ಸದ್ಗುರು.. ಈ ಹೆಸರು ಕೇಳಿದರೆ ಲಕ್ಷಾಂತರ ಜನರಿಗೆ ಏನೋ ಒಂದು ನೆಮ್ಮದಿ, ಖುಷಿ ಹಾಗೂ ಪ್ರೀತಿ. ಹೌದು ಸದ್ಗುರು ಜಗತ್ತಿನ ಪ್ರಮುಖ ಆಧ್ಯಾತ್ಮ ವ್ಯಕ್ತಿಗಳಲ್ಲಿ ಒಬ್ಬರು. ಇದೀಗ ಕಾವೇರಿ ನದಿ ಉಳಿಸುವ ಸಲುವಾಗಿ ಸದ್ಗುರು ಅವರು ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ಜೀವನದ 12 ವರ್ಷಗಳನ್ನು ಅವರು ಇದಕ್ಕಾಗಿ ತೆಗೆದಿಟ್ಟಿದ್ದಾರೆ.  ಕಾವೇರಿ ನದಿ ಉಳಿಸುವ ಸಲುವಾಗಿ  ಪಣ ತೊಟ್ಟಿದ್ದಾರೆ. 


ಹೌದು, ಸದ್ಗುರು ನೇತೃತ್ವದ ಇಶಾ ಫೌಂಡೇಶನ್ ಕಾವೇರಿ ಕೂಗು ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನ ನಿನ್ನೆ ಕಾವೇರಿ ಉಗಮಸ್ಥಾನ ತಲಕಾವೇರಿಯಿಂದ ಶುರುವಾಗಿದೆ. ಇದರಲ್ಲಿ ಸದ್ಗುರು ಜೊತೆಗೆ ಅನೇಕ ಸೆಲೆಬ್ರಿಟಿಗಳೂ ಸಹ ಭಾಗಿಯಾಗಿದ್ದರು. ಈ ಅಭಿಯಾನ ಕಾವೇರಿ ನದಿ ತಟದಲ್ಲಿ ಮಣ್ಣಿನ ಸವೆತವನ್ನ ತಡೆಗಟ್ಟುವ ಉದ್ದೇಶ ಹೊಂದಿದೆ. ಇದರ ಜೊತೆಗೆ ಈಗಾಗಲೇ ಬತ್ತಿ ಹೋಗ್ತಿರೋ ಕಾವೇರಿಯನ್ನ ಉಳಿಸುವ ರೈತಾಪಿ ವರ್ಗಕ್ಕೆ ಹೆಚ್ಚು ಹೆಚ್ಚು ಮರ ಗಿಡಗಳನ್ನ ನೆಡಲು ಉತ್ತೇಜಿಸುವ ನೀಡುವ ಅಭಿಯಾನ ಇದು. 


ಸದ್ಗುರು ಅವರ ಈ ಪುಣ್ಯ ಕೆಲಸಕ್ಕೆ ಸ್ಯಾಂಡಲ್ ವುಡ್ ಕೂಡ ಕೈಜೋಡಿಸಿದೆ. ಹೌದು ಅಭಿಯಾನದ ಚಾಲನೆಯ ದಿನ ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ, ಹಾಗೂ ಚಾಕಲೇಟ್ ಹೀರೋ ದಿಗಂತ್ ಅವರು ಸಹ ಸದ್ಗುರು ಜಗ್ಗಿ ವಾಸುದೇವ್ ಅವರ ಜೊತೆ ಬೈಕ್ ರ್ಯಾಲಿಗೆ ಸಾಥ್ ಕೊಟ್ಟಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ಕೂಡ ಸದ್ಗುರು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಒಂದು ಸುದ್ದಿ ವಾಹಿನಿಗೆ ಸದ್ಗುರು ಅವರನ್ನು ಸಂದರ್ಶನವನ್ನೂ ಮಾಡಿದ್ದಾರೆ.


 
ಇನ್ನು ಸ್ಯಾಂಡಲ್‍ವುಡ್‍ನ ಬಹುತೇಕ ನಾಯಕಿ, ಹೀರೋಯಿನ್ ಕೂಡ ಸದ್ಗುರು ಅವರಿಗೆ ಬೆಂಬಲ ಸೂಚಿಸಿದ್ದಾರೆ. ನಟ ಗಣೇಶ್, ನಟಿ ಅಮೂಲ್ಯ, ನಟ ಉಪೇಂದ್ರ, ಸುದೀಪ್ ಹೀಗೆ ಅನೇಕರು ಈ ಅಭಿಯಾನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾವೇರಿ ಕೂಗಿಗಾಗಿ ಧನಿ ಎತ್ತಿದ್ದಾರೆ. ಕೊಡಗಿನಿಂದ ಶುರುವಾಗಿರೋ ಈ ಅಭಿಯಾನ ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿ ಹಲವೆಡೆ ನಡೆಯಲಿದೆ. ಈ ಅಭಿಯಾನವನ್ನು ಇಡೀ ದೇಶವೇ ತಿರುಗಿ ನೋಡುತ್ತಿದೆ ಅನ್ನೋದು ಸತ್ಯ.


మరింత సమాచారం తెలుసుకోండి: