ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಯುವರತ್ನ ಚಿತ್ರ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದರ ಜೊತೆಗೆ ಯಶ್ ಅವರ ಬಹು ನಿರೀಕ್ಷೆಯ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಕೂಡ ಮೈಸೂರಿನಲ್ಲಿ ನಡೆದಿದೆ.
ಇದೀಗ ವಿಷ್ಯ ಏನಪ್ಪ ಅಂದ್ರೆ, ಸ್ಯಾಂಡಲ್ ವುಡ್ ನ ಉತ್ತಮ ಗೆಳೆಯರಾದ ಯಶ್ ಮತ್ತು ಪುನೀತ್ ರಾಜ ಕುಮಾರ ಮೈಸೂರಿನಲ್ಲಿ ಭೇಟಿ ಆಗಿದ್ದಾರೆ. ಚಿತ್ರೀಕರಣದ ಮಧ್ಯೆ ಬಿಡುವು ಮಾಡಿಕೊಂಡು ಇಬ್ಬರೂ ಗೆಳೆಯರು ಭೇಟಿ ಆಗಿದ್ದಾರೆ.
ಇವರು ಭೇಟಿ ಆಗಿರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುನೀತ್ ಮತ್ತು ಯಶ್ ಇಬ್ಬರ ಅಭಿಮಾನಿಗಳು ಖುಷ್ ಆಗಿದ್ದಾರೆ. ಇಲ್ಲಿತನಕ ಮಂಢ್ಯ ಚುನಾವಣೆಯಲ್ಲಿ ಬ್ಯುಸಿ ಆಗಿದ್ದ ಯಶ್ ಅವರು ಪುನೀತ್ ಜೊತೆ ಕಾಣಿಸಿಕೊಂಡು ಇದೀಗ ಮತ್ತೆ ಸದ್ದು ಮಾಡಿದ್ದಾರೆ.
click and follow Indiaherald WhatsApp channel