ಮೈಸೂರು : ಕಾಂಗ್ರೇಸ್ ಮತ್ತು ಜೆಡಿಎಸ್ ನ ಸಮ್ಮಿಶ್ರ ಸರ್ಕಾರ ಕಡವಿ ರಾಜ್ಯದಲ್ಲಿ ಸರ್ಕಾರ ರಚಿಸಿದ ಬಿಜೆಪಿ ಇದೀಗ ಜೆಡಿಎಸ್ ನ ಬುಟ್ಟಿಗೆ ಕೈಹಾಕಿದೆ. ಆಪರೇಷನ್ ಕಮಲ ಮೂಲಕ ಮೂವರನ್ನ ರಾಜೀನಾಮೆ ಕೊಡಿಸಿದ್ದ ಕಮಲದ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಂತು ಮಂಡ್ಯದಲ್ಲಿ ಕುಮಾರಸ್ವಾಮಿ ಪುತ್ರನಿಗೆ ಸೋಲುನ ರುಚಿ ತೋರಿಸಿದ್ರು. 


ಅದೇ ಬಿಜೆಪಿ ಇದೀಗ ಜೆಡಿಎಸ್ ಸೋಲಿಸಲು ಭರ್ಜರಿ ತಯಾರಿ ನಡೆಸಿದೆ. ಅದೇನೆಂದರೆ ಮಾಜಿ ಪ್ರಧಾನಿ ದೇವೇಗೌಡರ ಬೀಗ ಮದ್ದೂರು ಶಾಸಕ ತಮ್ಮಣ್ಣ ಆಪ್ತ, ಮೈಸೂರು ವಿಭಾಗದ ಜೆಡಿಎಸ್ ವೀಕ್ಷಕ, ಜೆಡಿಎಸ್ ನ ಅನ್ ಅಫೀಷಿಯಲ್ ಖಜಾಂಚಿ ಹಾಗೂ ಮಂಡ್ಯ ಜೆಡಿಎಸ್ ನ ಪವರ್ ಫುಲ್ ನಾಯಕ ಜಿಪಂ ಅಧ್ಯಕ್ಷೆ ನಾಗರತ್ನ ಪತಿ ಸ್ವಾಮಿಗೌಡ ಜೆಡಿಎಸ್ ಗೆ ಗುಡ್ ಬೈ ಹೇಳಿ ಇಂದು ಬಿಜೆಪಿ ಸೇರಿದ್ದಾರೆ.


 ಸಿಲಿಕಾನ್ ಸಿಟಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆಯ ಸಚಿವ ಡಿ.ವಿ ಸದಾನಂದಗೌಡ, ಡಿಸಿಎಂ ಅಶ್ವಥ್ ನಾರಾಯಣ ಅವರ ಸಮ್ಮುಖದಲ್ಲಿ ಸ್ವಾಮಿ ಗೌಡ ಬಿಜೆಪಿ ಸೇರಿದರು. ಇದರಿಂದ ಜೆಡಿಎಸ್ ಗೆ ಭಾರೀ ಹಿನ್ನಡೆ ಯಾಗಿದ್ದು ಇದೀಗ ಏನು ಮಾಡುತ್ತಾರೆಂದು ಕುತೂಹಲ ಉಂಟಾಗಿದೆ. ಶಾಸಕ ತಮ್ಮಣ್ಣ ಒಳೇಟು ಕೊಟ್ರು ಸ್ವಂತ ತಾಕತ್ತಿನ ಮೇಲೆ ಮನ್ ಮುಲ್ ನಿರ್ದೇಶಕರಾಗಿ ಆಯ್ಕೆಯಾದ ಸ್ವಾಮಿಗೌಡ ಅಧ್ಯಕ್ಷರಾಗುವ ದೃಷ್ಟಿಯಿಂದ ಬಿಜೆಪಿ ಸೇರಿದ್ದಾರೆ. ಸ್ವತಃ ಕುಮಾರಸ್ವಾಮಿ ತಮ್ಮಣ್ಣ ಕೋರಿಕೆ ಹಿನ್ನೆಲೆ ಸ್ವಾಮಿಗೌಡ ಯಾವುದೇ ಕಾರಕ್ಕೂ ಅಧ್ಯಕ್ಷರಾಗಬಾರದು ಅಂತ ಜೆಡಿಎಸ್ ಬೆಂಬಲಿತ ನಿರ್ದೇಶಕರಿಗೆ ಸೂಚನೆ ನೀಡಿದ್ದರಂತೆ. ಇದರಿಂದ ರೊಚ್ಚಿಗೆದ್ದ ಸ್ವಾಮಿಗೌಡ ದೇವೇಗೌಡರ ಫ್ಯಾಮಿಲಿಗೆ ಶಾಕ್ ಕೊಟ್ಟು ಬಿಜೆಪಿ ಸೇರಿದ್ದಾರೆ.


ಮದ್ದೂರಿನಲ್ಲಿ ಬಿಜೆಪಿಗೆ ಪ್ರಬಲ ಅಭ್ಯರ್ಥಿ ಸ್ವಾಮಿಗೌಡ. ಇನ್ನು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಕೊರತೆ ಎದುರಿಸುತ್ತಿತ್ತು. ಇದೀಗ ಸ್ವಾಮಿ ಗೌಡ ಎಂಟ್ರಿಯಿಂದ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಖಾತೆ ತೆರೆಯುವ ಭರವಸೆ ಮೂಡಿದೆ. ಉದ್ಯಮಿಯೂ ಆಗಿರುವ ಸ್ವಾಮಿಗಳ ಸಂಘಟನೆ ಹಾಗೂ ಹಣಕಾಸು ವಿಚಾರದಲ್ಲಿ ದೇವೇಗೌಡರ ಬೀಗ ಶಾಸಕ ತಮ್ಮಣ್ಣಗೆ ಸರಿಸಾಟಿಯಾಗಿರೋದು ಬಿಜೆಪಿ ಗೆ ಪ್ಲಸ್ ಪಾಯಿಂಟ್.


మరింత సమాచారం తెలుసుకోండి: