ಕೆಜಿಎಫ್ ಚಿತ್ರದ ಮೂಲಕ ರಾಷ್ಟ್ರಾದ್ಯಂತ ಭಾರೀ ಸದ್ದು ಮಾಡಿದ ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬಕ್ಕೆ ಕೆಜಿಎಫ್-2. ಹೌದು ಇದೇನಿದು ಅಷ್ಟು ದೊಡ್ಡ ಚಿತ್ರ ಇಷ್ಟು ಬೇಗ ರಿಲೀಸ್ ಆಗುತ್ತಾ ಎಂದು ಆಗುವಂತಹ ವಿಷಯವೊಂದು ಇದೀಗ ಸುದ್ದಿಯಾಗಿದೆ. ರಾಕಿಂಗ್​ ಸ್ಟಾರ್​ ಯಶ್​​ ಹುಟ್ಟು ಹಬ್ಬಕ್ಕೆ ಇನ್ನೊಂದೇ ತಿಂಗಳು ಬಾಕಿಯಿದ್ದು, ಈ ಸಲ ರಾಕಿಭಾಯ್​ ಬರ್ತ್ ಡೇ ಸಿಕ್ಕಾಪಟ್ಟೆ ಸ್ಪೆಷಲ್ ಗಿಪ್ಟ್ ಇದೆ. ಅದು ಕೆಜಿಎಫ್ ನಿಂದ. ಇದಕ್ಕಾಗಿ ಅಭಿಮಾನಿಗಳ ಜೊತೆಗೆ  ಇಂಡಿಯನ್​ ಸಿನಿ ಇಂಡಸ್ಟ್ರಿ ಕಾಯುತ್ತಿದೆ. 
 
ಎಲ್ಲಾ ಸಿನಿ ನಟರು, ಸೂಪರ್​​ ಸ್ಟಾರ್​ಗಳ ಹುಟ್ಟು ಹಬ್ಬಕ್ಕೆ ಗಿಫ್ಟ್​​ಗಳು ಸಾಮಾನ್ಯ. ಅಭಿಮಾನಿಗಳು ನೆಚ್ಚಿನ ನಟರಿಗಾಗಿ ಕೈಲಾದಷ್ಟು ಖರ್ಚು ಮಾಡಿ ಉಡುಗೊರೆಯನ್ನು ಕೊಡುತ್ತಾರೆ. ಸ್ಟಾರ್ಸ್​ ಕೂಡ ಆ ಸ್ಪೆಷಲ್​​ ಡೇ, ತಮ್ಮ ಸಿನಿಮಾಗಳ ಪೋಸ್ಟರ್​, ಟೀಸರ್​, ಟ್ರೈಲರ್​ ಅಂತ ಸರ್ಪ್ರೈಸ್​​ ಗಿಫ್ಟ್​ ಕೊಡುತ್ತಾರೆ. ಈ ಬಾರಿ ಯಶ್​​ ಜನ್ಮದಿನಕ್ಕೆ ಅಂಥದ್ದೇ ಸ್ಪೆಷಲ್​ ಗಿಫ್ಟ್​​ ರೆಡಿ ಆಗುತ್ತಿದೆ. ಆ ಗಿಪ್ಟ್ ನೋಡಿದರೆ ನೀವು ಕೂಡ ಶಾಕ್ ಆಗ್ತೀರಾ ಎಂಬ ಸುದ್ದಿ ಕೇಳಿಬರುತ್ತಿದೆ.
 
 ಜನವರಿ 8ಕ್ಕೆ ಯಶ್​ ಬರ್ತ್​​ಡೇ. ಅದೇ ದಿನ ಕೆಜಿಎಫ್​ ಚಾಪ್ಟರ್​-2 ಟೀಸರ್​​ ರಿಲೀಸ್​ಗೆ ಚಿತ್ರತಂಡ ಪ್ಲಾನ್​ ಮಾಡುತ್ತಿದೆ. ಕೆಜಿಎಫ್​ ಬ್ಲಾಕ್​ಬಸ್ಟರ್​ ಹಿಟ್​ ನಂತರ ಕೆಜಿಎಫ್​​ ಚಾಪ್ಟರ್​ 2 ಬಗ್ಗೆ ಯಾವ ರೇಂಜಿಗೆ ಹೈಪ್​ ಕ್ರಿಯೇಟ್​ ಆಗಿ ಎನ್ನುವುದನ್ನು ಹೇಳಬೇಕಿಲ್ಲ.
 
ಕಳೆದ ವರ್ಷದ ಯಶ್​ ಹುಟ್ಟುಹಬ್ಬದ ದಿನವೇ ಕೆಜಿಎಫ್​ ಚಿತ್ರದ ಫಸ್ಟ್ ವೀಡಿಯೋ ಝಲಕ್​ ರಿವೀಲ್​ ಆಗಿತ್ತು. ರಿಲೀಸ್ ಆಗಿ ನಿರೀಕ್ಷೆ ಮೀರಿ ಯಶಸ್ಸು ಪಡೆದಿತ್ತು. ಚಿತ್ರತಂಡವೇ ಹೇಳುವಂತೆ ಕೆಜಿಎಫ್​​ ಪ್ರೀಕ್ವೆಲ್​ಗಿಂತ ಸೀಕ್ವೆಲ್​​​​ 10 ಪಟ್ಟು ದೊಡ್ಡದಾಗಿರುತ್ತಂತೆ. ಹಾಗಾದ್ರೆ, ಚಾಪ್ಟರ್​​ 2ನಲ್ಲಿ ರಾಕಿ ಭಾಯ್​- ಅಧೀರ ನಡುವಿನ ಕಾದಾಟ ಹೇಗಿರುತ್ತೋ ಅನ್ನೋದನ್ನು ಊಹಿಸಿಕೊಂಡ್ರೆ ಫ್ಯಾನ್ಸ್​ ಥ್ರಿಲ್ಲಾಗುತ್ತಿದ್ದಾರೆ. ಕೆಜಿಎಫ್​ ಅಪ್​ಡೇಟ್​​ ಮತ್ತು ಸ್ಯಾಂಪಲ್​ಗಾಗಿ ಫ್ಯಾನ್ಸ್​​ ಕುತೂಹಲದಿಂದ ಕಾಯುತ್ತಿದ್ದು, ಜನವರಿ 8ಕ್ಕೆ ಯಶ್​ ಹುಟ್ಟುಹಬ್ಬದ ದಿನ ಅಭಿಮಾನಿಗಳು ಆ ಗಿಫ್ಟ್ ಗಾಗಿ ಕಾಯುತ್ತಿದ್ದಾರೆ.

మరింత సమాచారం తెలుసుకోండి: