ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿನಿಂದ  ಎಚ್ಚೆತ್ತುಕೊಂಡ ಸರ್ಕಾರ ಬೆಂಗಳೂರನ್ನು ಒಂದು ವಾರಗಳ ಕಾಲ ಲಾಕ್ ಡೌನ್  ಮಡಲಾಗಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಅಷ್ಟಾಗಿ ಪ್ರಯೋಜನವಾಗದಿದ್ದರೂ ಕೂಡ ಕೊರೋನಾ ಸಂಖ್ಯೆ ಮಾತ್ರ ಹೆಚ್ಚಾಗಿಲ್ಲ. ಆದರೆ ಬೆಂಗಳೂರಿನಲ್ಲಿ ನಾಳೆಯಿಂದ  ಅನ್ ಲಾಕ್ ಮಾಡಲಾಗುತ್ತಿದೆ. ಈ ಕುರಿತು ಯಡಿಯೂರಪ್ಪನವರು ಸೋಶಿಯಲ್ ಮಿಡಿಯಾದಲ್ಲಿ ಮಾತನಾಡಿದ್ದಾರೆ. ಅಷ್ಟಕ್ಕೂ ಏನು ಮಾತನಾಡಿದ್ದಾರೆ ಗೊತ್ತಾ.,?

 

 ಬೆಂಗಳೂರು ನಗರಲ್ಲಿ ಆರ್ಥಿಕ ಚೇತರಿಕೆಯಂತ ಕಾರ್ಯಗಳು ನಡೆಯಬೇಕಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡುವುದಿಲ್ಲ. ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್ ಡೌನ್ ತೆರವಾಗಲಿದೆ. ಎಂದಿನಂತೆ ಚಟುವಟಿಕೆ ಮುಂದುವರೆಯಲಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದರು.

 

ರಾಜ್ಯದ ಜನರನ್ನು ಉದ್ದೇಶಿಸಿ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪ್ರಸ್ತುತ ದೇಶಾದ್ಯಂತ ಕೋವಿಡ್ ಬಗ್ಗೆಯೇ ಬಹಳ ದೊಡ್ಡ ಚರ್ಚೆಯಾಗುತ್ತಿದೆ. ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣ ಮಾಡುತ್ತಿರುವಲ್ಲಿ ಪ್ರಾರಂಭದಲ್ಲಿ ಯಶಸ್ವಿಯಾಗಿದ್ದು, ಆದ್ರೇ ಇತ್ತೀಚೆಗೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದರು.

 

ರಾಜ್ಯದ ಜನತೆರಿಗೆ ಹೇಳುವುದಿಷ್ಟೇ ಲಾಕ್ ಡೌನ್ ಒಂದೇ ಪರಿಹಾರವಲ್ಲ. ಇದರ ಬದಲಾಗಿ ಸಾಮಾಜಿ ಅಂತರ, ಮಾಸ್ಕ್ ಧರಿಸೋದ್ರಿಂದ ಕೊರೋನಾ ತಡೋಗಟ್ಟಬಹುದು. ಈಗಾಗಲೇ ನಾನು ಎಲ್ಲಾ ಶಾಸಕರು, ಸಚಿವರು, ನರ್ಸ್ ಗಳು, ಡಾಕ್ಟರ್, ಆಶಾ ಕಾರ್ಯಕರ್ತೆಯರು ಪ್ರಾಣದ ಹಂಗು ತೊರೆದು ತಮ್ಮ ಪ್ರಾಣನ್ನೇ ಮುಡುಪಾಗಿಟ್ಟು ಕೊರೋನಾ ತಡೆಯಲು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಉಳಿದು ಬದುಕಬೇಕು ಅಂದ್ರೆ.. ಕೋವಿಡ್ ನಿಂದ ದೂರ ಇರಬೇಕಾದ್ರೇ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

 

ಕೋವಿಡ್ ನಿಯಂತ್ರಣಕ್ಕೆ ತಜ್ಞರು ಕೊಟ್ಟಿರುವಂತ ಸಲಹೆ 5ಟಿ ಸಲಹೆ ಟ್ರೇಸ್, ಟ್ರಾಕ್, ಟೆಸ್, ಟ್ರೀಟ್ ಅಂಡ್ ಟೆಕ್ನಾಲಟಿಯನ್ನು ಬಳಸಿಕೊಂಡರೇ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಕೂಡ ನನ್ನ ನಂಬಿಕೆ. ಪ್ರತಿ ಕೋವಿಡ್ ಸೋಂಕಿತರಿಗೆ 45 ಜನ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗುತ್ತಿದೆ. ಕೋವಿಡ್ ಮತ್ತು ಕೋವಿಡ್ ಅಲ್ಲದ ರೋಗಿಗಳನ್ನು ಖಾಸಗೀ ಆಸ್ಪತ್ರೆಯಲ್ಲಿ ದಾಖಲಿಸುವಂತ ಸಮಸ್ಯೆಯಲ್ಲಿ ಉಂಟಾಗುತ್ತಿದ್ದಂತ ಸಮಸ್ಯೆ ಸರಿ ಪಡಿಸಲಾಗಿದೆ ಎಂದರು.

 

ರಾಜ್ಯದಲ್ಲಿ ಶೇ.80ರಷ್ಟು ಸೋಂಕಿತರಿಗೆ ಕೊರೋನಾ ಲಕ್ಷಣಗಳೇ ಇಲ್ಲ. ಹೀಗಾಗಿ ಕೋವಿಡ್ ಕೇರ್ ಸೆಂಟರ್ ಅಲ್ಲದೇ ಹೋಂ ಕ್ವಾರಂಟೈನ್ ನಲ್ಲಿ ಇರುಬೇಕು. ಬೆಂಗಳೂರುನಲ್ಲಿ 11,230 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂದರು.

ಹಾಸಿಗೆಗಳ ಹಂಚಿಕೆಗಾಗಿ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗಿದೆ. ರಿಯಲ್ ಟೈಂ ಡ್ಯಾಸ್ ಬೋರ್ಡ್ ಸಿದ್ಧಪಡಿಸಲಾಗಿದೆ. ಕೋವಿಡ್ ನಿಯಂತ್ರಿಸಲು ಸರ್ಕಾರ ಪ್ರಾಮಾಣಿಕ ಎಲ್ಲಾ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ. ಯಾರೂ ಆತಂಕ ಪಡಬಾರದು ಎಂದರು.

ನಾನು ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ 100ಕ್ಕೆ 98 ಜನರ ಕೊರೋನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬರುತ್ತಿದ್ದಾರೆ.

 

ರಾಜ್ಯದಲ್ಲಿ ಹೊರ ರಾಜ್ಯಗಳಿಂದ ಬರುವಂತ ಜನರಿಂದಾಗಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಲಾಕ್ ಡೌನ್ ಬಗ್ಗೆ ಮಾತ್ರ ಮಾತನಾಡದೇ ಕೊರೋನಾ ತಡೆಗಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಂತ ಕಾರ್ಯವನ್ನು ಜನರು ಮಾಡಬೇಕು. ಲಾಕ್ ಡೌನ್ ಒಂದೇ ಕೊರೋನಾ ನಿಯಂತ್ರಣ ಸಾಧ್ಯವಲ್ಲ ಎಂಬುದಾಗಿ ತಿಳಿಸದರು.ಕೊರೋನಾ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜನಪ್ರತಿನಿಧಿಗಳನ್ನು ನಾನು ಕೊರೋನಾ ಸಂಬಂಧಿಸಿದಂತ ನಿಯಂತ್ರಣಕ್ಕಾಗಿ ಸಲಹೆಯನ್ನು ಮುಕ್ತವಾಗಿ ನೀಡುವಂತೆ ಕೋರುತ್ತೇನೆ ಎಂದರು.

 

 

మరింత సమాచారం తెలుసుకోండి: