ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ನವ ಭಾ11ರತದ ಪರಿಕಲ್ಪನೆಯಾಗಿದೆ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಎನ್‍ಇಪಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹಾ ಪರಿವರ್ತನೆಗೆ ನಾಂದಿಯಾಗಲಿದೆ 

ಹೊಸ ಶಿಕ್ಷಣ ನೀತಿ ಬಗ್ಗೆ ಗೊಂದಲ ಮತ್ತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಇದು ಮಹತ್ವದ ಸುಧಾರಣೆಗೆ ಭದ್ರ ಬುನಾದಿಯಾಗಲಿದೆ. ಜೊತೆಗೆ ಯುವಜನತೆಯನ್ನು ಸಬಲೀಕರಣಗೊಳಿಸಲಿದೆ ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಉನ್ನತ ಶಿಕ್ಷಣದಲ್ಲಿ ಪರಿವರ್ತನಾ ಸುಧಾರಣೆ ಕುರಿತ ಸಮಾವೇಶವನ್ನು ವಿಡಿಯೋ ಲಿಂಕ್ ಮೂಲಕ ಉದ್ಭಾಟಿಸಿ ಮೋದಿ ಮಾತನಾಡಿದರು.



ಹೊಸ ಶಿಕ್ಷಣ ನೀತಿಯ ವಿಚಾರಣೆ, ಆಲೋಚನೆ ಮತ್ತು ಸಮಾಲೋಚನೆ ತತ್ತ್ವಗಳ ಮೇಲೆ ರೂಪಿತವಾಗಿದೆ. ಇದು ಹೇಗೆ ಆಲೋಚನೆ ಮಾಡಬೇಕು ಮತ್ತು ಯಾವ ಚಿಂತಿಸಬೇಕೆಂಬ ಬಗ್ಗೆ ಗಮನ ಕೇಂದ್ರೀಕರಿಸುತ್ತದೆ. ಈ ಹಿಂದಿನ ಶಿಕ್ಷಣ ನೀತಿಯಲ್ಲಿ ಏನನ್ನು ಆಲೋಚಿಸಬೇಕೆಂಬ ಬಗ್ಗೆ ಗಮನಹರಿಸಲಾಗಿತ್ತು. ಹೊಸ ನೀತಿಯೂ ಸಂಪೂರ್ಣ ಭಿನ್ನ-ವಿಭಿನ್ನ ಎಂದು ಮೋದಿ ವಿಶ್ಲೇಷಿಸಿದರು.



ಅನೇಕ ವರ್ಷಗಳಿಂದಲೂ ದೇಶದ ಶಿಕ್ಷಣ ವ್ಯವಸ್ಥೆ ಮತ್ತು ನೀತಿಗಳಲ್ಲಿ ಭಾರೀ ಬದಲಾವಣೆಗಳು ಆಗಿರಲಿಲ್ಲ. ತತ್ಪರಿಣಾಮವಾಗಿ ಕುತೂಹಲ ಮತ್ತು ಕಲ್ಪನೆಯ ಉತ್ತೇಜನ ಮËಲ್ಯದ ಬದಲಿಗೆ ಮಾನಸಿಕವಾಗಿ ಮಾತ್ರ ಕೇಳುವ ವಿಧಾನಕ್ಕೆ ಉತ್ತೇಜನ ನೀಡಲಾಗುತ್ತಿತ್ತು. ಆದರೆ ಹೊಸ ನೀತಿಯಿಂದ ನಮ್ಮ ಶಿಕ್ಷಣ ಪದ್ದತಿಯಲ್ಲಿ ಅಮೂಲಾಗ್ರ ಸುಧಾರಣೆ ಮತ್ತು ಬದಲಾವಣೆಯಾಗಲಿದೆ ಎಂದು ಅವರು ಹೇಳಿದರು.



ಹಲವು ವರ್ಷಗಳ ಪರಿಶ್ರಮ ಮತ್ತು ದೂರದೃಷ್ಟಿಯಿಂದ ಹೊಸ ನೀತಿಯನ್ನು ರೂಪಿಸಲಾಗಿದೆ. ಇದರಲ್ಲಿ ಎದುರಾದ ಅನೇಕ ಸವಾಲುಗಳಿಗೆ ಪರಿಹಾರತ್ಮಕ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿದೆ ಎನ್‍ಇಪಿ ಬಗ್ಗೆ ಯಾರೂ ಗೊಂದಲ ಅಥವಾ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನಾತ್ಮಕ ಸುಧಾರಣೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.



ಅನೇಕ ಶಿಕ್ಷಣ ತಜ್ಞರು, ಮೇಧಾವಿಗಳು ಹೊಸ ನೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ಸುಧಾರಣೆಗಳಿಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ಉಪನ್ಯಾಸಕರ ಹಿತಾಶಕ್ತಿಗೆ ಹೆಚ್ಚು ಒತ್ತು ನೀಡಲಾಗಿದೆ. ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದು ಮೋದಿ ವಿವರಿಸಿದರು.

మరింత సమాచారం తెలుసుకోండి: