ಸುದೀಪ್ ಮತ್ತು ದರ್ಶನ್ ಚಿತ್ರಗಳೆಂದರೆ ಕನ್ನಡ ಸಿನಿ ಪ್ರೇಮಿಗಳಿಗೆ ಎಲ್ಲಿಲ್ಲದ ಹಬ್ಬ. ಹೀಗಾಗಿ ಮುಂಬರುವ ಆಗಸ್ಟ್ ತಿಂಗಳು ಸ್ಯಾಂಡಲ್‌ವುಡ್‌ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಯಾಕಂದ್ರೆ, ಅದೇ ತಿಂಗಳಲ್ಲಿ ದರ್ಶನ್ ಮತ್ತು ಸುದೀಪ್ ಅಭಿನಯದ ಎರಡು ಚಿತ್ರಗಳು ತೆರೆ ಕಾಣಲಿವೆ. ಹೀಗಾಗಿ ಸ್ಯಾಂಡಲ್ ವುಡ್‌ನಲ್ಲಿ ಸ್ಟಾರ್ ವಾರ್ ನಡೆಯೋ ಸಾಧ್ಯತೆಗಳು ಈಗಲೇ ಕಂಡು ಬರುತ್ತಿವೆ. 


ದರ್ಶನ್ ಅವರನ್ನು ಅಭಿಮಾನಿಗಳು 'ಚಾಲೆಂಜಿಂಗ್ ಸ್ಟಾರ್' ಎಂದು ಕರೆಯುತ್ತಾರೆ. ಈ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಅಭಿನಯಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದ ದರ್ಶನ್, ಇದೀಗ ಕುರುಕ್ಷೇತ್ರದಲ್ಲಿ ಮೋಡಿ ಮಾಡೋಕೆ ಸಜ್ಜಾಗಿದ್ದಾರೆ. ಹೀಗಾಗಿ ದರ್ಶನ್ ಅಭಿನಯದ, ದೊಡ್ಡ ಬಜೆಟ್ ಚಿತ್ರ ಕುರುಕ್ಷೇತ್ರ ಆಗಸ್ಟ್ 9 ರಂದು ತೆರೆ ಕಾಣಲಿದೆ ಎನ್ನಲಾಗುತ್ತಿದೆ.


ಒಂದು ಕಡೆ ದರ್ಶನ್ ಅಭಿನಯದ ಕುರುಕ್ಷೇತ್ರ ಬಿಡುಗಡೆಗೆ ಸಿದ್ಧವಾದರೆ, ಮತ್ತೊಂದು ಕಡೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರವೂ ಆಗಸ್ಟ್ ತಿಂಗಳಲ್ಲಿಯೇ ತೆರೆಗೆ ಬರೋಕೆ ಸಜ್ಜಾಗಿದೆ. ಹೌದು, ಆಗಸ್ಟ್ 8 ರಂದು ಪೈಲ್ವಾನ್ ಚಿತ್ರವನ್ನು ತೆರೆ ಮೇಲೆ ತರೋಕೆ ಚಿತ್ರರಂಗ ಸಿದ್ಧತೆ ನಡೆಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕನ್ನಡದ ಅಗ್ರಗಣ್ಯ ನಟ ಸುದೀಪ್ ಈ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಅಭಿನಯಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಒಂದೇ ತಿಂಗಳಲ್ಲಿ ಎರಡು ಸ್ಟಾರ್ ನಟರ ಚಿತ್ರಗಳು ಬಿಡುಗಡೆ ಆಗುತ್ತಿರುವುದು ಸಜಜವಾಗಿ ಅಭಿಮಾನಿಗಳಲ್ಲಿ ಕುತೂಹಲವನ್ನು ಸೃಷ್ಟಿಸಿದೆ ಅನ್ನೋದು ಸುಳ್ಳಲ್ಲ. 


ಒಟ್ಟಿನಲ್ಲಿ ಆಗಸ್ಟ್ ತಿಂಗಳು ಸ್ಯಾಂಡಲ್‌ವುಡ್‌ನ ಸ್ಟಾರ್ ವಾರ್ ನಡೆಯೋ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ದರ್ಶನ್ ಹಾಗೂ ಸುದೀಪ್ ಒಂದು ಕಾಲದಲ್ಲಿ ಕುಚುಕು ಗೆಳೆಯರು. ಒಬ್ಬರನ್ನು ಬಿಟ್ಟು ಒಬ್ಬರು ಇರದವರು. ಆದ್ರೆ ಇದೀಗ ಒಂದೇ ತಿಂಗಳಲ್ಲಿ ಕೇವಲ ಒಂದು ದಿನದ ಅಂತರದಲ್ಲಿ ಇಬ್ಬರೂ ತಮ್ಮ ಸಿನಿಮಾ ಬಿಡುಗಡೆ ಮಾಡೋಕೆ ಸಜ್ಜಾಗಿದ್ದಾರೆ. ಇದರಲ್ಲಿ ಗೆಲ್ಲೋರು ಯಾರು ಸೋಲೋರು ಯಾರು ಅನ್ನೋದನ್ನು ಪ್ರೇಕ್ಷಕರೇ ನಿರ್ಧರಿಸಬೇಕಿದೆ. 


మరింత సమాచారం తెలుసుకోండి: