ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್ ತನ್ನ ವ್ಯಾಪಿಸಿದ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಿ ಆದೇಶವನ್ನು ಹೊರಡಿಸಲಾಗಿತ್ತು. ಈ ಲಾಕ್ ಡೌನ್ ಆದ ವೇಳೆ ಯಾವುದೇ ಹೋಟೆಲ್‌ಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಲು ಆದೇಶ ಹೊರಡಿಸಿದ ನಂತರ ಬಡ ನಾಗರೀಕರಿಗೆ ವ್ಯಾಪಾರಿಗಳಿಗೆ ಊಟದ ವ್ಯವಸ್ಥೆ ಹೇಗೆ ಮಾಡುವುದು ಎಂಬ ಪ್ರೆಶ್ನೆ ತಲೆ ಎತ್ತಿತ್ತು ಆದರೆ ಈಗ ರಾಜ್ಯ ಸರ್ಕಾರ ಇದಕ್ಕೊಂದು ಮಾರ್ಗೋಪಾಯವನ್ನು ತಿಳಿಸಿದೆ ಅಷ್ಟಕ್ಕೂ ಆ ಮಾರ್ಗೋಪಾಯ ಯಾವುದು ಗೊತ್ತಾ?
ಈ ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಹುಡುಕಿರುವ ಪರಿಹಾರ ರಾಜ್ಯದ ವಿವಿದೆಡೆಯಲ್ಲಿರುವ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಊಟವನ್ನು ನೀಡಲು ಮುಂದಾಗಿದೆ. ಆದರೆ ಈ ಮೊದಲು ಇಂದಿರಾ ಕ್ಯಾಂಟಿನ್ ಲಾಕ್ ಡೌನ್ ನಲ್ಲಿಯೂ ಓಪನ್ ಆಗಿರುತ್ತದೆ. ಉಚಿತ ಊಟ ನೀಡಲಾಗುತ್ತದೆ ಎಂಬುದಾಗಿ ಸರ್ಕಾರ ಘೋಷಣೆ ಮಾಡಿ ಆದೇಶ ಹೊರಡಿಸಿತ್ತು. ಆನಂತ್ರ, ಮತ್ತೆ ಬಂದ್ ಮಾಡಿತ್ತು. ಆದ್ರೇ ಇದೀಗ ಮತ್ತೆ ಆದೇಶ ಹೊರಡಿಸಿದ್ದು, ಇಂದಿರಾ ಕ್ಯಾಂಟೀನ್ ಓಪನ್ ಮಾಡಲಾಗುತ್ತಿದೆ. ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಮತ್ತು ಬಡ ನಾಗರೀಕರಿಗೆ ಉಚಿತವಾಗಿ ಊಟ ನೀಡಲಾಗುತ್ತದೆ ಎಂಬುದಾಗಿ ಆದೇಶ ಹೊರಡಿಸಿದೆ. ಆದ್ರೇ.. ತಿಂಡಿ, ಊಟಕ್ಕೆ ಟೈಂ ಟೇಬಲ್ ನಿಗದಿ ಮಾಡಿದೆ.
ಹೌದು ಇಂದಿರಾ ಕ್ಯಾಂಟೀನ್ ಇಂದಿನಿಂದ ಓಪನ್ ಆಗಲಿದ್ದು, ಬಡವರಿಗೆ ಉಚಿತವಾಗಿ ಊಟ ದೊರೆಯಲಿದೆ. ಈ ಕುರಿತಂತೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಇಂದಿರಾ ಕ್ಯಾಂಟಿನ್ ನಲ್ಲಿ ಬೀದಿ ವ್ಯಾಪಾರಿಗಳಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಬಡ ನಾಗರೀಕರಿಗೆ ಉಚಿತವಾಗಿ ಊಟವನ್ನು ನೀಡಲಾಗುತ್ತದೆ ಎಂಬುದಾಗಿ ತಿಳಿಸಿದೆ.
ಇನ್ನೂ ಫಲಾನುಭವಿಗಳು ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರ ಸೇವಿಸುವ ಮೊದಲು ಮತ್ತು ನಂತ್ರ, ಕ್ಯಾಂಟೀನ್ ಗಳಲ್ಲಿ ಲಭ್ಯವಿರುವ ಸ್ವಚ್ಛತೆ ಮತ್ತು ನೈರ್ಮಲ್ಯತೆ ಕಾಪಾಡಬೇಕು. ಆಹಾರ ವಿತರಿಸುವ ಸಿಬ್ಬಂದಿಗಳು ಮಾಸ್ಕ್ ಮತ್ತು ಗ್ಲೋವ್ಸ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಸಾಬೂನು ಮತ್ತು ಸ್ಯಾನಿಟೈರ್ಸ್ ಗಳನ್ನು ಕ್ಯಾಂಟೀನ್ ಗಳಲ್ಲಿ ಲಭ್ಯವಿರುವಂತೆ ಇರಿಸತಕ್ಕದ್ದು.
ಆಹಾರದ ಕೂಪನ್ ಪಡೆಯುವ ಸಂದರ್ಭದಲ್ಲಿ ನಾಗರೀಕರು ಕನಿಷ್ಠ ೧ ಮೀಟರ್ ಅಂತರದಲ್ಲಿ ಸರಧಿ ಸಾಲಿನಲ್ಲಿ ನಿಲ್ಲುವಂತೆ, ಮಾಸ್ಕ್ ಧರಿಸುವಂತೆ ಅಥವಾ ಸ್ವಚ್ಛ ಬಟ್ಟೆಯಿಂದ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಲು ತಿಳುವಳಿಕೆ ನೀಡುವ ಬಗ್ಗೆ, ಕೋವಿಡ್-೧೯ ಕುರಿತು ಸಾರ್ವಜನಿಕರಲ್ಲಿ ಮುಂಜಾಗೃತ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಎಂಬುದಾಗಿ ತಿಳಿಸಿದೆ.
click and follow Indiaherald WhatsApp channel