ಕೊರೋನಾ ಸೋಂಕಿತ ಪ್ರಕರಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪ್ರತಿನಿತ್ಯವೂ ಕೂಡ ಮೂರಂಕಿಯ ಮೇಲೆ ದಾಖಲಾಗುತ್ತಿರುವ ಕೊರೋನಾ ವೈರಸ್  ರಾಜ್ಯದಲ್ಲಿ ಒಟ್ಟು ಹತ್ತು ಸಾವಿರ ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ ಹೆಚ್ಚಾಗಿ ಕೊರೋನಾ ಸೋಂಕು ಕಂಡು ಬರುತ್ತಿರುವುದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ. ರಾಜಧಾನಿಯಲ್ಲಿ ಪ್ರತಿನಿತ್ಯವೂ ಕೂಡ ಸಾಕಷ್ಟು ಕೊರೋನಾ ಸೋಂಕುಗಳು ದಾಖಲಾಗುತ್ತಿದೆ. ಇದರಿಂದ ಕೈಸೋತಿರುವ ಸರ್ಕಾರ ರಾಜಧಾನಿಯನ್ನು ಲಾಕ್ ಡೌನ್ ಮಾಡಲು ಮುಂದಾಗಿದೆ.   

 

ಹೌದು ರಾಜ್ಯ ರಾಜಧಾನಿಯಲ್ಲಿ ದಿನೇದಿನೆ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಕಳೆದ ಮೂರುನಾಲ್ಕು ದಿನಗಳಿಂದ 100ಕ್ಕೂ ಹೆಚ್ಚು ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10,000ದ ಗಡಿ ದಾಟಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಈಗ ಬೆಂಗಳೂರಿನಲ್ಲಿ ಮತ್ತೆ ಲಾಕ್​ಡೌನ್ ಚಾಲ್ತಿಗೆ ಬರಲಿದೆ ಎಂಬ ಮಾತು ವ್ಯಾಪಕವಾಗಿ ಕೇಳತೊಡಗಿದೆ. ಆದ್ದರಿಂದ ನಾಳೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ಕಡೆಗೆ ಎಲ್ಲರ ದೃಷ್ಟಿಯೂ ನೆಟ್ಟಿದೆ.

 

ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಮತ್ತೊಂದು ಲಾಕ್​ಡೌನ್ ಘೋಷಣೆಯಾದರೆ ಅಚ್ಚರಿ ಇಲ್ಲ. ಈ ವಿಚಾರವಾಗಿ ಕೆಲವು ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚಾಗಿ ಪ್ರತಿಧ್ವನಿಸುತ್ತಿರುವ ಲಾಕ್​ಡೌನ್ ವಿಚಾರವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಅಂಗೀಕರಿಸಿದ್ದು, ಪ್ರತಿನಿತ್ಯದ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಅವಲೋಕಿಸುತ್ತಿದ್ದಾರೆ. ಮಾಧ್ಯಮಗಳೂ ಸಾರ್ವಜನಿಕ ಭಾವನೆಗಳನ್ನು ಸರ್ಕಾರಕ್ಕೆ ಅರ್ಥಮಾಡಿಸುವ ಪ್ರಯತ್ನ ಮಾಡುತ್ತಿವೆ. ಲಾಕ್​ಡೌನ್​ ವಿಚಾರ ಬೇಕೋ ಬೇಡವೋ ಎಂಬುದನ್ನು ಈಗಲೇ ಹೇಳಲಾಗದು. ಸೋಂಕು ಹರಡುವುದನ್ನು ತಡೆಯುವುದರ ಜತೆಗೆ ನಮ್ಮ ಆರ್ಥಿಕ ಚಟುವಟಿಕೆಗಳು, ಸರ್ಕಾರದ ಹಣಕಾಸಿನ ಸ್ಥಿತಿಯ ಕಡೆಗೂ ಗಮನಹರಿಸುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

 

ಲಾಕ್​ಡೌನ್​ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಈ ವಿಚಾರ ಪರಿಣತರ ಸಮಿತಿಯ ಅವಲೋಕನದಲ್ಲಿದೆ. ನಾವು ಮುಖ್ಯಮಂತ್ರಿಯವರ ಜತೆಗೆ ಈ ಬಗ್ಗೆ ಚರ್ಚಿಸುತ್ತೇವೆ. ನಂತರ ಕೇಂದ್ರ ಸರ್ಕಾರದ ಜತೆಗೆ ಸಮಾಲೋಚನೆ ನಡೆಸುತ್ತೇವೆ. ಬೆಂಗಳೂರಿನಲ್ಲಿ ಹೆಚ್ಚಿನ ಕೇಸ್​ಗಳಿವೆ. ಇದಕ್ಕೆ ಹೊರಗಿನಿಂದ ಬಂದವರ ಸಂಖ್ಯೆ ಹೆಚ್ಚಿರುವುದೇ ಕಾರಣ. ಈಗಾಗಲೇ ಕೆಲವು ಪ್ರದೇಶಗಳನ್ನು ನಾವು ಸೀಲ್​ಡೌನ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

 

ಮಾರ್ಚ್ 24ರಂದು ಲಾಕ್​ಡೌನ್ ಘೋಷಣೆ ಮಾಡಿದ ಬಳಿಕ, ಜೂನ್ 1ರಿಂದ ಅನ್​ಲಾಕ್ 1 ಚಾಲ್ತಿಯಲ್ಲಿದೆ. ಈ ಅವಧಿಯಲ್ಲೇ ಈಗ ಕೇಸ್​ಗಳು ಹೆಚ್ಚಾಗಿದ್ದು, ಪರಿಸ್ಥಿತಿ ಜನರಲ್ಲಿ ಕಳವಳವನ್ನು ಉಂಟುಮಾಡಿದೆ. 

 

మరింత సమాచారం తెలుసుకోండి: