ಶೃತಿ ಹರಿಹರನ್ ಇದೀಗ ಮತ್ತೊಮ್ಮೆ ಸುದ್ದಿ ಆಗಿದ್ದಾರೆ. ಈ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಮೀಟೂ ಆರೋಪ ಮಾಡಿ ಸದ್ದು ಮಾಡಿದ್ದ ಶೃತಿ ಹರಿಹರನ್ ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ. ಹಾಗಾದರೆ ಆ ವಿಷಯ ಏನು? ಶೃತಿಹರಿಹರನ್ ಈಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ನೋಡಿ ಉತ್ತರ.
(ಶೃತಿ ಹರಿರನ್)
ಶೃತಿ ಹರಿಹರನ್ ಕನ್ನಡ ಸಿನಿ ವೀಕ್ಷಕರಿಗೆ ಚಿರಪರಿಚಿತ ಹೆಸರು. ಶೃತಿ ಮಲಯಾಳಿ ಹುಡುಗಿ ಆದರೂ ಹುಟ್ಟಿ ಬೆಳಿದದ್ದು ಬೆಂಗಳೂರಿನಲ್ಲಿ. ಹೀಗಾಗಿ ಒಂದು ರೀತಿ ಕನ್ನಡತಿಯೇ ಆಗಿ ಬಿಟ್ಟಿದ್ದಾರೆ. ಈ ಹಿಂದೆ ಅರ್ಜುನ್ ಸರ್ಜಾ ಜೊತೆಗೆ ವಿಸ್ಮಯಾ ಚಿತ್ರದಲ್ಲಿ ಶೃತಿ ನಟಿಸಿದ್ದರು. ಅದಾದ ಮೇಲೆ ಅರ್ಜುನ್ ಸರ್ಜಾ ವಿರುದ್ಧ ಶೃತಿ ಮೀಟೂ ಆರೋಪ ಮಾಡಿದ್ದರು. ಈ ಮೂಲಕ ಸ್ಯಾಂಡಲ್ ವುಡ್ ನಾಚೆಗೂ ಸದ್ದು ಮಾಡಿದ್ದರು.
(ಶೃತಿ ಹರಿಹರನ್, ಅರ್ಜುನ್ ಸರ್ಜಾ)
ಅದಾದ ಬಳಿಕ, ಶೃತಿ ಹರಿಹರನ್ ಅವರು ರಾಜಕುಮಾರ್ ಅನ್ನೋವವರನ್ನು ಮದುವೆ ಆಗಿದ್ದಾರೆ ಎನ್ನುವ ಸಂಗತಿ ಬೆಳಕಿಗೆ ಬಂದಿತ್ತು. ಈಗ ಹೊಸ ವಿಷಯ ಏನಂದ್ರೆ, ವ್ಯಾಸಂಗದ ನೆಪ ಹೇಳಿ ಶೃತಿ ಈಗ ನ್ಯೂ ಯಾರ್ಕ್ ನಲ್ಲಿದ್ದಾರೆ. ಅಲ್ಲಿ ಒಂದು ವರ್ಷದ ನಿರ್ದೇಶನದ ಕೋರ್ಸ್ ಮಾಡುತ್ತಿದ್ದಾರೆ.
(ಶೃಇ ಹರಿಹರನ್, ರಾಜಕುಮಾರ್)
ಇದಿಷ್ಟೇ ಆಗಿದ್ದರೆ ಶೃತಿ ಹರಿಹರನ್ ಮತ್ತೆ ಸುದ್ದಿ ಆಗುತ್ತಿರಲಿಲ್ಲ. ಆದರೆ, ವಿದ್ಯಾಭ್ಯಾಸದ ಜೊತೆಗೆ ಶೃತಿ ತಾಯ್ತನದ ಸಂಭ್ರಮದಲ್ಲೂ ಇದ್ದಾರೆ. ಹೌದು ಹೀಗಾಗಿ ಶೃತಿ ಹರಿಹರನ್ ಮತ್ತೆ ಸುದ್ದಿ ಆಗಿದ್ದಾರೆ.
click and follow Indiaherald WhatsApp channel