ಬೆಂಗಳೂರು: ದೇಶದಾದ್ಯಂತ ಕರೋನಾ ವೈರಸ್ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಏಪ್ರಿಲ್ 14ರವರೆಗೆ ಲಾಕ್ ಡೌನ್ ಮಾಡುವಂತೆ ಆದೇಶವನ್ನು ಹೊರಡಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಾಥಮಿಕ ಶಾಲೆಗಳ ಪರೀಕ್ಷೆಯನ್ನು ನಡೆಸದೆ ಪಾಸ್ ಮಾಡಲಾಗಿದೆ ಹಾಗೂ 7ನೇ ತರಗತಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಂದೂಡಲಾಗಿದೆ ಎಂದು ಶಿಕ್ಷಣ ಇಲಾಖೆ ಇತ್ತೀಚೆಗೆ ಮಾಹಿತಿಯನ್ನು ನೀಡಿತ್ತು ಅದರಂತೆ ಇಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತೊಂದು ವಿಷಯವನ್ನು ತಿಳಿಸಿದ್ದಾರೆ ಅಷ್ಟಕ್ಕೂ ಆ ವಿಷಯದ ಬಗೆಗಿನ ವಿವರಣೆ ಇಲ್ಲಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿದೆ. ಮಾರ್ಚ್ ೩೧ರ ವರೆಗೆ ಮಾತ್ರವೇ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತ್ತು. ಆದ್ರೇ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಕಾಲ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಣೆ ಮಾಡಿದ್ದರ ಹಿನ್ನಲೆಯಲ್ಲಿ, ರಾಜ್ಯದ ಶಾಲಾ ಶಿಕ್ಷಕರ ರಜೆಯನ್ನು ಏಪ್ರಿಲ್ 11ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂಗಿದೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, 2020-21ನೇ ಸಾಲಿನ ಶಾಲಾ ದಾಖಲಾತಿಯನ್ನು ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ. ಯಾವುದೇ ಶಾಲೆಗಳು ಪ್ರವೇಶಾತಿ ನಡೆಸುವಂತಿಲ್ಲ. ಖಾಸಗಿ ಶಾಲೆಗಳು ಶೈಕ್ಷಣಿಕ ವರ್ಷದ ಶುಲ್ಕವನ್ನು ಕಟ್ಟಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಒತ್ತಾಯಿಸುವಂತಿಲ್ಲ. ಶೈಕ್ಷಣಿಕ ಶಾಲಾ ಶುಲ್ಕ ಕಟ್ಟಲು ಡೆಡ್ ಲೈನ್ ಕೂಡ ನಿಗಧಿಪಡಿಸುವಂತಿಲ್ಲ ಎಂಬುದಾಗಿ ಸೂಚಿಸಿದರು.
ಒಂದು ವೇಳೆ ಈ ನಿಯಮವನ್ನು ಮೀರಿ ಶಾಲಾ ದಾಖಲಾತಿಯನ್ನು ನಡೆಸಿದ್ದಾಗಲೀ, ವಿದ್ಯಾರ್ಥಿಗಳಿಂದ ಶಾಲಾ ಶುಲ್ಕವನ್ನು ಕಟ್ಟಿಸಿಕೊಂಡು ಆದೇಶ ಮೀರಿ ನಡೆದದ್ದೇ ಆದರೇ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಂತಹ ಶಾಲೆಗಳ ಮಾನ್ಯತೆಯನ್ನೇ ರದ್ದುಗೊಳಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು. ಜೊತೆಗೆ ಇದೇ ಸಂದರ್ಭದಲ್ಲಿ ಲಾಕ್ ಡೌನ್ ಏಪ್ರಿಲ್ 14ರ ವರೆಗೆ ಜಾರಿಯಲ್ಲಿರುವುದರಿಂದ ರಾಜ್ಯದ ಶಾಲಾ ಶಿಕ್ಷಕರ ರಜೆಯನ್ನು ಏಪ್ರಿಲ್ 11ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂಬುದಾಗಿ ತಿಳಿಸಿದರು.
click and follow Indiaherald WhatsApp channel