ಕೊರೋನ ವೈರಸ್ ದಿನದಿಂದ ದಿನಕ್ಕೆ ತನ್ನ ಎಲ್ಲೆಯನ್ನು ಮೀರಿ ಅಗಾಧವಾಗಿ ಬೆಳೆಯುತ್ತಿದೆ ಇದರಿಂದಾಗಿ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರೀ ಹಾಗೂ ಖಾಸಗೀ ಕಂಪನಿಗಳ ಸಭೆಗಳು, ಚರ್ಚೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಸಾಕಷ್ಟು ಎಚ್ಚರವನ್ನು ಹೊಯಿಸಬೇಕಾಗಿದೆ. ಹಾಗಾಗಿ ಇಂದು ಚರ್ಚೆಗಳು ಸಭೆಗಳು ಕೂಡ ಡಿಜಿಟಲೀಕರಣ ವಾಗುತ್ತಿದೆ. ಅದರಂತೆಯೇ ಈ ವರ್ಷ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನವನ್ನೂ ಕೂಡ ಇ-ಸಂಸತ್ ನಡೆಸುವ ಬಗ್ಗೆ ಚಿಂತನೆಯನ್ನು ನಡೆಸಲಾಗುತ್ತಿದೆ.
ಹೌದು ಕೋವಿಡ್-19 ಸೋಂಕು ತೀವ್ರ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ನಡೆಸದಿರಲು ಸರಕಾರ ತೀರ್ಮಾನಿಸಿದ್ದು, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವೂ ನಡೆಯುವುದು ಅನುಮಾನ.
ಇ- ಸಂಸತ್ ಅಧಿವೇಶನ ನಡೆದರೆ ಅದೇ ಮಾದರಿಯಲ್ಲಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ.
‘
ಜುಲೈಯಲ್ಲಿ ಮುಂಗಾರು ಅಧಿವೇಶನ ನಡೆಯಬೇಕಿದ್ದು, ವಿಕಾಸಸೌಧ, ವಿಧಾನ ಸೌಧಕ್ಕೂ ಕೋವಿಡ್ -19 ಸೋಂಕು ವ್ಯಾಪಿಸಿರುವ ಕಾರಣ ಅಧಿವೇಶನ ನಡೆ ಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಅಧಿವೇಶನ ಬಹುತೇಕ ಮುಂದೂಡಿಕೆಯಾಗಲಿದೆ.
ನವೆಂಬರ್‌ನಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಉದ್ದೇಶ ಇತ್ತಾದರೂ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ. ಕಳೆದ ವರ್ಷ ಪ್ರವಾಹ ಹಿನ್ನೆಲೆಯಲ್ಲಿ ಅದು ರದ್ದಾಗಿತ್ತು. ರಾಜ್ಯದಲ್ಲೂ ಇ-ವಿಧಾನಸಭೆ ಎಲ್ಲ ಶಾಸಕರು ಶಾಸಕರ ಭವನದ ಕೊಠಡಿಗಳಲ್ಲಿ ಕುಳಿತು ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಅಥವಾ ಸಾಮಾಜಿಕ ಅಂತರ ಕಾಯ್ದುಕೊಂಡು ಆಡಳಿತ ಮತ್ತು ವಿಪಕ್ಷಗಳಿಂದ ನಿರ್ದಿಷ್ಟ ಸಂಖ್ಯೆಯ ಸದಸ್ಯರು ಮಾತ್ರ ಪಾಲ್ಗೊಂಡು ಅಧಿವೇಶನ ನಡೆಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗುತ್ತಿದೆ.
60 ದಿನಗಳ ತೀರ್ಮಾನ ಪಾಲನೆಯಾಗದು ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕು ಎಂದು ಹಿಂದೆ ತೀರ್ಮಾನಿಸಲಾಗಿದೆ. ಜಂಟಿ ಅಧಿವೇಶನ, ಅನಂತರ ಬಜೆಟ್ ಅಧಿವೇಶನ, ಬಳಿಕ ಮುಂಗಾರು ಮತ್ತು ಚಳಿಗಾಲದ ಅಧಿವೇಶನ ಸೇರಿ 60 ದಿನ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈ ಬಾರಿ ವರ್ಷದ ಜಂಟಿ ಅಧಿವೇಶನವೂ ತಡವಾಗಿ ಆರಂಭವಾಗಿ 20 ದಿನ ಮಾತ್ರ ನಡೆದಿದೆ. ಈಗ ಮುಂಗಾರು ಮತ್ತು ಚಳಿಗಾಲದ ಅಧಿವೇಶನಗಳೂ ಎಷ್ಟು ದಿನ ನಡೆಯುವುದೋ ಖಚಿತವಾಗಿಲ್ಲ.
click and follow Indiaherald WhatsApp channel