ಮೈಸೂರು: ಈ ವ್ಯಕ್ತಿಯ ಪಂದ್ಯದ ಕೊನೆಯ ಹೊಡಿ ಬಡಿ ಆಟದಿಂದ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶ ನಡುವಣ ರಣಜಿ ಟ್ರೋಫಿ ಪಂದ್ಯದಲ್ಲಿ ರಾಜ್ಯವು ಸೋಲಿನಿಂದ ಪಾರಾಗಿದ್ದು, ಡ್ರಾ ನಲ್ಲಿ ಅಂತ್ಯಗೊಂಡಿದೆ. ಆದರೂ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ಕರ್ನಾಟಕ ಕೇವಲ ಒಂದು ಅಂಕಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಾಯಿತು. 
 
 ಶ್ರೀಕಂಠದತ್ತ ನರಸಿಂಹ ರಾಜ ವಡೆಯರ್ ಮೈದಾನದಲ್ಲಿ ನಡೆದ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶ ನಡುವಣ ರಣಜಿ ಟ್ರೋಫಿ ಪಂದ್ಯವು 'ಡ್ರಾ' ಫಲಿತಾಂಶದಲ್ಲಿ ಅಂತ್ಯಗೊಂಡಿತು. ಆದರೂ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆಗೊಳಗಾಗಿರುವ ಕರುಣ್ ನಾಯರ್ ಪಡೆ ಕೇವಲ ಒಂದು ಅಂಕಕ್ಕೆ ಮಾತ್ರ ತೃಪ್ತಿಪಟ್ಟುಕೊಂಡಿದೆ. 191/3 ಎಂಬಲ್ಲಿದ್ದ ನಾಲ್ಕನೇ ಹಾಗೂ ಕೊನೆಯ ದಿನದಾಟ ಮುಂದುವರಿಸಿದ ಕರ್ನಾಟಕಕ್ಕೆ ದೇವದತ್ ಪಡಿಕ್ಕಲ್(99) ಹಾಗೂ ನಾಯಕ ಕರುಣ್ ನಾಯರ್(64) ಆಸರೆಯಾದರು.
 
ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 152ರನ್‌ಗಳ ಅಮೂಲ್ಯ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.
ಈ ಮಧ್ಯೆ ಕೇವಲ ಒಂದು ರನ್ ಅಂತರದಿಂದ ಪಡಿಕ್ಕಲ್ ಶತಕವನ್ನು ಮಿಸ್ ಮಾಡಿದರು. 201ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಎಂಟು ಬೌಂಡರಿಗಳಿಂದ 99ರನ್ ಗಳಿಸಿದರು. ಇನ್ನೊಂದೆಡೆ 160ಎಸೆತಗಳನ್ನು ಎದುರಿಸಿದ ನಾಯರ್ ನಾಲ್ಕು ಬೌಂಡರಿಗಳಿಂದ 64ರನ್ ಗಳಿಸಿದರು. ಬಳಿಕ ಹಿಮಾಚಲ ಡ್ರಾ ಮಾಡಿಕೊಂಡಿತು. ಇದರೊಂದಿಗೆ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಎರಡು ಡ್ರಾ ಫಲಿತಾಂಶ ದಾಖಲಿಸಿರುವ ಕರ್ನಾಟಕ ಒಟ್ಟು 10ಅಂಕಗಳನ್ನು ಪಡೆದಿದೆ.
 
ಸಂಕ್ಷಿಪ್ತ ಸ್ಕೋರ್:-
ಕರ್ನಾಟಕ ಮೊದಲ ಇನ್ನಿಂಗ್ಸ್ 166ಕ್ಕೆ ಆಲೌಟ್
(ಕರುಣ್ ನಾಯರ್ 81, ಕನ್ವರ್ ಅಭಿನಯ್ ಸಿಂಗ್ 37/5)
ಹಿಮಾಚಲ ಪ್ರದೇಶ ಮೊದಲ ಇನ್ನಿಂಗ್ಸ್ 280ಕ್ಕೆ ಆಲೌಟ್
(ರಿಷಿ ಧವನ್ 93, ಪ್ರಿಯಾಂಷು ಖಂಡೂರಿ 69, ವಿ ಕೌಶಿಕ್ 59/4)
ಕರ್ನಾಟಕ ದ್ವಿತೀಯ ಇನ್ನಿಂಗ್ಸ್ 296ಕ್ಕೆ ಆಲೌಟ್
(ದೇವದತ್ ಪಡಿಕ್ಕಲ್ 99, ಕರುಣ್ ನಾಯರ್ 64, ರಿಷಿ ಧವನ್ 83/5)
ಹಿ.ಪ್ರದೇಶ ದ್ವಿತೀಯ ಇನ್ನಿಂಗ್ಸ್ 34/2
(ಪ್ರಶಾಂತ್ ಚೋಪ್ರಾ 12*, ವಿ ಕೌಶಿಕ್ 13/2)
ಪಂದ್ಯಶ್ರೇಷ್ಠ: ರಿಷಿ ಧವನ್.

మరింత సమాచారం తెలుసుకోండి: