ರಕುಲ್ ಪ್ರೀತ್ ಮುಂಬೈಯಲ್ಲಿ ಬೀದಿ ಬದಿಯ ಬಿಕ್ಷುಕರಿಂದ ಕಿರುಕುಳ ಅನುಭವಿಸಿದ್ದಾರೆ. ಇಷ್ಟು ದಿನಗಳ ಕಾಲ ಸಾರ್ವಜನಿಕವಾಗಿ ಚಿಕ್ ಚಿಕ್ ಬಟ್ಟೆ ತೊಟ್ಟು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿ ಆಗಿದ್ದಾರೆ. 


ಹೌದು, ಅಸಲಿಗೆ ನಡೆದಿದ್ದಾದ್ರೂ ಏನು? ಮುಂಬೈನ ರೆಸ್ಟೋರೆಂಟ್ ನಿಂದ ರಕುಲ್ ಹೊರ ಬಂದು ತಮ್ಮ ಕಾರಿನ ಬಳಿ ಹೊರಟಾಗ, ಬಿಕ್ಷಕುಕರು ಹಣಕ್ಕಾಗಿ ಮೊರೆ ಇಟ್ಟಿದ್ದಾರೆ. ಜೊತೆಗೆ ಅವರನ್ನು ಬೆಂಬಿಡದೆ ಹಿಂಬಾಲಿಸಿದ್ದಾರೆ.


ಹಣ ನೀಡುವಂತೆ ಒತ್ತಾಯಿಸಿದ ಅವರ ವರ್ತನೆಯಿಂದ ಕಿರಿಕಿರಿಗೊಳಲಾದ ರಕುಲ್ ಪ್ರೀತ್ ಸಿಂಗ್ ಅವರು ಕಾರಿಗೆ ಹತ್ತಲು ಮುಂದಾದಾಗ, ಕಾರಿನ ಚಾಲಕ ಬಂದು ರಕುಲ್ ಪ್ರೀತ್ ಗೆ ರಕ್ಷಣೆ ನೀಡಿದ್ದಾರೆ. ನಂತರ ಕಾರಿನ ಒಳಗೆ ಕೂತು ರಕುಲ್ ಪ್ರೀತ್ ಅಲ್ಲಿಂದ ಹೋಗಿದ್ದಾರೆ. 


ಆದರೆ ಕೆಲವು ರಕುಲ್ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರೋದ ವಿಪರ್ಯಾಸವೇ ಸರಿ.


మరింత సమాచారం తెలుసుకోండి: