ಆಸ್ಟ್ರೇಲಿಯಾ: ಕರೋನಾ ಬೀತಿ ಇದೀಗ ಹಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಹೌದು ಅಮೆರಿಕಾದ ಪ್ರಖ್ಯಾತ ನಟ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಟಾಮ್ ಹ್ಯಾಂಕ್ಸ್ ಮತ್ತು ಪತ್ನಿ ರೀಟಾ ವಿಲ್ಸನ್ ಗೆ ಮಾರಕ ಕರೋನಾ ವೈರಸ್ ಪಾಸಿಟಿವ್ ಇದೆ. ಹೌದು ಈ ಕುರಿತು ಖುದ್ದು ಟಾಮ್ ಹ್ಯಾಂಕ್ಸ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
63 ವರ್ಷದ ಟಾಮ್ ಹ್ಯಾಂಕ್ಸ್ ಮತ್ತು ರೀಟಾ ವಿಲ್ಸನ್ ಅವರು ಇದೀಗ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟಕ್ಕೂ ಈ ಕರೋನಾ ವೈರಸ್ ಅದ್ಯಾವಾಗ ಈ ದಂಪತಿಗೆ ತಗುಲಿತು ಅನ್ನೋದನ್ನು ಹುಡುಕುತ್ತ ಹೋದರೆ ಅದಕ್ಕೆ ಕಾರಣ ಅವರ ಆಸ್ಟ್ರೇಲಲಿಯಾ ಪ್ರವಾಸ. ಹೌದು ಎಲ್ವಿಸ್ ಪ್ರೆಸ್ಲಿಯ ಜೀವನ ಚರಿತ್ರೆ ಕುರಿತು ಸಿನಿಮಾ ಮಾಡಬೇಕು ಎಂದು ರೀಟಾ ಹಾಗೂ ವಿಲ್ಸನ್ ದಂಪತಿ ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ಗೆ ಹಾರಿದ್ದರು. ಈ ವೇಳೆ ಅವರಿಗೆ ಕರೋನಾ ವೈರಸ್ ಸೋಂಕು ತಗುಲಿದೆ.
ಈ ದಂಪತಿಗೆ ಕರೋನಾ ಪಾಸಿಟಿವ್ ಅಂತ ಗೊತ್ತಾಗಿದ್ದಾದ್ರು ಯಾವಾಗ? ಇಬ್ಬರಿಗೂ ಸುಸ್ತು ಕಂಡು ಬರುತ್ತಿತ್ತು. ಆಗ ಶೀತ ಕಾಣಿಸಿಕೊಂಡಿದೆ. ಆಗ ಅವರಿಬ್ಬರಿಗೂ ಮೈ ಕೈ ನೋವು ಹಾಗೂ ಜ್ವರ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಇಬ್ಬರೂ ವೈದ್ಯಕೀಯ ತಪಾಸಣೆಗೆ ಹೋದಾಗ ಅವರಿಗೆ ಕರೋನಾ ವೈರಸ್ ಪಾಸಿಟಿವ್ ಎನ್ನುವುದು ದೃಢಪಟ್ಟಿದೆ. ಇದನ್ನು ಟಾಮ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ಈ ಟಾಮ್ ಯಾರು? ಈತನ ಹಿನ್ನೆಲೆ ಏನು? ಇವರ ಮೂಲ ಹೆಸರು ಥಾಮಸ್. ಆದರೆ ಸಿನಿಮಾ ಜಗತ್ತಿನಲ್ಲಿ ಟಾಮ್ ಹ್ಯಾಂಕ್ಸ್ ಎಂದೇ ಇವರು ಪ್ರಸಿದ್ಧಿ ಪಡೆದಿದ್ದಾರೆ. ಇವರು ಹುಟ್ಟಿದ್ದು ಕ್ಯಾಲಿಫೋರ್ನಿಯಾದಲ್ಲಿ ಟಾಮ್ ಅವರಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್, ಅಕಾಡೆಮಿ ಅವಾರ್ಡ್ ಹಾಗೂ ಪೀಪಲ್ ಚಾಯ್ಸ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಟಾಮ್ ಅವರ ಹೆಂಡತಿ ಅಮೆರಿಕಾದ ನಟಿ ಗಾಯಕಿ ಮತ್ತು ನಿರ್ಮಾಪಕಿ. ಇವರು ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
click and follow Indiaherald WhatsApp channel