ಹರಿಪ್ರಿಯಾ ಇದೀಗ ಹೊಸ ಸುದ್ದಿ ನೀಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ಆಗಿರೋ ನಟಿ ಅಂದ್ರೆ ಅದು ಹರಿಪ್ರಿಯ. ಒಂದಲ ಎರಡಲ್ಲ. ಬರೋಬ್ಬರಿ ಬಾಲ್ಕು ಚಿತ್ರಗಳಲ್ಲಿ ಬಿಡುವಿಲ್ಲದೇ ದುಡಿದು ಇದೀಗ ಬ್ರೇಕ್ ತೆಗೆದುಕೊಂಡಿದ್ದಾರೆ.
ಹೌದು, ಹರಿಪ್ರಿಯಾ ಬ್ರೇಕ್ ತೆಗೆದುಕೊಂಡು ಮಾಡುತ್ತಿರೋದಾದರೂ ಏನು? ಹರಿಪ್ರಿಯಾ ಈಗಷ್ಟೇ ನಾಲ್ಕು ಸಿನಿಮಾ ಮಾಡಿ ಮುಗಿಸಿದ್ದಾರೆ. ಇವುಗಳಲ್ಲಿ, ಎಲ್ಲಿದ್ದೆ ಇಲ್ಲಿತನಕ, ಕನ್ನಡ ಗೊತ್ತಿಲ್ಲ, ಕಥಾಸಂಗಮ, ಬಿಚ್ಚುಗತ್ತಿ, ಕುರುಕ್ಷೇತ್ರ ಸೇರಿವೆ.
ಈ ಎಲ್ಲ ಸಿನಿಮಾಗಳ ಡಬ್ಬಿಂಗ್ ಕೆಲಸ ಮುಗಿಸಿದ ಹರಿಪ್ರಿಯಾ ಕೊಂಚ ದಿನಗಳ ಕಾಲ ಬಿಡುವು ತೆಗೆದುಕೊಂಡಿದ್ದಾರೆ. ಕೆಲವು ದಿನಗಳ ಕಾಲ ಟ್ರಿಪ್ ಗೆ ಹೋಗೋಕೆ ನಿರ್ಧರಿಸಿದ್ದಾರೆ. ಆದರೆ ಎಲ್ಲಿಗೆ ಹೋಗ್ತಾ ಇದಾರೆ ಅಂತ ಇನ್ನೂ ತಿಳಿದು ಬಂದಿಲ್ಲ.
click and follow Indiaherald WhatsApp channel