ಆತ್ಮನಿರ್ಭರ ಭಾರತ್ ಅಭಿಯಾನದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜನ್ನು ಹೇಗೆ ಹಂಚಲಾಗುತ್ತಿದೆ ಎಂಬುದ ಮೊದಲ ಹಂತರ ವಿವರಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಸಂಜೆ ನೀಡಿದ್ದರು. ಎಂಎಸ್​​ಎಂಇ ಕ್ಷೇತ್ರಕ್ಕೆ ನೆರವಾಗುವ ರೀತಿಯಲ್ಲಿ ಯಾವೆಲ್ಲ ರೀತಿಯಲ್ಲಿ ಕ್ರಮಗಳನ್ನು ಅನುಸರಿಸಲಾಗಿದೆ ಎಂಬುದರ ವಿವರಣೆಯನ್ನು ಅವರು ನೀಡಿದ್ದರು. ಇಂದು ಎರಡನೇ ಹಂತದ ವಿವರಣೆಯನ್ನು ಅವರು ಸಂಜೆ 4 ಗಂಟೆಗೆ ನೀಡುವ ನಿರೀಕ್ಷೆ ಇದೆ.

 

ಮಾರ್ಚ್‌ನಲ್ಲಿ ಘೋಷಿಸಲಾದ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಮತ್ತು ಎನ್‌ಬಿಎಫ್‌ಸಿ ಮತ್ತು ಹಣಕಾಸು ವಲಯಕ್ಕೆ ಆರ್‌ಬಿಐ ಘೋಷಿಸಿರುವ ದ್ರವ್ಯತೆ ಕ್ರಮಗಳ ನಂತರದ ಮುಂದುವರಿಕೆಯಾಗಿ ಈ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಬರುತ್ತಿದೆ. ವ್ಯಾಪಾರ, ವ್ಯವಹಾರಗಳು ಸ್ಥಗಿತಗೊಂಡಿರುವುದರಿಂದ ಮತ್ತು ದೊಡ್ಡ ಕೈಗಾರಿಕಾ ಘಟಕಗಳ ಸಂಕಷ್ಟದ ಕಾರಣ ಲಾಕ್‌ಡೌನ್‌ನ ತೀವ್ರತೆಯನ್ನು ಭರಿಸಲು ಸಣ್ಣ, ಮದ್ಯಮ ಕೈಗಾರಿಕೆ ವಲಯಕ್ಕೆ ಹಣಕಾಸು ಸಚಿವರು ಪ್ಯಾಕೇಜ್ ಘೋಷಿಸಿದ್ದಾರೆ.

 

ಬುಧವಾರ ಸಂಜೆ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಎಂಎಸ್​ಎಂಇ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವುದಕ್ಕೆ ಅಗತ್ಯ ಕ್ರಮಗಳನ್ನು ಘೋಷಿಸಿದ್ದರು. ಅಲ್ಲದೆ, ಎನ್​ಬಿಎಫ್​ಸಿಗಳು, ಎಚ್​ಎಫ್​ಸಿಗಳು, ಎಂಎಫ್​ಐಗಳಿಗೆ ನೆರವಾಗುವ ಲಿಕ್ವಿಡಿಟಿ ವಿಷಯಗಳನ್ನೂ ಅವರು ವಿವರಿಸಿದ್ದರು.

 

ಇದಕ್ಕೂ ಮುನ್ನ, ಮಂಗಳವಾರ ರಾತ್ರಿ ಎಂಟು ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ನಾಲ್ಕನೇ ಹಂತದ ಲಾಕ್​ಡೌನ್​ ಹೇಗಿರಲಿದೆ ಮತ್ತು ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ ಅಗತ್ಯ ಆರ್ಥಿಕ ಪ್ಯಾಕೇಜ್​ ವಿಚಾರವನ್ನು ಸಂಕ್ಷಿಪ್ತವಾಗಿ ಘೋಷಿಸಿದ್ದರು. ಇದರ ವಿವರಣೆಯನ್ನು ವಿತ್ತ ಸಚಿವರು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ದೇಶದ ಜನರಿಗೆ ನೀಡಲಿದ್ದಾರೆ ಎಂದೂ ಹೇಳಿದ್ದರು.

 

ಇದರಂತೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿತ್ತ ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ನಿನ್ನೆ ಮೊದಲ ಹಂತದ ವಿವರಣೆ ನೀಡಿದ್ದರು. ಇಂದು ಕೃಷಿ ಮತ್ತು ಅದಕ್ಕೆ ಪೂರಕ ಚಟುವಟಿಕೆಗಳ ಕುರಿತ ವಿವರಣೆಯನ್ನು ನೀಡಬಹುದೆಂಬ ನಿರೀಕ್ಷೆ ಇದೆ. ಅಲ್ಲದೆ, ಪೂರೈಕೆ ಜಾಲ ಎದುರಿಸುತ್ತಿರುವ ಸವಾಲುಗಳನ್ನು ಸರಿದೂಗಿಸುವ ಪ್ರಯತ್ನವನ್ನೂ ಇಂದು ಮಾಡುವ ಸಾಧ್ಯತೆ ಇದೆ.

 

 

 

 

 

మరింత సమాచారం తెలుసుకోండి: