ಬೆಂಗಳೂರು: ಕರುನಾಡ ಯುವರತ್ನ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಜೇಮ್ಸ್​ ಅವತಾರದಲ್ಲಿ ಅಖಾಡಕ್ಕೆ ಇಳಿದೇಬಿಟ್ಟಿದ್ದಾರೆ. ಹೌದು, ಸೈಲೆಂಟಾಗಿ ಕಿಡಿಗೇಡಿಗಳ ಮೂಳೆ ಮುರಿಯುವ ಕಾಯಕ ಶುರು ಮಾಡಿದ್ದು ಇದೀಗ ಭಾರೀ ಕುತೂಹಲ ಮೂಡಿಸಿದೆ. 
 
ರಾಜಕುಮಾರ ಎಂದೇ ಖ್ಯಾತಿ ಪಡೆದಿರುವ​ ಪುನೀತ್​ ರಾಜ್​ಕುಮಾರ್​ ಮತ್ತು ಬಹದ್ದೂರ್​ ಚೇತನ್​​ ಕ್ರೇಜಿ ಕಾಂಬಿನೇಷನ್​ ಸಿನಿಮಾ ಜೇಮ್ಸ್. ಇತ್ತೀಚೆಗಷ್ಟೆ ಬಾಲಾಂಜನೇಯ ಸ್ವಾಮಿಗೆ ಕೈಮುಗಿದು ಚಿತ್ರಕ್ಕೆ ಚಾಲನೆ ಕೊಟ್ಟಿದ್ದ ಚಿತ್ರತಂಡ, ಸದ್ಯ ಸೈಲೆಂಟಾಗಿ ಶೂಟಿಂಗ್​ ಸ್ಟಾರ್ಟ್​​​ ಮಾಡಿದೆ. ಅದು ಕೂಡ ಆ್ಯಕ್ಷನ್​​ ಎಪಿಸೋಡ್​ ಶೂಟಿಂಗ್​ ಎನ್ನೋದು ವಿಶೇಷ.
 
ಈ ಚಿತ್ರದಲ್ಲಿ ಮಾಸ್​​ ಲೋಕಲ್​ ಹುಡುಗನಾಗಿ ಪುನೀತ್​ ರಾಜ್​ಕುಮಾರ್​ ಬಣ್ಣ ಹಚ್ಚಿದ್ದಾರೆ. ಬಹದ್ಧೂರ್​ ಚೇತನ್​ ಪವರ್​ ಸ್ಟಾರ್​ ಅಭಿಮಾನಿಗಳನ್ನ ಮನಸ್ಸಿನಲ್ಲಿಟ್ಟುಕೊಂಡು ಜೇಮ್ಸ್​ ಕತೆ ಹೆಣೆದಿದ್ದಾರೆ. ಅಪ್ಪುನ ಬಹಳ ವಿಭಿನ್ನ ಅವತಾರದಲ್ಲಿ ತೋರಿಸೋ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗ್ತಿದೆ. ಪಕ್ಕಾ ಮಾಸ್​ ಮಾಸಾಲಾ ಆ್ಯಕ್ಷನ್​ ಎಂಟ್ರಟ್ರೈನರ್​ ಸಿನಿಮಾ ಇದು. ಅಪ್ಪು ಆ್ಯಕ್ಷನ್​. ಆ್ಯಕ್ಷನ್​​ ಅಂದ್ರೆ ಅಪ್ಪು. ಹಾಗಾಗಿ ಬಹಳ ವಿಭಿನ್ನವಾಗಿ ಆ್ಯಕ್ಷನ್​ ಸೀಕ್ವೆನ್ಸ್​ ಕಂಪೋಸ್ ಮಾಡಲಾಗ್ತಿದೆ.
 
ಪ್ರಸ್ತುತ ಪುನೀತ್​ ರಾಜ್ ​ಕುಮಾರ್​​ ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಶೂಟಿಂಗ್​ ನಲ್ಲಿ ಬ್ಯೂಸಿಯಾಗಿದ್ದಾರೆ. ಮೊನ್ನೆ ​ಮೊನ್ನೆಯಷ್ಟೆ ಜಾನಿ ಮಾಸ್ಟರ್​​ ನೃತ್ಯ ಸಂಯೋಜನೆಯಲ್ಲಿ ‘ಊರಿಗೊಬ್ಬ ರಾಜ’ ಎನ್ನೋ ಸಾಂಗ್​ ಶೂಟ್​ ಮಾಡಿ ಮುಗಿಸಿದ್ದಾರೆ. ಫೆ.24ಕ್ಕೆ ಡ್ಯುಯೆಟ್​ ಸಾಂಗ್​ ಶೂಟಿಂಗ್​ಗಾಗಿ ಯೂರೋಪ್​ ಫ್ಲೈಟ್​ ಹತ್ತಲಿದ್ದಾರೆ. ಈ ಗ್ಯಾಪ್​ನಲ್ಲೇ ಜೇಮ್ಸ್​ ಸಿನಿಮಾದ ಸಣ್ಣ ಆ್ಯಕ್ಷನ್​ ಸೀಕ್ವೆನ್ಸ್​ ಶೂಟಿಂಗ್​ ಮಾಡಲಾಗುತ್ತಿದೆ.
 
ನಾಲ್ಕರಿಂದ ಐದು ದಿನಗಳ ಸಣ್ಣ ಶೆಡ್ಯೂಲ್​ ನಲ್ಲಿ ರವಿವರ್ಮ ಸಾಹಸ ಸಂಯೋಜನೆಯಲ್ಲಿ ಜೇಮ್ಸ್​ ಅಬ್ಬರಿಸ್ತಿದ್ದಾನೆ. ವೈಟ್​ ಫೀಲ್ಡ್​ ಹೂಡಿ ಬಳಿ ಸೆಟ್​ ಆಗಿ ಈ ಆ್ಯಕ್ಷನ್​ ಎಪಿಸೋಡ್​ ಚಿತ್ರೀಕರಣ ಮಾಡಲಾಗ್ತಿದೆ. ಕಥೆಗೆ ತಕ್ಕಂತೆ ನೈಟ್​​ ಮೂಡ್​ ನಲ್ಲಿ ಶೂಟಿಂಗ್​ ಮಾಡಲಾಗ್ತಿದೆ. ಪವರ್​ ಸ್ಟಾರ್​ ನೆವರ್​ ಬಿಫೋರ್​ ಅನ್ನುವಂತೆ ಸ್ಟಂಟ್ಸ್​​ನ ಟ್ರೈ ಮಾಡ್ತಿದ್ದಾರೆ. ಐದು ದಿನಗಳ ಕಾಲ ರಾತ್ರಿ ಹೊತ್ತು ಸೆಟ್​ನಲ್ಲಿ ಫಸ್ಟ್​ ಶೆಡ್ಯೂಲ್​ ಕಂಪ್ಲೀಟ್​ ಮಾಡುವ ಲೆಕ್ಕಾಚಾರ ಮಾಡಿದ್ದಾರೆ.

మరింత సమాచారం తెలుసుకోండి: