ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಇದೀಗ ಮತ್ತಿಬ್ಬರು ನಟಿಯರು ಹೆಜ್ಜೆ ಹಾಕಿದ್ದಾರೆ. ಹೌದು, ಸುಜಯ್ ಶಾಸ್ತ್ರಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಹಾಗೂ ಕವಿತಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. 


 


ಆದರೆ ಇದೀಗ ಹೊಸ ವಿಷ್ಯ ಏನಪ್ಪ ಅಂದರೆ, ಈ ಚಿತ್ರತಂಡಕ್ಕೆ ಶುಭಾ ಪೂಂಜಾ ಹಾಗೂ ಕಾರುಣ್ಯಾ ರಾಮ್ ಮತ್ತು ರಚನಾ ಅವರೂ ಸಾಥ್ ನೀಡಿದ್ದಾರೆ.


 


ಇದೇನಿದು ನಾಲ್ಕು ಹೀರೋಯಿನ್ ಇರುವ ಚಿತ್ರವಿದು ಎಂದು ಅಂದುಕೊಳ್ಳಬೇಡಿ. ಇವರಾರೂ ಈ ಚಿತ್ರದಲ್ಲಿ ಪೂರ್ಣವಾಗಿ ‌ನಟಿಸಿಲ್ಲ. ಬದಲಾಗಿ ಒಂದು ಹಾಡಿನಲ್ಲಿ ಬಂದು ಹೆಜ್ಜೆ ಹಾಕಿ ಚಿತ್ರದ ಮೆರಗನ್ನು ಅವರು ಹೆಚ್ಚಿಸಿದ್ದಾರೆ ಅಷ್ಟೇ. 

 

ಈ ಚಿತ್ರಕ್ಕೆ ಮೈತ್ರಿ ಅಯ್ಯರ್ ಅವರ ಗಾಯನವಿದ್ದು, ಜುಲೈ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

 

మరింత సమాచారం తెలుసుకోండి: