ಭಾರತ ಮತ್ತು ಚೀನಾದ ಗಡಿ ಬಿಕ್ಕಟ್ಟಿನಿಂದಾಗಿ ಉಂಟಾದ ವೈಶಮ್ಯದಿಂದ ಭಾರತ ಚೀನಾದ  59 ಆಫ್ ಗಳ ಮೇಲೆ ನಿಷೇದವನ್ನು ಹೇರಲಾಯಿತು ಈ ನಿಷೇಧಿತ ಆಪ್ಗಳಲ್ಲಿ ಭಾರತದಲ್ಲಿ ಬಹಳ ಜನಪ್ರಿಯವಾಗಿದ್ದ ಟಿಕ್ ಟಾಕ್ ಆಫ್ ಕೂಡ ನಿಷೇದವಾದ್ದರಿಂದ ಇದಕ್ಕೆ ಬದಲಾಗಿ ಅನೇಕ ಸ್ವದೇಶಿ ಆಫ್ ಗಳನ್ನು ಬಳಸಲಾಗುತ್ತಿದೆ.  ಆ ಸ್ವದೇಶಿ ಆಫ್ ಗಳಲ್ಲಿ ಈ ಒಂದು ಆಫ್ ಮಾತ್ರ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದೆ ಅಷ್ಟಕ್ಕೂ ಜನಪ್ರಿಯತೆಯನ್ನು ಪಡೆದ ಆ ಆಫ್ ಯಾವುದು ಗೊತ್ತಾ..?

 

ಭಾರತೀಯರೇ ಸಿದ್ಧಪಡಿಸಿರುವ Josh ಆಪ್‌ ಡಿಜಿಟಲ್‌ ಮೀಡಿಯಾದಲ್ಲಿ ಹೊಸ ಸದ್ದು ಮಾಡುತ್ತಿದ್ದು, ಇತರೆ ಆಪ್‌ಗಳಿಗೆ ಹೋಲಿಕೆ ಮಾಡಿದರೆ ಆ ಆಪ್‌ ವಿಭಿನ್ನ ವೈಶಿಷ್ಟ್ಯವನ್ನು ಹೊಂದಿದ್ದು, ಸದ್ಯಕ್ಕೆ ಈ ಆಪ್‌ ಗೂಗಲ್ ಪ್ಲೇ ಸ್ಟೋರ್ ಮಾತ್ರ ಲಭ್ಯವಿದ್ದು, ಆಪಲ್ ಆಪ್ ಸ್ಟೋರ್ ನಲ್ಲೂ ಕೂಡ ನಿಮಗೆ ಸಿಗಲಿದೆ. ಅಂದ ಹಾಗೇ ಈ ಜೋಶ್ ‌ಆಪ್‌ ಸಣ್ಣ ವೀಡಿಯೊಗಳನ್ನು ಹಂಚಿಕೊಳ್ಳುವ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಈ ಅಪ್‌ ಹೆಚ್ಚು ಸೌಂಡ್‌ ಮಾಡುತ್ತಿದ್ದು, ಬಳಕೆದಾರರು ಅತಿ ಸುಲಭವಾಗಿ ಈ ಆಪ್‌ ಉಪಯೋಗಿಸಿಕೊಳ್ಳಹುದಾಗಿದೆ.

 

ಜೋಶ್ ಅಪ್ಲಿಕೇಶನ್ ಬಗ್ಗೆ ಸಣ್ಣ ಪರಿಚಯಸಣ್ಣ ವೀಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಇದನ್ನು ಬಳಕೆ ಮಾಡಬಹುದಾಗಿದ್ದು, ಇದನ್ನು ಮೇಡ್-ಇನ್ ಇಂಡಿಯಾ ಪರಿಕಲ್ಪನೆಗೆ ಅನುಗುಣವಾಗಿ ಸ್ವದೇಶಿಯರೇ ರಚನೆ ಮಾಡಿರುವುದು ಮತ್ತೊಂದು ಹೆಮ್ಮೆಯ ಸಂಗಾತಿಯಾಗಿದೆ. ಅಂದ ಹಾಗೇ ಈ ಆಪ್‌ ತಮಿಳು, ಕನ್ನಡ, ಇಂಗ್ಲಿಷ್ ಮತ್ತು ಮಲಯಾಳಂನಂತಹ ವಿವಿಧ ಪ್ರಾದೇಶಿಕ ಭಾಷೆಗಳ ವಿಡಿಯೋವನ್ನು ಬೆಂಬಲಿಸುತ್ತದೆ ಈ ಮೂಲಕ ಎಲೆ ಮರೆಪ್ರತಿಭೆಗಳೂ ಪ್ರಪಂಚದ ನಾನಾ ಭಾಗಗಳನ್ನು ತಲುಪಿ ತಮ್ಮ ಪ್ರತಿಭೆಯನ್ನು ಈ ಆಪ್‌ ಮೂಲಕ ಗುರುತಿಸಿಕೊಳ್ಳಬಹುದು. ಈ ಆಪ್‌ನಲ್ಲಿ ಕನ್ನಡ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳ ಟ್ರೆಂಡಿಂಗ್, ಹಾಸ್ಯ, ಮನಮೋಹಕ ಡ್ಯಾನ್ಸ್‌, ಹಾಡುಗಾರಿಕೆಯ ವಿಡಿಯೋ ಮನರಂಜನೆಯ ವೀಡಿಯೊಗಳನ್ನು ಮಾಡಬಹುದಾಗಿದ್ದು ಹಾಗೂ ನೋಡಬಹುದಾಗಿದೆ. ಜೋಶ್ ಅಪ್ಲಿಕೇಶನ್‌ನ ಮತ್ತೊಂದು ವಿಶಿಷ್ಟ ಅಂಶವೆಂದರೆ ಇಲ್ಲಿ ನೀವು ಲಾಗ್‌ ಇನ್‌ ಆಗುವುದನ್ನು ಕಡ್ಡಾಯ ಗೊಳಿಸಿಲ್ಲ ಹೀಗಾಗಿ ಈ ಆಪ್‌ನ ಬಳಕೆದಾರರು ತಮ್ಮ ಮಾಹಿತಿ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದು, ಈ ಮೂಲಕ ಬಳಕೆದಾರರಲ್ಲಿ ನೆಮ್ಮದಿಯನ್ನು ಉಂಟು ಮಾಡುತ್ತದೆ.

 

ಜೋಶ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಮತ್ತು ಸ್ಥಾಪಿಸುವುದು (ಇನ್‌ಸ್ಟಾಲ್‌) ಹೇಗೆ ? : ಜೋಶ್ ಅಪ್ಲಿಕೇಶನ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಲಭ್ಯವಿದೆ. ಅಪ್ಲಿಕೇಶನ್ ಅನ್ನು Google Play ಸ್ಟೋರ್‌ಗೆ ನೀವು ಹೋಗಿ, ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಜೋಶ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ನೀವು ಈ ಲಿಂಕ್ ಅನ್ನು ಸಹ ಕ್ಲಿಕ್ ಮಾಡಬಹುದಾಗಿದೆ. https://play.google.com/store/apps/details?id=com.eterno.shortvideos ಅಪ್ಲಿಕೇಶನ್ ಗಾತ್ರ 7.6MB ಆಗಿದ್ದು, ನಿಮ್ಮ ಮೋಬೈಲ್‌ ಮೊಮೋರಿಯನ್ನು ಹೆಚ್ಚು ಆಕ್ರಮಿಸಿಕೊಳ್ಳುವುದಿಲ್ಲ ಕೂಡ.ಜೋಶ್

 

ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು?


ನೀವು ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿದ ಬಳಿಕ ಪ್ರಾರಂಭದಲ್ಲಿ ಭಾಷಾ ಆಯ್ಕೆಗಳಿಗೆ ತೆರೆಯುತ್ತದೆ, ಅಲ್ಲಿ ನಿಮ್ಮ ಆದ್ಯತೆಯ ಭಾಷೆಯನ್ನು ನೀವು ಆಯ್ಕೆ ಮಾಡಬಹುದಾಗಿದೆ. ಪ್ರಸ್ತುತ, ಜೋಶ್ ಅಪ್ಲಿಕೇಶನ್ ಹಿಂದಿ, ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಇಂಗ್ಲಿಷ್ ಲಭ್ಯವಿದ್ದು, ಮುಂಬರುವ ದಿವಸದಲ್ಲಿ ಇದು ಬೇರೆ ಭಾಷೆಯಲ್ಲೂ ಕೂಡ ಲಭ್ಯವಿರುತ್ತದೆ.

 

 

మరింత సమాచారం తెలుసుకోండి: