ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದರೂ ಸಹ ವಿಜಯನಗರ ಕ್ಷೇತ್ರದ ಮೇಲೆ ಇದೀಗ ಹದ್ದಿನ ಕಣ್ಣನ್ನು ಇಡಲಾಗಿದೆ. ಮಾಜಿ ಶಾಸಕ ಆನಂದ್ ಸಿಂಗ್ ರ ಈ ಕ್ಷೇತ್ರದಲ್ಲಿ ಏನ್ ನಡೀತಿದೆ ಗೊತ್ತಾ!? ಈ ಸ್ಪೆಷಲ್ ಮಾಹಿತಿಯನ್ನು ನೀವು ಮಿಸ್ ಮಾಡಿಕೊಳ್ಳಲೇಬಾರದು. 
 
ವೈಭವದ ವಿಜಯನಗರ ಸಾಮ್ರಾಜ್ಯದ ಹೊಸಪೇಟೆಯಲ್ಲೀಗ ಅನರ್ಹ ಶಾಸಕ ಆನಂದ್ ಸಿಂಗ್ ಅವರ ಮಗನ ಮದುವೆ ನಡೆಯುತ್ತಿದೆ. ಆದರೆ ಪುತ್ರನ ವಿವಾಹಕ್ಕೆ ಕೇಂದ್ರ ಚುನಾವಣಾ ಆಯೋಗ ಕೆಲ ಷರತ್ತು ವಿಧಿಸಿ ಅನುಮತಿ ನೀಡಿದೆ. ಮದುವೆ ಸಂದರ್ಭ ಮತದಾರರನ್ನು ಓಲೈಸುವಂತಿಲ್ಲ. ನಿಗದಿಗಿಂತ ಹೆಚ್ಚು ಜನರನ್ನು ಸೇರಿಸುವ ಹಾಗಿಲ್ಲ ಎಂಬ ನಿಬಂಧನೆ ಹಾಕಿದೆ.
 
ಡಿಸೆಂಬರ್.5ಕ್ಕೆ ವಿಜಯನಗರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಮದುವೆ ನೆಪದಲ್ಲಿ ಮತದಾರರನ್ನು ಸೆಳೆಯುವ ಸಾಧ್ಯತೆ ಇದೆ. ಹಾಗಾಗಿ ಕಾರ್ಯಕ್ರಮಕ್ಕೆ ತಡೆ ನೀಡಬೇಕೆಂದು ಕಾಂಗ್ರೆಸ್ ನಾಯಕರು ಆಯೋಗದ ಮೇಲೆ ಒತ್ತಡ ಹೇರಿದ್ದರು. ಮಗನ ಮದುವೆಗೆ ಅನುಮತಿ ನೀಡುವಂತೆ ಕೋರಿ ಆನಂದ್ ಸಿಂಗ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಮದುವೆಗೆ 12ರಿಂದ 15 ಸಾವಿರ ಜನರಿಗೆ ಆಹ್ವಾನ ನೀಡಿದ್ದು, ಇದಕ್ಕೆ ಅವಕಾಶ ಕೊಡಬೇಕು ಎಂದು ಕೋರಿದ್ದರು. ಈ ಕೋರಿಕೆ ಮನ್ನಿಸಿರುವ ಆಯೋಗ, ವಿವಾಹ ಸಮಾರಂಭದ ಮೇಲೆ ಜಿಲ್ಲಾ ಆಡಳಿತ ಹಾಗೂ ಆದಾಯ ತೆರಿಗೆ ಇಲಾಖೆಗಳು ಕಣ್ಗಾವಲಿರಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
 
ಮದುವೆ ಮಾಡಬಾರದೆಂದು ನೀತಿಸಂಹಿತೆಯಲ್ಲಿ ಹೇಳಿಲ್ಲ. ಆದರೆ, ಆಮಿಷವೊಡ್ಡಿ ಮತಯಾಚನೆ ಮಾಡಬಾರದು. ವೀಕ್ಷಣೆಗಾಗಿ 12 ತಂಡ ರಚಿಸಲಾಗಿದೆ ಎಂದು ಚುನಾವಣಾಧಿಕಾರಿ ಶೇಕ್ ತನ್ವೀರ್ ಆಸೀಫ್ ಹೇಳಿದ್ದಾರೆ. 
 
ಷರತ್ತುಗಳೇನು ಗೊತ್ತಾ!? 
* ವಿವಾಹ ಸಮಾರಂಭದ ಖರ್ಚು-ವೆಚ್ಚಗಳ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ
* ಜಿಲ್ಲಾ ಆಡಳಿತದಿಂದ ಮದುವೆ ಸಮಾರಂಭದ ವಿಡಿಯೋ ಚಿತ್ರೀಕರಣ
* ಆಯೋಗ ಅನುಮತಿ ನೀಡಿರುವ ಸಂಖ್ಯೆಗಿಂತ ಹೆಚ್ಚು ಜನರನ್ನು ಆಹ್ವಾನಿಸುವಂತಿಲ್ಲ
* ವೇದಿಕೆ ಮತ್ತು ಆವರಣದಲ್ಲಿ ಯಾವುದೇ ಚುನಾವಣಾ ಪ್ರಚಾರ ಸಾಮಗ್ರಿ ಅಳವಡಿಸುವಂತಿಲ್ಲ
* ಬ್ಯಾನರ್, ಬಂಟಿಂಗ್ಸ್, ಪ್ಲೆಕ್ಸ್ ಕಟ್ಟುವಂತಿಲ್ಲ, ಚುನಾವಣಾ ಭಾಷಣ ಮಾಡುವಂತಿಲ್ಲ.

మరింత సమాచారం తెలుసుకోండి: