ಭಾರತದ ರೈಲ್ವೆಯ ಮೇಲೆ ಒಂದು ಆರೋಪವಿದೆ ಭಾರತೀಯ ರೈಲುಗಳು ಎಂದಿಗೂ ಕೂಡ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬ ಅನೇಕ ಮಾತುಗಳು ನಾವು ಕೇಳಿದ್ದೇವೆ. ಆದರೆ ಇದಕ್ಕೆಲ್ಲ ಕಾರಣ ರೈಲ್ವಿಲಾಖೆಯಲ್ಲಿ ಇದ್ದ ಕೆಲವು ಸಮಸ್ಯೆಗಳು  ಆದರೆ ಈಗ ಎಲ್ಲಾ ಸಮಸ್ಯೆಗಳನ್ನು ರೈಲ್ವೆ ಇಲಾಖೆ ನಿವಾರಿಸಿಕೊಂಡು ಪ್ರಸ್ತುತ ಶೇ.100ರಷ್ಟು ಸಮಯ ಪ್ರಜ್ಞೆಯನ್ನು ಕಾಪಾಡಿಕೊಂಡಿದೆ.

 

ಹೌದು ಭಾರತೀಯ ರೈಲ್ವೆ ಗುರುವಾರ ಶೇ. 100 ರಷ್ಟು ಸಮಯ ಪ್ರಜ್ಞೆ ಮೆರದಿದ್ದು, ಭಾರತೀಯ ರೈಲ್ವೆ ಇತಿಹಾಸದಲ್ಲೆ ಮೊದಲ ಬಾರಿಗೆ ಈ ಮೈಲಿಗಲ್ಲು ಸಾಧಿಸಿದೆ. ಕಳೆದ ತಿಂಗಳು, ರೈಲ್ವೆ ತನ್ನ ಎಲ್ಲ ವಲಯಗಳಿಗೆ 230 ವಿಶೇಷ ರೈಲುಗಳ ಚಾಲನೆಯಲ್ಲಿ ಶೇ 100 ರಷ್ಟು ಸಮಯಪ್ರಜ್ಞೆಯನ್ನು ಖಾತ್ರಿಪಡಿಸುವಂತೆ ಆದೇಶಿಸಿತ್ತು,


'ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ, ಎಲ್ಲ ರೈಲು ಚಾಲನೆಯಲ್ಲಿ ಶೇ.100 ಸಮಯಪ್ರಜ್ಞೆ ಸಾಧಿಸಲಾಗಿದೆ. ಈ ಹಿಂದೆ ಒಂದು ರೈಲ್ವೆ ವಿಳಂಬವಾಗುತ್ತಿದ್ದ ಕಾರಣ ಈ ಸಾಧನೆಯ ದರ ಜೂನ್ 23.ರಂದು ಶೇ. 99.54 ಆಗಿತ್ತು. ರೈಲ್ವೆ ಮಂಡಳಿಯ ಅಧ್ಯಕ್ಷ ವಿ ಕೆ ಯಾದವ್ ಎಲ್ಲ ರೈಲ್ವೆ ಮಹಾ ವ್ಯವಸ್ಥಾಪಕರು, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಎಲ್ಲಾ ವಲಯಗಳಿಗೆ 15 ಜೋಡಿ ರಾಜಧಾನಿ ವಿಶೇಷ ರೈಲುಗಳು ಮತ್ತು 100 ಜೋಡಿ ಪ್ರಯಾಣಿಕ ರೈಲುಗಳು ಯಾವುದೇ ವಿಳಂಬವಿಲ್ಲದೆ ತಮ್ಮ ವೇಳಾಪಟ್ಟಿಯನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕೆಂದು ಹೇಳಿದ್ದರು. ಪ್ರಸ್ತುತ ನೆಟ್​ವರ್ಕ್​​​ನಲ್ಲಿ ಚಾಲನೆಯಲ್ಲಿರುವ ರೈಲುಗಳ ಸಂಖ್ಯೆ ಕಡಿಮೆಯಾಗಿರುವುದರಿಂದ, ಶೇಕಡಾ 100 ಸಮಯಪ್ರಜ್ಞೆ ಸಾಧಿಸಲೇಬೇಕು ಎಂದು ಯಾದವ್ ತಿಳಿಸಿದ್ದರೆಂದು ಪಿಟಿಐ ಉಲ್ಲೇಖಿಸಿದೆ.

 

ಇಲ್ಲಿ ಉಲ್ಲೇಖಿಸಬೇಕಾದ ಸಂಗತಿಯೆಂದರೆ, ದೆಹಲಿಯಿಂದ ಮುಂಬೈಗೆ ಮತ್ತು ದೆಹಲಿಯಿಂದ ಹೌರಾಕ್ಕೆ ಎರಡು ಮಾರ್ಗಗಳಲ್ಲಿ ರೈಲುಗಳ ವೇಗವನ್ನು ಗಂಟೆಗೆ 130 ಕಿಮೀ ವೇಗದ ವರೆಗೆ ಹೆಚ್ಚಿಸಲು ರೈಲ್ವೆ ಸಿದ್ಧತೆ ನಡೆಸುತ್ತಿದೆ. 'ದೆಹಲಿ-ಹೌರಾ ಮತ್ತು ದೆಹಲಿ-ಮುಂಬೈ ಮಾರ್ಗಗಳು ಫಿಟ್‌ನೆಸ್ ಮತ್ತು ಸಿಗ್ನಲಿಂಗ್ ಪರಿಗಣನೆಗೆ ಬಹುತೇಕ ಸಿದ್ಧವಾಗಿವೆ. ಈ ಮಾರ್ಗದಲ್ಲಿ ರೈಲುಗಳು ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸಬಹುದು. ಈ ಹಣಕಾಸು ವರ್ಷದಲ್ಲಿ , ಈ ಎರಡು ಮಾರ್ಗಗಳಲ್ಲಿ ರೈಲುಗಳು ಈ ವೇಗದಲ್ಲಿ ಚಲಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಮಂಡಳಿ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.


ಮುಂದಿನ ದಿನಗಳಲ್ಲಿ ಈ ಮಾರ್ಗಗಳಲ್ಲಿ ಭಾರತೀಯ ರೈಲ್ವೆ ಗಂಟೆಗೆ 160 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸಲಿದೆ. ಇದಕ್ಕಾಗಿ, ಎಲ್ಲ ಯೋಜನೆಗಳ ಕಾರ್ಯ ನಡೆಯುತ್ತಿದೆ.ಎಂದು ಮಂಡಳಿ ತಿಳಿಸಿದೆ.

 

ಕಳೆದ ಕೆಲವು ವರ್ಷಗಳಿಂದ, ರೈಲುಗಳ ವೇಗವನ್ನು ಸುಧಾರಿಸಲು ರೈಲ್ವೆ ನಿರಂತರ ಪ್ರಯತ್ನ ನಡೆಸುತ್ತಿದೆ. ಹಲವಾರು ಮಾರ್ಗಗಳಲ್ಲಿ ರಾಜಧಾನಿ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಹೆಚ್ಚುವರಿಯಾಗಿ, ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ಅರೆ-ವೇಗದ ರೈಲುಗಳನ್ನು ಸಹ ಭಾರತೀಯ ರೈಲ್ವೆ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಅರೆ-ವೇಗದ ರೈಲುಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಬಹುದು ಮತ್ತು ಈ ರೈಲುಗಳೊಂದಿಗೆ ಕೆಲವು ಹೊಸ ಮಾರ್ಗಗಳು ಸಹ ಕಾರ್ಯನಿರ್ವಹಣೆಗೆ ಸಿದ್ಧವಾಗುತ್ತವೆ.


ಖಾಸಗಿಯವರಿಗೆ ಪ್ರಯಾಣಿಕ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡುವ ಪ್ರಯತ್ನದಲ್ಲಿ, ರೈಲ್ವೆ ಬುಧವಾರ 151 ಆಧುನಿಕ ರೈಲುಗಳ ಮೂಲಕ 109 ಜೋಡಿ ಮಾರ್ಗಗಳ ಕಾರ್ಯಕ್ಕೆ ಖಾಸಗಿ ಸಹಭಾಗಿತ್ವಕ್ಕಾಗಿ ರಿಕ್ವೆಸ್ಟ್ ಫಾರ್ ಕ್ವಾಲಿಫಿಕೇಷನ್ಸ್ (ಆರ್‌ಎಫ್‌ಕ್ಯೂ) ಗೆ ಆಹ್ವಾನಿಸಿದೆ. 'ಆಧುನಿಕ ತಂತ್ರಜ್ಞಾನ, ಕಡಿಮೆ ನಿರ್ವಹಣೆ, ಕಡಿಮೆ ಸಾರಿಗೆ ಸಮಯ, ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವುದು, ಸುರಕ್ಷತೆಯನ್ನು ಒದಗಿಸುವುದು, ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ' ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

మరింత సమాచారం తెలుసుకోండి: