ಚೀನಾ ಸೈನಿಕರು ಪೂರ್ವ ಲಡಾಖ್ನಲ್ಲಿ ಭಾರತದ ಭೂಪ್ರದೇಶವ ಒಳಗೆ ಮೇ ತಿಂಗಳಲ್ಲೇ ಒಳನುಸುಳಿ ಅತಿಕ್ರಮಣ ಮಾಡಿದ್ದರು ಎಂದು ರಕ್ಷಣಾ ಸಚಿವಾಲಯ ವೆಬ್ಸೈಟ್ಗೆ ಕೆಲವು ದಾಖಲೆಗಳ ಸಮೇತ ಅಪ್ಲೋಡ್ ಮಾಡಿತ್ತು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಕೂಡ ಮಾಡಿ, ಚೀನಾ ಸೈನಿಕರು ಒಳನುಗ್ಗಿದ್ದರು ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿಯವರೇಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.
ಆದರೆ ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ರಕ್ಷಣಾ ಸಚಿವಾಲಯ ವೆಬ್ಸೈಟ್ನಲ್ಲಿ ಈ ಮಾಹಿತಿಯನ್ನು ಡಿಲೀಟ್ ಮಾಡಿದೆ. ಮೇ ತಿಂಗಳಲ್ಲಿ ಚೀನಾ ಸೈನಿಕರು ಭಾರತದ ಭೂ ಪ್ರದೇಶವನ್ನು ಅತಿಕ್ರಮಣ ಮಾಡಿದ್ದರು ಎಂದು ಅಪ್ಲೋಡ್ ಮಾಡಿದ್ದ ವಿವರಗಳನ್ನು ಅಲ್ಲಿಂದ ತೆಗೆಯಲಾಗಿದೆ.
ಚೀನಾದ ಒಳನುಸುಳುವಿಕೆಯನ್ನು ಅತಿಕ್ರಮಣ ಎಂದು ಉಲ್ಲೇಖಿಸಿದ್ದ ರಕ್ಷಣಾ ಸಚಿವಾಲಯ, ಪ್ಯಾಂಗೋಂಗ್ ಸರೋವರದಿಂದ ಭಾರತ ಹಿಂದೆ ಸರಿಯಬೇಕು ಎಂದು ಚೀನಾ ಬೇಡಿಕೆ ಇಡುತ್ತಿರುವ ಮಧ್ಯೆ ಈ ಸಂಘರ್ಷದ ನಿಲುವು ದೀರ್ಘವಾಗಿ ಇರಬಹುದು ಎಂದು ಹೇಳಿತ್ತು. ಭಾರತ ಮತ್ತು ಚೀನಾ ಸೈನಿಕರ ನಡುವಿನ ಹೊಡೆದಾಟದ ನಂತರ ಮೊದಲ ಬಾರಿಗೆ ರಕ್ಷಣಾ ಸಚಿವಾಲಯ ಚೀನಾ ವಿರುದ್ಧ ಅತಿಕ್ರಮಣ ಎಂಬ ಪದ ಪ್ರಯೋಗ ಮಾಡಿ ವೆಬ್ಸೈಟ್ನಲ್ಲಿ ಸಂಪೂರ್ಣ ಮಾಹಿತಿ ಹಾಕಿತ್ತು. ಆದರೆ ಇದು ರಾಜಕೀಯ ವಿವಾದಕ್ಕೆ ಕಾರಣವಾದ ನಂತರ ಅಲ್ಲಿಂದ ಡಿಲಿಟ್ ಮಾಡಲಾಗಿದೆ.
ಚೀನಾದ ಸೈನಿಕರು ಮೇ 17,18ರಂದು ಉತ್ತರ ಹಾಟ್ಸ್ಪ್ರಿಂಗ್ಸ್ನ ಪೆಟ್ರೋಲಿಂಗ್ ಪಾಯಿಂಟ್ 15ರ ಬಳಿ ಇರುವ ಕುಗ್ರಾಂಗ್ ನಾಲಾ, ಗೋಗ್ರಾ (ಪಿಪಿ 17ಎ) ಮತ್ತು ಪ್ಯಾಂಗೋಂಗ್ ತ್ಸೋದ ಉತ್ತರ ದಡದ ಬಳಿ ಗಡಿ ನಿಯಮ ಉಲ್ಲಂಘಿಸಿ, ಅತಿಕ್ರಮಣ ಮಾಡಿದ್ದರು ಎಂದು ವೆಬ್ಸೈಟ್ನಲ್ಲಿ ದಾಖಲಾಗಿತ್ತು.
click and follow Indiaherald WhatsApp channel