ಕಿಸ್ ಸಿನಿಮಾ ವಿಮರ್ಶೆ:-
ನಟ, ನಟಿ: ವಿರಾಟ್, ಶ್ರೀಲೀಲಾ
ನಿರ್ದೇಶನ: ಎಪಿ ಅರ್ಜುನ್
ರೇಟಿಂಗ್ *


  ಎಪಿ  ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಿಸ್ ಚಿತ್ರ ಕಾಲೇಜ್ ಯುವಕರ ಮನ ಗೆದ್ದಿದೆ.  'ಕಿಸ್' ಇದೊಂದು ಕ್ಯೂಟ್ ಲವ್ ಸ್ಟೋರಿಯಾಗಿದೆ. 72 ದಿನಗಳ ಪ್ರೀತಿಯ ಒಪ್ಪಂದ ನಾಯಕ, ನಾಯಕಿ ನಡುವೆ ಆಗುತ್ತದೆ. 72 ದಿನಗಳ ಕಾಲ ನಂದಿನಿ (ಶ್ರೀ ಲೀಲಾ), ಅರ್ಜುನ್ (ವಿರಾಟ್)ಗೆ ಸೇವಕಿಯಾಗಿ ಕೆಲಸ ಮಾಡಿಕೊಂಡು ಇರಬೇಕಾಗುತ್ತದೆ. ಈ ಕಾಲವಧಿಯಲ್ಲಿ ಇವರಿಬ್ಬರ ನಡುವೆ ಪ್ರೇಮಕಥೆ ಪ್ರಾರಂಭವಾಗುತ್ತದೆ. ಸಿನಿಮಾದ ಕೊನೆಯವರೆಗೆ ಒನ್ ವೇ ಆಗಿರುವ ಲವ್ ಸ್ಟೋರಿ ಕಡೆ ಘಳಿಗೆಯಲ್ಲಿ ಏನಾಗುತ್ತದೆ ಎನ್ನುವುದು ಚಿತ್ರ ವೀಕ್ಷಿಸಿಯೇ ನೋಡಿ. 


ಸ್ಟೈಲಿಷ್ ಹುಡುಗ ವಿರಾಟ್:

ಕೊಹ್ಲಿ ರೀತಿ ಸಿನಿಮಾದ ನಾಯಕ ತಮ್ಮ ಮೊದಲ ಸಿನಿಮಾದಲ್ಲಿಯೇ ಸಿಕ್ಸ್ ಬಾರಿಸಿದ್ದಾರೆ. ವಿರಾಟ್ ಗತ್ತು, ಸ್ಟೈಲ್ ಎಲ್ಲವೂ ತುಂಬ ಚೆನ್ನಾಗಿದೆ. ಅದ್ಬುತವಾಗಿ ಡ್ಯಾನ್ಸ್ ಮಾಡಿದ್ದಾರೆ. ವಿರಾಟ್ ಫೈಟ್ಸ್ ನಲ್ಲಿ ಹಿಂದೆ ಬಿದ್ದಿಲ್ಲ, ನಟನೆಯಲ್ಲಿಯೂ ಕಡಿಮೆ ಇಲ್ಲ.
ಶ್ರೀ ಲೀಲಾ   ಚಿತ್ರದಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಂದದ ಜೊತೆಗೆ ನಟನೆ ಕೂಡ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ವಿರಾಟ್ ಗೆ ಶ್ರೀಲೀಲಾ ಸೂಪರ್ ಜೋಡಿ ಎನಿಸುತ್ತದೆ.ಕಾಸ್ಟೂಮ್ ಡಿಸೈನ್ ಸ್ಟೈಲಿಷ್ ಆಗಿದೆ.


 ಅರ್ಜುನ್ ಮತ್ತು ಹರಿಕೃಷ್ಣ ಕಾಂಬಿನೇಶನ್ ಸಂಗೀತವು ಮತ್ತೆ ಪ್ರೇಕ್ಷಕರ ಮನ ಗೆದ್ದಿದೆ. ಸಿನಿಮಾದ ಎಲ್ಲ ಹಾಡುಗಳು ಚೆನ್ನಾಗಿದೆ. 'ನೀನೆ ಮೊದಲು ನೀನೆ ಕೊನೆ..' ತುಂಬ ಅದ್ಭುತವಾಗಿ ಮೂಡಿ ಬಂದಿದೆ. ಮೇಕಿಂಗ್ ಮಾತ್ರ ಸಖತ್ ಸ್ಟೈಲಿಷ್ ಆಗಿದೆ.  ಸಿನಿಮಾದ ಹಾಡುಗಳು, ದೃಶ್ಯಗಳು ಎಲ್ಲವೂ ತೆರೆ ಮೇಲೆ ತುಂಬ ಚೆನ್ನಾಗಿ ಕಾಣುತ್ತದೆ. ಅರ್ಜುನ್ ಶೆಟ್ಟಿ ಕ್ಯಾಮರಾ ವರ್ಕ್, ದೀಪು ಎಡಿಟಿಂಗ್ ನಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಇಡೀ ಸಿನಿಮಾ ಶ್ರೀಮಂತಿಕೆಯಿಂದ ಕೂಡಿದೆ. ಆದರೆ ಕಥೆಯಲ್ಲಿ ಇನ್ನಷ್ಟು ಬಿಗಿ ಬೇಕಿತ್ತು ಎನ್ನಿಸುತ್ತದೆ. ಚಿತ್ರದ ಪ್ರಾರಂಭ, ನಾಯಕ, ನಾಯಕಿಯ ಪರಿಚಯದ ದೃಶ್ಯಗಳೆಲ್ಲ ಮುಗಿದು, ಚೆನ್ನಾಗಿ ಟೆಕ್ ಆಫ್ ಆಗುತ್ತದೆ. ಆದರೆ, ತದನಂತರ ಕೆಲವು ಕಡೆ ಬೋರ್ ಎನ್ನಿಸುತ್ತದೆ.


మరింత సమాచారం తెలుసుకోండి: