ಮುಂಬೈ: ದೇಶ ಲಾಕ್ ಡೌನ್‌ನಲ್ಲಿರುವುದರಿಂದ ಭಾರತದಲ್ಲಿ ನಡೆಯುತ್ತಿದ್ದ ಧಾರವಾಹಿಗಳು ಹಾಗೂ ಸಿನಿಮಾ ಚಿತ್ರೀಕರಣಕ್ಕೆ ತಡೆಯಾಜ್ಞೆಯನ್ನು ನೀಡಿದೆ. ಇದರಿಂದ ಧಾರಾವಾಹಿಯನ್ನೇ ನೆಚ್ಚಿಕೊಂಡು  ಬದುಕುತ್ತಿದ್ದ ಅದೆಷ್ಟೋ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಂತೆ ಬಾಲಿವುಡ್‌ನಲ್ಲಿ 25 ಸಾವಿರ ದಿನಗೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ  ಇವರೆಲ್ಲರ ಸಂಕಷ್ಟಕ್ಕೆ ಬಾಲಿಹುಡ್‌ನ ಖ್ಯಾತ ನಾಯಕ ನಟ ಮುಂದಾಗಿದ್ದಾರೆ.. ಅಷ್ಟಕ್ಕೂ ಆ ನಟ ಯಾರು ಗೊತ್ತಾ?

 

ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟದಲ್ಲಿರುವ ಬಾಲಿವುಡ್ ನ 25 ಸಾವಿರ ದಿನಗೂಲಿ ಕಾರ್ಮಿಕರಿಗೆ ಆರ್ಥಿಕ ನೆರವನ್ನು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರಕಟಿಸಿದ್ದಾರೆ ಎಂದು ವೆಸ್ಟರ್ನ್ ಇಂಡಿಯನ್ ಸಿನಿ ನೌಕರರ ಒಕ್ಕೂಟ ತಿಳಿಸಿದೆ.

 

ಕೊರೋನಾ ಸೋಂಕು ಹರಡಂತೆ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಘೋಷಿಸಿದ್ದಾರೆ. ಆದರೆ, ಇದರಿಂದ ಬಾಲಿವುಡ್ ನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರರ ಮೇಲೆ ಕೆಟ್ಟ ರೀತಿಯ ಪರಿಣಾಮ ಬೀರಿದೆ.

 

ಬೀಯಿಂಗ್ ಹ್ಯೂಮನ್ ಪೌಂಢೇಷನ್ ಮೂಲಕ ದಿನಗೂಲಿ ಕಾರ್ಮಿಕರಿಗೆ ಸಲ್ಮಾನ್ ಖಾನ್ ನೆರವು ನೀಡಲಿದ್ದಾರೆ ಎಂದು ಎಫ್ ಡಬ್ಯ್ಲೂಐಸಿಇ ಅಧ್ಯಕ್ಷ ಬಿಎನ್ ತಿವಾರಿ ಹೇಳಿದ್ದಾರೆ.

 

ದಿನಗೂಲಿ ನೌಕರರಿಗೆ ನೆರವು ನೀಡಲು ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಪೌಂಢೇಷನ್ ಮುಂದೆ ಬಂದಿದೆ. 5 ಲಕ್ಷ ಕಾರ್ಮಿಕರ ಪೈಕಿ ೨೫ ಸಾವಿರ ಕಾರ್ಮಿಕರಿಗೆ ಆರ್ಥಿಕ ನೆರವು ಅಗತ್ಯವಾಗಿದೆ. ಈ ಕಾರ್ಮಿಕರನ್ನು ತಮ್ಮ ಸ್ವಂತ ವೆಚ್ಚದಲ್ಲಿ ನೋಡಿಕೊಳ್ಳುವುದಾಗಿ ಪೌಂಢೇಷನ್ ಹೇಳಿದೆ. ಕಾರ್ಮಿಕರಿಗೆ ನೇರವಾಗಿ ಹಣ ತಲುಪಿಸಲು ೨೫ ಸಾವಿರ ಕಾರ್ಮಿಕರ ಬ್ಯಾಂಕ್ ವಿವರವನ್ನು ಕೇಳಿದ್ದಾರೆ ಎಂದು ತಿವಾರಿ ತಿಳಿಸಿದ್ದಾರೆ.

 

ಉಳಿದ 4,75,000 ಕಾರ್ಮಿಕರು ಸುಮಾರು ಒಂದು ತಿಂಗಳವರೆಗೂ ಹೇಗೊ ಬದುಕಬಹುದು, ಎಲ್ಲಾ ಕಾರ್ಮಿಕರಿಗೂ ದೊಡ್ಡ ಮಟ್ಟದ ಪಡಿತರ ಪಾಕೆಟ್ ಗಳನ್ನು ಸಂಗ್ರಹಿಸಿದ್ದೇವೆ. ಆದರೆ, ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರೂ ಕೂಡಾ ಬಂದು ಸ್ವೀಕರಿಸಿಲ್ಲ, ಅವರಿಗೆ ಹೇಗೆ ತಲುಪಿಸಬೇಕು ಎಂಬ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

 

ಕಾರ್ಮಿಕರಿಗೆ ನೆರವು ನೀಡುವಂತೆ ಚಿತ್ರರಂಗದ ಹಲವು ಮಂದಿಗೆ ಸಂದೇಶ ಕಳುಹಿಸಲಾಗಿದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಿರ್ಮಾಪಕ ಮಹಾವೀರ್ ಜೈನ್ ಆಹಾರ ಮತ್ತು ಅಗತ್ಯ ವಸ್ತುಗಳ ವಿಷಯದಲ್ಲಿ ಸಹಾಯ ನೀಡಲು ಮುಂದಾಗಿದ್ದಾರೆ ಎಂದು ತಿವಾರಿ ತಿಳಿಸಿದ್ದಾರೆ

మరింత సమాచారం తెలుసుకోండి: