ ಗೊತ್ತಾಗ್ತಿಲ್ಲಾ. ನಂತರ ಮುಂಬೈಗೆ ಹೋದಾಗ ಕುಮಾರಸ್ವಾಮಿ ಕಾಲ್ ಮಾಡಿದ್ದರು ಎಂಬ ಆರೋಪ ಕುಮಾರಸ್ವಾಮಿ ನಿರಾಕರಣೆ ಹಿನ್ನೆಲೆ ತಿಳಿಸಿದ ಅವರು,   ಅವರ ಪಿಎಯಿಂದ ಬಂದಿರೋದು ರೆಕಾರ್ಡ್ ಇದೆ. ಸುಮ್ಮನೇ ಮಾತ್ನಾಡುತ್ತಾರೆ ಎಂದರು. ಅವರ ಕುರಿತು ಡೀಟೇಲಾಗಿ ಎಕ್ಸ್ಪೈನ್ ಮಾಡಿದ್ದಾರೆ. 


ರಾಜಕೀಯದಲ್ಲಿ ಸ್ನೇಹಿತರು. ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ. ಮುಖ್ಯಮಂತ್ರಿ ಆಗಿದ್ದವರು, ಸ್ನೇಹಿತರಲ್ಲಾ ಅನ್ನೋಕಾಗಲ್ಲಾ. ರಾಜಕೀಯ ಬೇರೆ, ಸ್ಬೇಹಿತರೆ ಬೇರೆ. ಅಪಾದನೆ ಮಾಡಿದಾಗ ಉತ್ತರ ಸರಿ ಅಲ್ಲಾ ಅನ್ಮೋದು ನನ್ನ ಹಕ್ಕು. ನಾವು ಯಾವ ಪಕ್ಷಕ್ಕೂ ಹೋಗಲ್ಲಾ ಸ್ವತಂತ್ರ ರಾಗಿದ್ದೇವೆ. ಕಾಂಗ್ರೆಸ್ ನಿಂದ ನಮ್ಮನ್ನು ಉಚ್ಛಾಟನೆ ಮಾಡಿದ್ದಾರೆ. ಇದೀಗ ಬಣಕಾರ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರ ನ್ನಾಗಿ ಮಾಡಿದ್ದಾರೆ. ಹೀಗಾಗಿ ಅವರಿಗೂ ತಾಲೂಕಿನ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸನ್ಮಾನ ಇಟ್ಟುಕೊಂಡಿದ್ದೇವೆ ಎಂದ ಬಿ. ಸಿ ಪಾಟೀಲ ತಿಳಿಸಿದರು. ಒಟ್ಟಿನಲ್ಲಿ ಈ ಹಿಂದಿನ ಸರ್ಕಾರವು ದ್ದಾಗ ರಾಜೀನಾಮೆ ನೀಡಿದ ಶಾಸಕರೆಲ್ಲಾ ತಮ್ಮ ಅತೃಪ್ತಿಯನ್ನು  ಹೊರಹಾಕುತ್ತಿದ್ದು, ದೋಸ್ತಿ ವಿರುದ್ದ ಗುಡುಗುತಿದ್ದಾರೆ.


మరింత సమాచారం తెలుసుకోండి: