ನವದೆಹಲಿ: ಕೊರೋನಾ ವೈರಸ್ ಚಿನಾದಲ್ಲಿ ಜನಿಸಿ ಇಡೀ ವಿಶ್ವವನ್ನೇ ತಲ್ಲಣ ಗೊಳಿಸುತ್ತಿದೆ. ಇದರಿಂದಾಗಿ ವಿಶ್ವದ ಲಕ್ಷಾಂತರ ಮಂದಿ ಸಾವನ್ನಪ್ಪಿರುವುದಕ್ಕೆ ಕಾರಣ ಚೀನಾ ಎಂದು ಇಡೀ ವಿಶ್ವವೇ ನಿರ್ಧರಿಸಲಾಗಿತ್ತು. ಚೀನಾದಲ್ಲಿ ಮಾಡಿದಂತಹ ಒಂದು ಪ್ರಯೋಗದಿಂದ ಕೊರೋನಾ ವೈರಸ್ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿತ್ತು. ಇದರಿಂದ ವಿಶ್ವದ ಎಲ್ಲಾ ರಾಷ್ಟ್ರಗಳು ಚೀನಾವನ್ನು ವೈರಿಯನ್ನಾಗಿ ನೋಡುತ್ತಿದೆ ಆದರೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಈ ಮಾಹಿತಿಯೊಂದು ಚೀನಾವನ್ನು ನಿರಪರಾಧಿಯ ಸ್ಥಾನದಲ್ಲಿ ಕೂರಿಸಿದೆ. ಅಷ್ಟಕ್ಕೂ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಏನು ಗೊತ್ತಾ..?
ಮಹಾಮಾರಿ ಕರೊನಾ ವೈರಸ್ ಯಾವುದೇ ಪ್ರಯೋಗಾಲಯದಿಂದ ಸೋರಿಕೆಯಾಗಿಲ್ಲ ಅಥವಾ ಯಾರ ಕೈಚಳಕವೂ ಇದರಲ್ಲಿ ಇಲ್ಲ. ಕಳೆದ ವರ್ಷ ಚೀನಾದಲ್ಲಿ ಪ್ರಾಣಿಯಿಂದಲೇ ಈ ವೈರಸ್ ಉತ್ಪತಿಯಾಗಿದೆ ಎಂದು ಎಲ್ಲ ಸಾಕ್ಷ್ಯಾಧಾರಗಳು ಸೂಚಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ತಿಳಿಸಿದೆ.
ಕೋವಿಡ್-19 ಚೀನಾದ ವುಹಾನ್ ನಗರದಲ್ಲಿರುವ ಲ್ಯಾಬ್ನಿಂದ ಸ್ಪೋಟಗೊಂಡಿತೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಅಂದಹಾಗೆ ವುಹಾನ್ ಕರೊನಾ ವೈರಸ್ ಸ್ಪೋಟ ಕೇಂದ್ರವಾಗಿದೆ. ಕಳೆದ ಡಿಸೆಂಬರ್ನಲ್ಲಿ ವೈರಾಣು ಸ್ಪೋಟಗೊಂಡಿತು.
ಟ್ರಂಪ್ ಹೇಳಿಕೆ ಬೆನ್ನಲ್ಲೇ ಡಬ್ಲ್ಯುಎಚ್ಒ ಪ್ರತಿಕ್ರಿಯಿಸಿದೆ. ವೈರಾಣು ಪ್ರಾಣಿಗಳಿಂದಲೇ ಹರಡಿದೆ ಎಂದು ಎಲ್ಲ ದಾಖಲೆಗಳು ಸೂಚಿಸುತ್ತಿವೆ. ಲ್ಯಾಬ್ನಲ್ಲಾಗಲಿ ಅಥವಾ ಯಾರ ಕೈಚಳಕವು ಇದರಲ್ಲಿ ಇಲ್ಲವೆಂದು ಡಬ್ಲ್ಯುಎಚ್ಒ ವಕ್ತಾರ ಫೆದೆಲಾ ಛೇಬ್, ಜಿನಿವಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಹುಶಃ ವೈರಾಣು ಪ್ರಾಣಿಯಿಂದಲೇ ಉತ್ಪತಿಯಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ.
ವೈರಾಣು ಪ್ರಾಣಿಯಿಂದ ಹೇಗೆ ಮಾನವನಿಗೆ ಹರಡಿತು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ, ಯಾವುದೋ ಒಂದು ಪ್ರಾಣಿ ಮಧ್ಯವರ್ತಿಯಾಗಿ ಕೆಲಸ ಮಾಡಿರಬಹುದು. ಕರೊನಾ ವೈರಸ್ ಹೆಚ್ಚಾಗಿ ಬಾವಲಿಗಳಲ್ಲಿ ಕಂಡುಬರುತ್ತದೆ. ಆದರೆ, ಬಾವಲಿಯಿಂದ ಮನುಷ್ಯನಿಗೆ ಹೇಗೆ ಹರಡಿತು ಎಂಬುದನ್ನು ಸಂಶೋಧಿಸಲಾಗುತ್ತಿದೆ ಎಂದು ಫೆದೆಲಾ ಛೇಬ್ ತಿಳಿಸಿದರು.
ವೈರಾಣು ವುಹಾನ್ ಲ್ಯಾಬ್ನಿಂದಲೇ ಸ್ಪೋಟಗೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಬೇರೊಬ್ಬರ ಪ್ರಮಾದದಿಂದ ವೈರಸ್ ಲ್ಯಾಬ್ನಿಂದ ಹರಡಿರುವ ಸಾಧ್ಯತೆ ಇರಬಹುದೇ ಎಂಬ ಪ್ರಶ್ನೆಗೆ ಫೆದೆಲಾ ಛೇಬ್ ಪ್ರತಿಕ್ರಿಯಿಸಲಿಲ್ಲ.
ಇನ್ನು ಕರೊನಾ ವೈರಸ್ ಸಾಂಕ್ರಮಿಕವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲವೆಂದು ಡಬ್ಲ್ಯುಎಚ್ಒಗೆ ನೀಡುವ ನಿಧಿಯನ್ನು ಅಮಾನತು ಮಾಡಿರುವ ಟ್ರಂಪ್ ಕ್ರಮದ ಬಗ್ಗೆ ಮಾತನಾಡಿ, ಟ್ರಂಪ್ ಅವರ ಘೋಷಣೆಯನ್ನು ನಾವಿನ್ನೂ ಮೌಲ್ಯಮಾಪನವನ್ನು ಮಾಡುತ್ತಿದ್ದೇವೆ ಎಂದರು.
click and follow Indiaherald WhatsApp channel