ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ಬಾದಾಮಿ ಸೇರಿದಂತೆ ಅನೇಕ ಕಡೆ ಆಗಿರೋ ಅತೀವೃಷ್ಟಿ ಪ್ರದೇಶಕ್ಕೆ ಹೋಗೋಕೆ ಸಾಧ್ಯವಿಲ್ಲ. ಅನಾರೋಗ್ಯದ ಕಾರಣದಿಂದ ಹೋಗೋಕೆ ಆಗುತ್ತಿಲ್ಲ ಎಂದು ನಿನ್ನೆ ಟ್ವೀಟ್ ಮಾಡಿದ್ದರು. ಅದಕ್ಕೆ ಅನೇಕ ಜನರು ಟೀಕೆಯನ್ನು ವ್ಯಕ್ತಪಡಿಸಿದ್ದರು. ಕೇವಲ ಸಿದ್ದರಾಮಯ್ಯ ಅವರಷ್ಟೇ ಅಲ್ಲದೇ ಕುಮಾರಸ್ವಾಮಿಯೂ ಸಹ ಹೀಗೆ ಹೇಳಿದ್ದರು. ಅವರಿಗೂ ಸಹ ಟೀಕೆಗಳು ವ್ಯಕ್ತವಾಗಿದ್ದವು. 

ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪ್ರತಿನಿಧಿಯಾಗಿ ಮಗ ಶಾಸಕ ಯತೀಂದ್ರ ಅವರನ್ನು ಬಾದಾಮಿಗೆ ಕಳುಹಿಸಿದ್ದರು. ಅಲ್ಲದೇ ಎರಡು ನಿರಂತರ ಟ್ವೀಟ್ ಮಾಡಿ ಪ್ರವಾಹದ ಪರಿಸ್ಥಿತಿ ಬಗ್ಗೆ ಸ್ಪಂಧಿಸಿ ಮಾತನಾಡಿದ್ದರು. ಅದರಲ್ಲಿ 16 ಜಿಲ್ಲೆಗಳು ಪ್ರವಾಹಪೀಡಿತವಾಗಿವೆ. ತಮ್ಮ ರಾಜಕೀಯ ಜೀವನದಲ್ಲಿ ಇಷ್ಟೊಂದು ಬೀಕರ ಪ್ರವಾಹವನ್ನು ನೋಡಿಯೇ ಇಲ್ಲ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. 

ರಾಜ್ಯದ 16 ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ ಎಂದು ಸರ್ಕಾರ ಹೇಳಿದೆ. ಅಷ್ಟೇ ಅಲ್ಲದೇ 20ಕ್ಕೂ ಅಧಿಕ‌ ಜನರು ಬಲಿಯಾಗಿದ್ದಾರೆ. ಇದರ ಜೊತೆಗೆ ಅನೇಕ ಜಾನುವಾರುಗಳು ಸಾವನ್ನಪ್ಪಿವೆ. ಇದರ ಜೊತೆಗೆ ಹಲವಾರು ಮನೆಗಳು ಕೊಚ್ಚಿಕೊಂಡು ಹೋಗಿವೆ. ಇಷ್ಟೇ ಅಲ್ಲದೇ ಅನೇಕ ಸಾವು ನೋವು, ಕಷ್ಟ ನಷ್ಟಗಳು ಆಗೊವೆ. ಇಂತಹ ಪ್ರವಾಹವನ್ನು ನನ್ನ ಜೀವನದಲ್ಲೇ ಕಂಡಿಲ್ಲ ಎಂದು ಸಿದ್ದು ಹೇಳಿದ್ದಾರೆ. 

ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಿಂದ ಅನೇಕ ಹಾನಿಗಳು ಸಂಭವಿಸಿವೆ. ಅಲ್ಲಿನ ಜನರ ಜೀವನ ತತ್ತರಿಸಿ ಹೋಗಿದೆ. ಅಲ್ಲದೇ ಅನೇಕ ಕೇಂದ್ರ ಸರ್ಕಾರಿದನ್ನು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಗೋಷಣೆ ಮಾಡಬೇಕು ಎಂದು ಸಿದ್ದರಾಮಯಯ್ಯ ಅವರು ಒತ್ತಾಯಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಹೆಚ್ಚುವರಿ ಅನುದಾನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. 

 ಬಾದಾಮಿಯ 27 ಗ್ರಾಮಗಳು ಜಾಲಾವೃತವಾಗಿದೆ ಅನ್ನುವುದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ಕಾರಣ ನವಿಲು ತೀರ್ಥ ಜಲಾಶಯದಿಂದ ಬಿಡುಗಡೆ ಆಗ ಭಾರೀ ನೀರು. ಅನೇಕ ತಾಲೂಕಿನಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರಿಹಾರ ಕಾರ್ಯಗಳ ಉಸ್ತುವಾರಿ ವಹಿಸಿಕೊಳ್ಳುವಂತೆ ನನ್ನ ಮಗ ಯತೀಂಧ್ರ ಅವರಿಗೆ ಹೇಳಿ ಕಳುಹಿಸಿದ್ದೇ ಎಂದು ಅವರು ತಿಳಿಸಿದ್ದಾರೆ.  


మరింత సమాచారం తెలుసుకోండి: