ಲವ್ ಮಾಕ್ಟೇಲ್ ಚಿತ್ರ ಡಾರ್ಲಿಂಗ್ ಕೃಷ್ಣರ ನಿರ್ದೇಶನದದ ರುಚಿಯನ್ನು ಕನ್ನಡಿಗರಿಗೆ ಪರಿಚಯಿಸಿದಂತಹ ಸಿನಿಮಾ ಈ ಸಿನಿಮಾದ ಮೂಲಕ ನಿರ್ದೇಶಕ ಟೋಪಿಯನ್ನು ತೊಟ್ಟ ಕೃಷ್ಣ ಅತ್ಯದ್ಬುತವಾಗಿ ಚಿತ್ರದ ನಿರ್ಮಿಸಿದ್ದಾರೆ. ಈ ಚಿತ್ರ ಕನ್ನಡಿಗರ ಮನ ಮುಟ್ಟಿದ ಈ ಚಿತ್ರದ. ಸ್ವೀಕ್ವೆಲ್ ಆಗಲಿದೆ.
ಹೌದು ಲವ್ ಮಾಕ್‌ಟೇಲ್' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ಎಲ್ಲರಿಗೂ ಅದರ ಸೀಕ್ವೆಲ್ ಬಗ್ಗೆ ಭಾರಿ ನಿರೀಕ್ಷೆ ಇದೆ. ಅಂಥವರಿಗೆಲ್ಲ ಡಾರ್ಲಿಂಗ್ ಕೃಷ್ಣ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದೆ. 'ಲವ್ ಮಾಕ್‌ಟೇಲ್ 2' ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
=
ಕೆಲವೇ ದಿನಗಳ ಹಿಂದೆ ನಟಿ ಮಿಲನ ನಾಗರಾಜ್ ಒಂದು ಕುತೂಹಲ ಮೂಡಿಸಿದ್ದರು. ಶೀಘ್ರದಲ್ಲೇ 'ಲವ್ ಮಾಕ್‌ಟೇಲ್ 2' ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಲಿದ್ದೇವೆ ಎಂದು ಅವರು ಘೋಷಿಸಿದ್ದರು. ಕಡೆಗೂ ಆ ದಿನ ಬಂದೇ ಬಿಟ್ಟಿದೆ. ಅಭಿಮಾನಿಗಳ ಕಾತರಕ್ಕೆ ಈಗ ತೆರೆ ಬಿದ್ದಿದೆ.
2020ರ ಆರಂಭದಲ್ಲಿ ಯಶಸ್ಸು ಕಂಡ ಕೆಲವೇ ಕೆಲವು ಸಿನಿಮಾಗಳಲ್ಲಿ 'ಲವ್ ಮಾಕ್‌ಟೇಲ್' ಸಹ ಒಂದು. ಕೊರೊನಾ ವೈರಸ್ ಹಾವಳಿ ಶುರು ಆಗುವುದಕ್ಕೂ ಮುನ್ನ ಬಿಡುಗಡೆ ಆಗಿದ್ದ ಆ ಚಿತ್ರ, ಅನೇಕ ಏಳುಬೀಳುಗಳ ನಡುವೆಯೂ ಉತ್ತಮ ಕಲೆಕ್ಷನ್ ಮಾಡಿತು. ನಂತರ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗಿ ಕೂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಪರಭಾಷೆಯ ಸ್ಟಾರ್‌ಗಳು ಕೂಡ 'ಲವ್ ಮಾಕ್‌ಟೇಲ್' ನೋಡಿ ಇಷ್ಟಪಟ್ಟಿದ್ದರು.
'ಲವ್ ಮಾಕ್ಟೇಲ್' ಮೂಲಕ ನಟ ಡಾರ್ಲಿಂಗ್ ಕೃಷ್ಣ ನಿರ್ದೇಶಕನಾಗಿಯೂ ಬಡ್ತಿ ಪಡೆದರು. ಮೊದಲ ಪ್ರಯತ್ನದಲ್ಲಿಯೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಚಂದನವನದಲ್ಲಿ ಅವರು ಕೂಡ ಒಬ್ಬ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡರು. ಅದರ ಪರಿಣಾಮವಾಗಿ ಆ ಸಿನಿಮಾದ 'ಪಾರ್ಟ್ 2' ಮಾಡುವುದಾಗಿ ಅವರು ಘೋಷಿಸಿದ್ದರು. ಶನಿವಾರ (ಆ.15) ಸಂಜೆ 'ಲವ್ ಮಾಕ್‌ಟೇಲ್ 2' ಫಸ್ಟ್‌ಲುಕ್ ಕೂಡ ಬಿಡುಗಡೆ ಆಗಿದೆ.
ಮೊದಲ ಪಾರ್ಟ್‌ನಲ್ಲಿ ಲವರ್ ಬಾಯ್ ಆಗಿದ್ದ ಡಾರ್ಲಿಂಗ್ ಕೃಷ್ಣ ಎರಡನೇ ಪಾರ್ಟ್‌ನಲ್ಲಿ ದೇವದಾಸ್ ರೀತಿ ಕಾಣಿಸಿಕೊಳ್ಳಲಿದ್ದಾರಾ? ಇಂಥದ್ದೊಂದು ಅನುಮಾನ ಹುಟ್ಟಿಕೊಂಡಿದೆ. ಯಾಕೆಂದರೆ ಫಸ್ಟ್‌ಲುಕ್ ಪೋಸ್ಟರ್‌ನಲ್ಲಿ ಅವರು ಗಡ್ಡಧಾರಿಯಾಗಿ ಪೋಸ್ ನೀಡಿದ್ದಾರೆ. ಈ ಗೆಟಪ್ ನೋಡಿಕೊಂಡು 'ಲವ್ ಮಾಕ್‌ಟೇಲ್ 2' ಕಥೆ ಏನಿರಬಹುದು ಎಂದು ಊಹಿಸುತ್ತಿದ್ದಾರೆ ಅಭಿಮಾನಿಗಳು. ಮೊದಲ ಪಾರ್ಟ್‌ನಲ್ಲಿ ನಿಧಿಮಾ ಎಂಬ ಪಾತ್ರವನ್ನು ಮಿಲನಾ ನಾಗರಾಜ್ ಮಾಡಿದ್ದರು. 2ನೇ ಪಾರ್ಟ್‌ನಲ್ಲಿ ಅವರು ಇರುತ್ತಾರೋ ಇಲ್ಲವೋ ಎಂಬುದು ಇನ್ನೂ ಗೊತ್ತಾಗಿಲ್ಲ.
click and follow Indiaherald WhatsApp channel