ನರೇಂದ್ರ ಮೋದಿ ತಾವು ಪ್ರಧಾನಿ ಹುದ್ದೆಯನ್ನು ಏರಿದ ಮೇಲೆ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಈ ಯೋಜನೆಗಳ ಮೂಲಕ ಸಾಕಷ್ಟು ಬಡ ಜನರು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಅದರಂತೆ ಪ್ರಧಾನಿ ಮೋದಿಯವರು ಬಿಡುಗಡೆಗೊಳಿಸಿದ ಮತ್ತೊಂದು ಮಹತ್ವವಾದ ಯೋಜನೆ ಯೊಂದು ಎರಡು ವರ್ಷ ತುಂಬುವುದೊರಳೆಗೆ 1 ಕೋಟಿ ಯಷ್ಟು ಜನರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.. ಅಷ್ಟಕ್ಕೂ ಆ ಯೋಜನೆ ಯಾವುದು ಗೊತ್ತಾ,,?
ಬಡ ಹಾಗೂ ಅರ್ಹ ಕುಟುಂಬಗಳ ಆರೋಗ್ಯದ ದೃಷ್ಟಿಯಿಂದ 2018ರ ಸೆಪ್ಟೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನಾ- ಆಯುಷ್ಮಾನ್ ಭಾರತ್' ಯೋಜನೆ ಇನ್ನೂ ಎರಡು ವರ್ಷ ಪೂರೈಸಿಲ್ಲ. ಆದರೆ ಈ ಅಲ್ಪ ಅವಧಿಯಲ್ಲಿಯೇ ಒಂದು ಕೋಟಿಗೂ ಮಿಕ್ಕಿ ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಅವರು, ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಈ ಯೋಜನೆಯು ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ. ಇದು ವಿಶ್ವ ಅತಿ ದೊಡ್ಡ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆ ಒಂದು ಕೋಟಿ ಜನರನ್ನು ತಲುಪಿರುವುದು ತುಂಬಾ ಸಂತೋಷದ ವಿಷಯ ಎಂದಿರುವ ಪ್ರಧಾನಿ, ಈ ಯೋಜನೆಯ ಫಲಾನುಭವಿಗಳ ಕುಟುಂಬ ಆರೋಗ್ಯದಾಯಕವಾಗಿರಲಿ ಎಂದು ಪ್ರಾರ್ಥಿಸಿದ್ದಾರೆ. ಜನತೆಗೆ, ಈ ಯೋಜನೆಯ ಭಾಗವಾಗಿರುವ ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆದುಕೊಳ್ಳಬಹುದಾದ ಈ ಯೋಜನೆಯಿಂದಾಗಿ ದೇಶದ ಜನರಲ್ಲಿ ಭರವಸೆ ಮೂಡಿದೆ. ಈ ಬಗ್ಗೆ ನಾನು ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಫಲಾನುಭವಿಗಳ ಜತೆ ನಡೆದ ಮಾತುಕತೆಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಯೋಧರೊಬ್ಬರ ಪತ್ನಿಗೆ ಪ್ರಧಾನಿಯವರು ಕರೆ ಮಾಡಿ ಅಭಿನಂದನೆ ಸಲ್ಲಿಸುವಾಗ ಅವರು ಕಣ್ಣೀರಾದರು. ಮೇಘಾಲಯದ ನಿವಾಸಿಯಾಗಿರುವ ಪೂಜಾ ಥಾಪಾ , ಫಲಾನುಭವಿ ಸಂಖ್ಯೆ- ಒಂದು ಕೋಟಿ. ಲಾಕ್ಡೌನ್ ಹಿನ್ನೆಲೆಯಲ್ಲಿ ತಾನು ಇವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿ ಅವರ ಅನುಭವ ಪಡೆದುಕೊಂಡಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.
ಶಿಲ್ಲಾಂಗ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಪೂಜಾ, ಆಯುಷ್ಮಾನ್ ಭಾರತ್ ಯೋಜನೆ ತಮಗೆ ಹೇಗೆ ಸಹಾಯ ಮಾಡಿತು ಎಂದು ಭಾವುಕರಾಗಿ ನುಡಿದಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಪತಿ ಪಣಿಪುರಕ್ಕೆ ಬರಬೇಕಾಯಿತು. ಇದೇ ಸಂದರ್ಭದಲ್ಲಿ ನನಗೆ ಚಿಕಿತ್ಸೆ ಆಗಬೇಕಿತ್ತು. ಆದರೆ ಶಸ್ತ್ರಚಿಕಿತ್ಸೆ, ಔಷಧಿ ಯಾವುದಕ್ಕೂ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಸಾಲ ಮಾಡುವುದು ಕೂಡ ಕಷ್ಟವಾಗಿತ್ತು. ಅದಾಗಲೇ ಆಯುಷ್ಮಾನ್ ಭಾರತ್ ಯೋಜನೆಯಿಂದ ನನ್ನ ಕಷ್ಟವೆಲ್ಲಾ ದೂರವಾಯಿತು, ನಿಶ್ಚಿಂತೆಯಿಂದ ಇದ್ದೇನೆ. ನನ್ನಂಥ ಕೋಟ್ಯಂತರ ಮಂದಿಗೆ ಉಪಕಾರ ಆಗುತ್ತಿರುವ ಈ ಯೋಜನೆಯನ್ನು ಎಷ್ಟು ಹೊಗಳಿದರೂ ಸಾಲದು ಎಂದು ಪೂಜಾ ಕಣ್ಣೀರುಸುರಿಸಿದ್ದಾರೆ.
ಏನಿದು ಯೋಜನೆ: ಈ ಯೋಜನೆ ಮೂಲಕ ವಾರ್ಷಿಕವಾಗಿ ಫಲಾನುಭವಿ ಕುಟುಂಬಕ್ಕೆ 5 ಲಕ್ಷ ರೂಪಾಯಿವರೆಗೂ ವೈದ್ಯಕೀಯ ನೆರವು ಸಿಗುತ್ತದೆ. 10 ಕೋಟಿ ಬಡ ಕುಟುಂಬಗಳಿಗೆ ಇದರಿಂದ ನೆರವಾಗುವ ಉದ್ದೇಶವನ್ನು ಯೋಜನೆ ಹೊಂದಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿ ಪ್ರತಿಯೊಂದು ರೋಗಕ್ಕೂ ಒಂದು ದರ ನಿಗದಿಪಡಿಸಲಾಗಿದೆ. ಈ ದರ ಪಟ್ಟಿಯಂತೆ ನೇರವಾಗಿ ಆಸ್ಪತ್ರೆಗಳಿಗೆ ಹಣ ಪಾವತಿಯಾಗುತ್ತದೆ.
ಮೊದಲ ಹಂತವಾಗಿ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಮೊದಲ ಹಂತದಲ್ಲಿ ಈ ಯೋಜನೆ ಛತ್ತೀಸ್ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ದಮನ್ ಮತ್ತು ದಿಯು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜಾರಿಯಾಗಿದೆ.
click and follow Indiaherald WhatsApp channel