ಬೆಂಗಳೂರು: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಅನರ್ಹ ಶಾಸಕರಿಗೆ ಟಿಕೆಟ್​ ನೀಡಲು ಮುಂದಾಗಿರುವ ಪಕ್ಷದ ಕ್ರಮಕ್ಕೆ ಮೂಲ ಬಿಜೆಪಿಗರಲ್ಲಿ ಅಸಮಾಧಾನದ ಭಗಿಲೆದಿದ್ದೆ.  ಪಕ್ಷದ ಟಿಕೆಟ್​ಗಾಗಿ ಹಲವು ವರ್ಷಗಳಿಂದ ದುಡಿದ ನಮಗೆ ಈಗ ಅನ್ಯಾಯವಾಗುತ್ತಿದೆ ಎಂದು ಕೇಳಿಬಂದಿದೆ. 


ಅನರ್ಹ ಶಾಸಕರಿಗೆ ಟಿಕೆಟ್​ ನೀಡಿದಲ್ಲಿ ಮೂಲ ಬಿಜೆಪಿಗರು ಸಿಡಿದೆಳುವುದು ಸುಳ್ಳಲ್ಲ. ಈ ಹಿನ್ನೆಲೆ ಪಕ್ಷ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದು, ಅವರನ್ನು ಸಮಾಧಾನಿಸಲು ಪಕ್ಷದ ಪ್ರಭಾವಿ ನಾಯಕರ ತಂಡ​ ರಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಳೆದೆರಡು ದಿನಗಳ ಹಿಂದೆ ಉಪಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಟಿಕೆಟ್​ಗಾಗಿ ಪಕ್ಷದಲ್ಲಿ ಭಾರೀ ಪೈಪೋಟಿ ನಡೆದಿದೆ. ಅನರ್ಹ ಶಾಸಕರು / ಅವರ ಸಂಬಂಧಿಗಳಿಗೆ ಟಿಕೆಟ್​ ನೀಡಿದರೆ, ಮೂಲ ಬಿಜೆಪಿಗರು ಪಕ್ಷೇತರರಾಗಿ ಕಣಕ್ಕೆ ಇಳಿಯುವುದನ್ನು ಅಲ್ಲಗಳೆಯುವಂತಿಲ್ಲ. ಜೊತೆಗೆ ಅವರಿಗೆ ಕಾಂಗ್ರೆಸ್​ ಕೂಡ ಗಾಳ ಹಾಕುತ್ತಿದ್ದು, ಏನಾಗಲಿದೆ ಎಂಬ ಆತಂಕ ಪಕ್ಷದಲ್ಲಿ ಗೋಚರಿಸುತ್ತಿದೆ.


ಆದ್ದರಿಂದ ಟಿಕೆಟ್​ ಆಕಾಂಕ್ಷಿಗಳಾಗಿದ್ದ ಮನವೊಲಿಕೆಗೆ ಬಿಜೆಪಿ ಮುಂದಾಗಿದ್ದು, ಯಾರು ಕೂಡ ಬಂಡಾಯ ಏಳದಂತೆ ನೋಡಿಕೊಳ್ಳಲು ಕ್ಷೇತ್ರದ ಉಸ್ತುವಾರಿಯನ್ನು ಪಕ್ಷದ ನಾಯಕರಿಗೆ ನೀಡಲಾಗಿದೆ. ಇದಕ್ಕಾಗಿ ತಂಡ ರಚಿಸಿರುವ ಪಕ್ಷ ಅಭ್ಯರ್ಥಿಗಳ ಮನವೊಲಿಕೆ ಜವಾಬ್ದಾರಿಯನ್ನು ಪ್ರಮುಖ ಸಚಿವರು ಮತ್ತು ಸಂಸದರ ಹೆಗಲಿಗೆ ಏರಿಸಿದೆ. ಇನ್ನು ಬೆಂಗಳೂರಿನ ಕ್ಷೇತ್ರಗಳಿಗೆ ಮಾತ್ರ ಈ ತಂಡ ರಚಿಸಲಾಗಿದೆ.


ಬೆಂಗಳೂರಿನ ಮಹಾಲಕ್ಷೀ ಲೇಔಟ್ ನಲ್ಲಿ ಅನರ್ಹ​ ಶಾಸಕ ಗೋಪಾಲಯ್ಯಗೆ ಟಿಕೆಟ್​ ಸಿಗಲಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಮೇಯರ್​ ಎಸ್​ ಹರೀಶ್​, ಸಿಎಂ ಕೃಷ್ಣ ಮೊಮ್ಮಗ ಡಾ. ನಿರಂತರ್​ ಗಣೇಶ್​ ಕೂಡ ಟಿಕೆಟ್​ ಆಕಾಕ್ಷಿಗಳಾಗಿದ್ದಾರೆ. ಎಸ್​ ಹರೀಶ್​ ಈ ಹಿಂದಿನಿಂದಲೂ ಟಿಕೆಟ್​ ಆಕಾಂಕ್ಷಿಯಾಗಿದ್ದು, ಅವರ ಮನವೊಲಿಸುವಂತೆ  ಡಿಸಿಎಂ ಅಶ್ವತ್ಥ ನಾರಾಯಣ್, ಸುರೇಶ್ ಕುಮಾರ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಇನ್ನು ಹೊಸಕೋಟೆಯಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತ ಶರತ್​ ಬಚ್ಚೇಗೌಡ ಟಿಕೆಟ್​ ನೀಡದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆ ಅವರ ಮನವೊಲಿಕೆಗೆ ಆರ್​ ಅಶೋಕ್​ ಮುಂದಾಗಲಿದ್ದಾರೆ ಎಂದು ತಿಳಿದುಬಂದಿದೆ.


మరింత సమాచారం తెలుసుకోండి: