ಹಾಸನ: ರಾಜ್ಯದಲ್ಲಿ ಸೋಮವಾರ ಯಾರು ಊಹಿಸದ ಘಟನೆಯೊಂದು ನಡೆದೇ ಹೋಯಿತು. ಹೌದು, ಅದೇನೆಂದರೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ. ಇದರಿಂದ ತುಂಬಾ ಅಪಾಯಕಾರಿ ಎಂದು ಸುದ್ದಿಗಳು ಹರಿದಾಡಿದವು. ಇದರ ಬಗ್ಗೆ ಹಾಸನದ ಸಂಸದರಾದ ಪ್ರಜ್ವಲ್ ರೇವಣ್ಣ ಏನ್ ಹೇಳಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಆ ಮಾಹಿತಿ. ಮಂಗಳೂರಿನಲ್ಲಿ ಸಜೀವ ಬಾಂಬ್‌ ಬಗ್ಗೆ ಪ್ರಜ್ವಲ್ ರೇವಣ್ಣ..

 

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್‌ ಪತ್ತೆಯಾದ ಪ್ರಕರಣ ಸಂಬಂಧ ರಾಜ್ಯದೆಲ್ಲೆಡೆ ಆತಂಕ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಭಯೋತ್ಪಾದನೆ ನಿಗ್ರಹ ದಳ ಅವಶ್ಯಕತೆ ಇದೆ ಎಂದು ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಆಗ್ರಹಿಸಿದ್ದಾರೆ. ಹೌದು,  ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಈ ಹಿಂದೆಯೇ ಮಾಜಿ ಮುಖ್ಯಮಂತ್ರಿ ಎಚ್‌. ಡಿ.ಕುಮಾರ ಸ್ವಾಮಿ ರಾಜ್ಯಕ್ಕೆ ಪ್ರತ್ಯೇಕ ಪಡೆ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿ ದ್ದರು ಎಂದರು. ಹೊಸ ದಿಲ್ಲಿಯಲ್ಲಿ ಮಾತ್ರ ಉಗ್ರ ನಿಗ್ರಹ ಪಡೆ ಇದೆ.

 

ದುರ್ಘಟನೆ ಸಂದರ್ಭ ನಿಗ್ರಹ ಅಲ್ಲಿಂದ ಹೊರಟು ಬರಲು 8 ಗಂಟೆ ಸಮಯ ಬೇಕಾಗುತ್ತದೆ. ಈಗಿನ ಬೆಳವಣಿಗೆ ಪ್ರಕಾರ ರಾಜ್ಯಕ್ಕೊಂದು ಪ್ರತ್ಯೇಕ ಉಗ್ರ ನಿಗ್ರಹ ಪಡೆ ಸನ್ನದ್ಧವಾಗಿ ರಬೇಕು ಎಂದು ಅಭಿಪ್ರಾಯಪಟ್ಟರು. ರಾಜ್ಯದ ಗುಪ್ತಚರ ಇಲಾಖೆ ಇನ್ನಷ್ಟು ಉತ್ತಮಗೊಳ್ಳಬೇಕು. ರಾಜ್ಯಕ್ಕೆ ಪ್ರತ್ಯೇಕ ಉಗ್ರ ನಿಗ್ರಹ ಪಡೆ ಬಗ್ಗೆ ನಾನು ಸಂಸತ್‌ ನಲ್ಲೂ ಪ್ರಸ್ತಾಪ ಮಾಡುವೆ. ಈ ಕೃತ್ಯ ಯಾರೇ ಮಾಡಿದ್ರು ಅವರನ್ನು ಕೂಡಲೇ ಪತ್ತೆ ಹಚ್ಚಬೇಕು. ಆಯಕಟ್ಟಿನ ಜಾಗದಲ್ಲಿಭದ್ರತೆಯನ್ನ ಇನ್ನಷ್ಟು ಬಿಗಿ ಮಾಡಬೇಕು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಒತ್ತಾಯಿಸಿದರು.

 

ಒಟ್ಟಾರೆ ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆಯಾಗಿದ್ದು ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗಲಿಲ್ಲ. ಆದರೆ ಬಾಂಬ್ ಇಟ್ಟಿದ್ದು ಯಾರು, ಯಾಕೆ? ಏನು ಎತ್ತ ಎಂಬ ಎಲ್ಲಾ ಮಾಹಿತಿಯು ತನಿಖೆಯಲ್ಲಿ ತಿಳಿದು ಬರಬೇಕಿದೆ. ಇಲ್ಲದೇ ಹೋದಲ್ಲಿ ರಾಜ್ಯದಲ್ಲಿ ಯಾವ ಕ್ಷಣ ಎಲ್ಲಿ ಯಾವ ಬಾಂಬ್ ಸಿಡಿಯುತ್ತದೆಯೋ ಎಂದು ಪ್ರಯಾಣಿಕರು ಸಾರ್ವಜನಿಕರು ಕಂಗಾಲಾಗಿದ್ದಾರೆ.

మరింత సమాచారం తెలుసుకోండి: