ಹೌದು ಹೆಣ್ಣುಮಕ್ಕಳ ವಿವಾಹದ ಕಾನೂಬದ್ದ ವಯಸ್ಸನ್ನು ಪರೀಷ್ಕರಿಸುವಂತಹ ಸುಳಿವನ್ನು ಈ ಕುರಿತ ಮಹತ್ವದ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಶನಿವಾರ ನೀಡಿದ್ದಾರೆ.
“ಹೆಣ್ಣುಮಕ್ಕಳಲ್ಲಿನ ಅಪೌಷ್ಟಿಕತೆ ಮುಕ್ತವಾಗಿ ಸಲು, ಅವರ ಮದುವೆ ವಯಸ್ಸು ಎಷ್ಟಿರಬೇಕು ಎಂದು ನಿರ್ಣಯಿಸಲು ಒಂದು ಸಮಿತಿಯನ್ನು ರಚಿಸಿದ್ದೇವೆ’ ಎಂದು ಪ್ರಧಾನಿ ಭಾಷಣದಲ್ಲಿ ಪ್ರಸ್ತಾವಿಸಿದ್ದರು.
ಪ್ರಸ್ತುತ ಭಾರತದಲ್ಲಿ ಹೆಣ್ಣುಮಕ್ಕಳ ಕಾನೂನು ಬದ್ಧ ವೈವಾಹಿಕ ವಯೋಮಾನ ಕನಿಷ್ಠ 18 ವರ್ಷ, ಹುಡುಗರಿಗೆ ಕನಿಷ್ಠ 21 ವರ್ಷ ನಿಗದಿಪಡಿಸಲಾಗಿದೆ. ಆದರೆ 18ನೇ ವಯಸ್ಸಿಗೆ ಮದುವೆಯಾಗಿ ತಾಯ್ತನ ಹೊಂದಿದವರಲ್ಲಿ ಅಪೌಷ್ಟಿಕತೆ ಅತಿದೊಡ್ಡ ಸವಾಲಾಗಿ ಕಾಡುತ್ತಿದೆ. ತಾಯಂದಿರ ಮರಣ ಪ್ರಮಾಣ (ಎಂಎಂಆರ್) ತಗ್ಗಿಸಲು ಈಗಾಗಲೇ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.
ಹಳೇ ಕೂಗು: ಮದುವೆಯ ವಯೋಮಾನ ಪರಿಷ್ಕರಿಸುವ ಈ ಕೂಗು ದಶಕಗಳಿಂದ ಇದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಾಲ ಕಾಲಕ್ಕೆ ತಕ್ಕಂತೆ ವಯೋಮಿತಿಯನ್ನು ಪರಿಷ್ಕರಿಸಬೇಕು ಎಂದು ಹೇಳುತ್ತಲೇ ಬಂದಿತ್ತು. ಜಗತ್ತಿನ 140ಕ್ಕೂ ಹೆಚ್ಚು ರಾಷ್ಟ್ರಗಳು ಹೆಣ್ಮಕ್ಕಳ ಮದುವೆ ವಯಸ್ಸನ್ನು 18 ವರ್ಷ ಮೇಲ್ಪಟ್ಟು ನಿಗದಿಪಡಿಸಿವೆ.
ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 1929ರ ಶಾರದಾ ಕಾಯ್ದೆ ಅನ್ವಯ ನಿಗದಿಪಡಿಸಲಾಗಿದೆ. ಕಾಯ್ದೆ ಜಾರಿಯ ಆರಂಭದಲ್ಲಿ ಹೆಣ್ಣುಮಕ್ಕಳ ವೈವಾಹಿಕ ವಯೋಮಿತಿ ಕನಿಷ್ಠ 15 ವರ್ಷ ಎಂದಾಗಿತ್ತು. ನಂತರ ಈ ಕಾಯ್ದೆಗೆ 1978ರಲ್ಲಿ ತಿದ್ದುಪಡಿ ತಂದು, ಕನಿಷ್ಠ 18 ವರ್ಷಕ್ಕೆ ಹೆಚ್ಚಿಸ ಲಾಗಿತ್ತು. ಒಂದು ವೇಳೆ ಈಗ ಕಾಯ್ದೆಗೆ ತಿದ್ದುಪಡಿ ತಂದರೆ, ಮೋದಿ ಸರಕಾರಕ್ಕೆ ಇದು ಕೂಡ ಐತಿಹಾಸಿಕ ಹೆಜ್ಜೆಯಾಗಲಿದೆ.
click and follow Indiaherald WhatsApp channel