ಕೊರೋನಾ ವೈರಸ್ ಅನ್ನು ತಡೆಯುವ ಉದ್ದೇಶದಲ್ಲಿ ದೇಶದಲ್ಲಿ ಎರಡು ಬಾರಿ ಲಾಕ್ ಡೌನ್ ಅನ್ನು ಮಾಡಲಾಗಿತ್ತು. ಆದರೆ ಮೂರನೇ ಬಾರಿಗೆ ಲಾಕ್ ಡೌನ್ ವಿಧಿಸಿದ್ದರೂ ಸ್ವಲ್ಪ ಮಟ್ಟಿಗೆ ಲಾಕ್ ಡೌನ್ ಸಡಿಲಿಕೆಯನ್ನು ಮಾಡಲಾಗಿದೆ. ಇದರಿಂದಾಗಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸೋಂಕು ದ್ವಿಗುಣಗೊಳ್ಳುತ್ತಲೇ ಇದೇ ಇದು ಹೀಗೆ ಮುಂದುವರಿದರೆ ಕೊರೋನಾ ವೈರಸ್  ಚೀನಾ ದೇಶವನ್ನು ಎಲ್ಲಿ ಹಿಂದಿಕ್ಕುತ್ತದೋ ಎಂಬ ಆತಂಕ ಶುರುವಾಗಿದೆ.

 

ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೊನಾ ಸೋಂಕು ಹರಡುವಿಕೆ ಹೀಗೆ ಮುಂದುವರೆದರೆ ಸೋಂಕು ಪೀಡಿತರ ಸಂಖ್ಯೆಯಲ್ಲಿ ಭಾರತ, ಚೀನಾ ವನ್ನೂ ಹಿಂದಿಕ್ಕಲಿದೆ ಎಂಬ ಆತಂಕಕಾರಿ

 

ನಂಬಲು‌ ತುಸು ಕಷ್ಟವಾಗಬಹುದು; ಆದರೆ ವಾಸ್ತವ. ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೀಗೆ ಮುಂದುವರೆದರೆ ಭಾರತದ ಭವಿಷ್ಯ ಕರಾಳವಾಗುತ್ತದೆ ಎಂಬುದು ಕಟು ವಾಸ್ತವ. ಭಾರತ ಏಕೆ ಭಯ ಪಡಬೇಕು ಎಂಬುದಕ್ಕೆ ಈ ಅಂಕಿ ಸಂಖ್ಯೆಗಳೇ ಸಾಕ್ಷಿ.

 

ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಅಮೇರಿಕಾ ಅಗ್ರ ಸ್ಥಾನದಲ್ಲಿದೆ. ಕೊರೋನಾವೈರಸ್‌ (Coronavirus) ಹುಟ್ಟೂರಾದ ಚೀನಾ 11ನೇ ಸ್ಥಾನದಲ್ಲಿದೆ. ಭಾರತ ಇರುವುದು 14ನೇ ಸ್ಥಾನದಲ್ಲಿ. ಅಂದರೆ 3 ಸ್ಥಾನಗಳ ಹಿಂದಷ್ಟೇ. ಪೆರು ಎಂಬ ಕಿರುದೇಶ 13ನೇ ಸ್ಥಾನದಲ್ಲಿದೆ. ಆದರೆ ಭಾರತ ನಾಳೆಯೊ, ನಾಳಿದ್ದೋ ಅಥವಾ ನಾಳಿದ್ದೋ ಪೆರುವನ್ನು ಹಿಂದೂಡಿ 13ನೇ ಸ್ಥಾನಕ್ಕೆ ಜಿಗಿಯಬಹುದು. ಏಕೆಂದರೆ ಪೆರು‌ ದೇಶದ ಕೊರೊನಾ ಪೀಡಿತರ ಸಂಖ್ಯೆ 61,847. ಭಾರತದ ಕೊರೊನಾ ಪೀಡಿತರ ಸಂಖ್ಯೆ 59,662. ಎರಡೂ ದೇಶಗಳ ನಡುವಿನ ವ್ಯತ್ಯಾಸ ಕೇವಲ 2,185.

 

ಇನ್ನು ಚೀನಾ ವಿಷಯಕ್ಕೆ ಬಂದರೆ ಅಲ್ಲಿನ ಕೊರೋನಾ ಪೀಡಿತರ ಸಂಖ್ಯೆ 82,887. ಭಾರತದ ಕೊರೊನಾ ಪೀಡಿತರ ಸಂಖ್ಯೆ 59,662. ಎರಡೂ ದೇಶಗಳ ನಡುವಿನ ವ್ಯತ್ಯಾಸ ಕೇವಲ 23,225. ಚೀನಾದಲ್ಲಿ ಕೊರೋನಾ ವೈರಸ್ ಹರಡುವಿಕೆ ಸಂಪೂರ್ಣಕ್ಕೆ ನಿಯಂತ್ರಣಕ್ಕೆ ಬಂದಿದೆ. ಮೇ 9ನೇ ತಾರೀಖು ಚೀನಾದಲ್ಲಿ ಓರ್ವ ವ್ಯಕ್ತಿಗೆ ಮಾತ್ರ ಕೊರೋನಾ ಕಾಣಿಸಿಕೊಂಡಿದೆ. ಕಳೆದ ಕೆಲ ದಿನಗಳಿಂದ ದಿನಕ್ಕೆ ಒಬ್ಬ, ಕೆಲವೊಮ್ಮೆ ಒಬ್ಬರಿಗೂ ಇಲ್ಲ ಎಂಬ ವರದಿಯೇ ಬರುತ್ತಿವೆ. ಚೀನಾ ಅಂಕಿಅಂಶಗಳನ್ನು ಮುಚ್ಚಿಡುತ್ತದೆ ಎಂಬ ವಿಷಯ ಕೂಡ ಚರ್ಚಾರ್ಹ. ಆದರೆ ಇದು ಜಾಗತಿಕವಾಗಿ ಲಭ್ಯವಿರುವ ಮಾಹಿತಿ.

 

ಆದರೆ ಭಾರತದಲ್ಲಿ ಕಳೆದ 3 ದಿನಗಳಿಂದ ಪ್ರತಿದಿನವೂ 3 ಸಾವಿರಕ್ಕಿಂತ ಹೆಚ್ಚು ಜನರಿಗೆ ಕೊರೋನಾ ವೈರಸ್ ಹರಡುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಮೇ 6ನೇ ತಾರೀಖು 3,561 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮೇ 7ರಂದು 3,390 ಜನರಿಗೆ ಸೋಂಕು ವ್ಯಾಪಿಸಿದೆ ಮತ್ತು ಮೇ 8ರಂದು 3,320 ಜನರು ಸೋಂಕು ಪೀಡಿತರಾಗಿದ್ದಾರೆ. ಅಷ್ಟೇಯಲ್ಲ, ಸ್ವಲ್ಪ ಹಿಂದಿನ‌ ಅಂಕಿ ಅಂಶಗಳನ್ನು ಗಮನಿಸುವುದಾದರೆ ದಿನನಿತ್ಯ 2 ಸಾವಿರ ಪ್ರಕರಣಗಳು ವರದಿಯಾಗಲು ವಾರದಿಂದಲೇ ಆರಂಭವಾಗಿದೆ. ಮೇ 2ರಂದು 2,487, ಮೇ 3 ರಂದು 2,573, ಮೇ 4ರಂದು 3,875 ಮತ್ತು ಮೇ 5ರಂದು 2,680 ಹೊಸ ಪ್ರಕರಣಗಳು ಕಂಡುಬಂದಿದ್ದವು.

 

ಆತಂಕಕಾರಿ ಮಾಹಿತಿ‌ ಎಂದರೆ ಇಷ್ಟು ತ್ವರಿತವಾಗಿ ಕೊರೊನಾ ವೈರಸ್ ಹರಡುತ್ತಿರುವುದು ಲಾಕ್ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿ. ಮೇ 17ಕ್ಕೆ 3ನೇ ಹಂತದ ಲಾಕ್ಡೌನ್ ಮುಕ್ತಾಯವಾಗುತ್ತದೆ. ಮತ್ತೆ ಲಾಕ್ಡೌನ್ ಅನ್ನು ಮುಂದುವರೆಸಲಾಗುತ್ತದೆಯೋ? ಮೊಟಕುಗೊಳಿಸಲಾಗುತ್ತದೆಯೋ? ಭಾಗಶಃ ಮುಂದುವರೆಸಲಾಗುತ್ತದೆಯೋ? ಬಿಲ್ ಕುಲ್ ಬಂದ್ ಮಾಡಲಾಗುತ್ತದೆಯೊ? ಎಂಬ ಮಾಹಿತಿಗಳಿಲ್ಲ. ಸದ್ಯ 3ನೇ ಹಂತದ ಲಾಕ್ಡೌನ್ ವಿಸ್ತರಣೆ ಅನಿವಾರ್ಯ ಅಂತಾ ಹೇಳಿ ಘೋಷಿಸಿ, ಬೆನ್ನಲ್ಲೇ ಮಾರ್ಗಸೂಚಿ ಸಡಿಲಿಸಿರುವ ಅಡ್ಡಗೋಡೆ ಮೇಲೆ ದೀಪವಿಟ್ಟಂತಹ ನಡೆ ನೋಡುತ್ತಿದ್ದರೆ ಲಾಕ್ಡೌನ್ ಮುಂದೆ ಮಂದುವರೆಯುವುದಿಲ್ಲವೇನೋ ಎನಿಸುತ್ತದೆ.

 

ಹಾಗಾದರೆ, ಲಾಕ್ಡೌನ್ (Lockdown) ಇದ್ದೂ ನಿಯಂತ್ರಣಕ್ಕೆ ಬಾರದ ಕೊರೊನಾ ಖುಲ್ಲಂ ಖುಲ್ಲಾ ಬಿಟ್ಟಾಗ ತೆಹಬದಿಗೆ ಬರುತ್ತದೆ ಎಂದು ಊಹಿಸಿದರೆ ಅದು ಶತಮೂರ್ಖತನವಾದೀತು. ಹೀಗೆ ದೇಶದಲ್ಲಿ ಕೊರೋನಾ ವೈರಸ್ ಹರಡುವಿಕೆ ತಡೆ ಆಗದೇ ಇದ್ದರೆ 11ನೇ ಸ್ಥಾನದಲ್ಲಿರುವ ಚೀನಾವನ್ನು ಹಿಂದಿಕ್ಕಲು ಭಾರತಕ್ಕೆ ಬಹಳ ದಿನ‌ ಬೇಕಾಗುವುದಿಲ್ಲ. ಒಮ್ಮೆ ಚೀನಾವನ್ನೂ ಮೀರಿ ಭಾರತದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಬೆಳೆದ ಮೇಲೆ ಭಾರತದ, ಇಲ್ಲಿನ ಆರೋಗ್ಯ ಕ್ಷೇತ್ರದ ನೈತಿಕ ಸ್ಥೈರ್ಯ ಕುಸಿಯುತ್ತದೆ ಎನ್ನುವುದು ಕೂಡ ಕಟು ವಾಸ್ತವ.

 

ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಮಾತ್ರ ಜಾಸ್ತಿ ಆಗುವುದಿಲ್ಲ. ಕ್ರೂರಿ ಕೊರೋನಾಗೆ ಬಲಿಯಾಗುವ ಬಡ ಭಾರತೀಯರ ಸಂಖ್ಯೆಯೂ ಹೆಚ್ಚಾಗುತ್ತದೆ. ಸದ್ಯ ಕೊರೊನಾ ಪೀಡಿತರ ಸಂಖ್ಯೆಯಲ್ಲಿ 13ನೇ ಸ್ಥಾನದಲ್ಲಿರುವ ಪೆರುವಿನಲ್ಲಿ ಸತ್ತವರ ಸಂಖ್ಯೆ ‌1,714. 14 ಸ್ಥಾನದಲ್ಲಿರುವ ಭಾರತದಲ್ಲಿ ಸತ್ತವರ ಸಂಖ್ಯೆ 1,981. ಅಂದರೆ ಈಗಾಗಲೇ ಸತ್ತವರ ಸಂಖ್ಯೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಕೊರೋನಾ ಪೀಡಿತರ ಸಂಖ್ಯೆಯಲ್ಲಿ‌ 11ನೇ ಸ್ಥಾನದಲ್ಲಿರುವ ಚೀನಾದಲ್ಲಿ 4,633 ಜನ ಮೃತಪಟ್ಟಿದ್ದಾರೆ. ಕಡೆಪಕ್ಷ ಭಾರತ ಸತ್ತವರ ಸಂಖ್ಯೆಯಲ್ಲಾದರೂ ಚೀನಾ ದಾಖಲೆಯನ್ನು ಮುರಿಯುವಲ್ಲಿ ಸೋಲಲೆಂದು ಹಾರೈಸಬೇಕಿದೆ.

మరింత సమాచారం తెలుసుకోండి: