ಇವತ್ತಿಗೆ ಕನ್ನಡ ಸಿನಿ ಜಗತ್ತಿನ ಟಾಪ್ ನಟ ಸುದೀಪ್. ಕನ್ನಡದಾಚೆಗೂ ತನ್ನ ಹೆಸರನ್ನು ಮಾಡಿದ್ದಾರೆ. ನಟ ಸುದೀಪ್ ಅವರಿಗೆ ಜುಲೈ 6 ನಿಜಕ್ಕೂ ವಿಶೇಷ ದಿನ. ಅದ್ಯಾಕೆ ಅಂತೀರಾ? ಅದಕ್ಕೆ ಕಾರಣ ಇದೆ. 2001ರ ಜುಲೈ 6 ರಂದು ಬಿಡುಗಡೆ ಆದ ಸಿನಿಮಾ ಸುದೀಪ್ ಬದುಕನ್ನೇ ಬದಲಾಯಿಸಿತು.
ಹೌದು, ಆ ಸಿನಿಮಾದ ಹೆಸರು ಹುಚ್ಚ. ಸುದೀಪ್ ನಟನೆಯ ಈ ಚಿತ್ರ ಸೂಪರ್ ಹಿಟ್ ಆಯ್ತು. ಜುಲೈ 6ರಂದು ಈ ಚಿತ್ರ ಬಿಡುಗಡೆಯಾಗಿತ್ತು. 2019, ಹೀಗಾಗಿ ಇವತ್ತಿಗೆ ಹುಚ್ಚನಿಗೆ 18 ವರ್ಷ ತುಂಬಿದೆ. ಹುಚ್ಚ ಸಿನಿಮಾದಲ್ಲಿ ಸುದೀಪ್ ಮಾಡಿದ ಕಿಚ್ಚನ ಯಾರಿಗೂ ಮರೆಯೋಕೆ ಸಾಧ್ಯವಿಲ್ಲ. ನಂತರ ಕಿಚ್ಚ ಸುದೀಪ್ ಅಂತಲೇ ಫೇಮಸ್ ಆದ್ರು.
ಅಷ್ಟಕ್ಕೂ ಈ ಚಿತ್ರದ ನಿರ್ದೇಶನ ಮಾಡಿದವರು ಓಂ ಪ್ರಕಾಶ್ ರಾವ್, ಆವತ್ತು ಓಂ ಪ್ರಕಾಶ್ ರಾವ್ ದೊಡ್ಡ ನಿರ್ದೇಶಕ. ಲಾಕಪ್ ಡೆತ್, ಸಿಂಹದ ಮರಿ, ಎಕೆ 47 ಅಂತಹ ದೊಒಡ್ಡ ದದೊಡ್ಡ ಸಿನಿಮಾ ಮಾಡಿದ್ದರು. ಅದಾದ ಮೇಲೆ ತಮಿಳಿನಲ್ಲಿ ತೆರೆಕಂಡಿದ್ದ, ಜೊತೆಗೆ ಹಿಟ್ ಕೂಡ ಆಗಿದ್ದ ಸೇತು ಚಿತ್ರವನ್ನ ಕನ್ನಡಕ್ಕೆ ತಂದರು. ಹುಚ್ಚ ಅನ್ನೋ ಹೆಸರಿಟ್ಟು ಸುದೀಪ್ ಮ್ಯಾನರಿಸಂಗೆ ಸರಿಯಾದ ಸಿನಿಮಾ ಮಾಡಿ ಸಕ್ಸಸ್ ಆದರು
click and follow Indiaherald WhatsApp channel