ಕೊರೋನಾ ವೈರಸ್ ದೇಶದಲ್ಲಿ ದಿನದಿಂದದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕೂಡ  ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ವೈರಸ್ ಇಂದಾಗಿ ಗುಣಮುಖರಾಗುತ್ತಿದ್ದಾರೆ. ಈ ಗುಣಮುಖರಾಗುತ್ತಿರುವ ಪಟ್ಟಿಯಲ್ಲಿ ಅಮೇರಿಕಾವನ್ನು ಭಾರತ ಹಿಂದಿಕ್ಕಿದೆ.




ಹೌದು ನಾಗಾಲೋಟದಿಂದ ಸಾಗುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆಯಲ್ಲಿ ಶನಿವಾರ ಕೊಂಚ ಇಳಿಕೆ ಆಗಿದೆ. ಅಲ್ಲದೇ ಸೋಂಕಿತರ ಸಂಖ್ಯೆಗಿಂತಲೂ ಗುಣಮುಖರಾದವರ ಸಂಖ್ಯೆ ಹೆಚ್ಚಳಗೊಂಡಿದೆ.




ಶನಿವಾರ ಒಂದೇ ದಿನ ಬರೋಬ್ಬರಿ 95,880 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಭಾರತದಲ್ಲೀಗ ಚೇತರಿಕೆ ಪ್ರಮಾಣ ಶೇ.79.28ಕ್ಕೆ ತಲುಪಿದೆ. ಇದರೊಂದಿಗೆ ಹೆಚ್ಚು ಚೇತರಿಕೆ ಪ್ರಮಾಣವನ್ನು ಹೊಂದಿರುವ ಅಮೆರಿಕಾವನ್ನು ಭಾರತ ಹಿಂದಿಕ್ಕಿದೆ. ಇದೀಗ ಹೆಚ್ಚು ಚೇತರಿಕೆ ಪ್ರಮಾಣವನ್ನು ಹೊಂದಿರುವ ವಿಶ್ವದ ನಂ.1 ರಾಷ್ಟ್ರವಾಗಿ ಹೊರಹೊಮ್ಮಿದೆ.




ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅಮೆರಿಕಾ ನಂತರದಲ್ಲಿ ಅತಿ ಹೆಚ್ಚು ಪೀಡಿತಗೊಂಡಿರುವ ರಾಷ್ಟ್ರ ಭಾರತವಾಗಿದ್ದು, ಇದೀಗ ಚೇತರಿಕೆ ಪ್ರಮಾಣದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನೇ ಹಿಂದಿಕ್ಕಿದೆ. ಶನಿವಾರ ಒಂದೇ ದಿನದಲ್ಲಿ ಸುಮಾರು 96,000 ಜನರು ಚೇತರಿಸಿಕೊಂಡಿದ್ದು, ಭಾರತವು ಅಮೆರಿಕಾವನ್ನ ಹಿಂದಿಕ್ಕಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.





ಅಮೆರಿಕಾದಲ್ಲಿ ಒಟ್ಟು 6,925,941 ಮಂದಿ ಸೋಂಕಿತರಿದ್ದು, 4,191,894 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ 53,08,015 ಮಂದಿ ಸೋಂಕಿತರಿದ್ದು, ಈ ವರೆಗೂ 42,08,432 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವೈರಸ್ ಪತ್ತೆಗಾಗಿ ಸರ್ಕಾರ ಕೈಗೊಂಡ ಸಮಯೋಚಿತ ಕ್ರಮಗಳು ಈ ಜಾಗತಿಕ ಸಾಧನೆಗೆ ಕಾರಣವಾಗಿವೆ ಎಂದು ಹೇಳಿದೆ.






ಭಾರತದ ಕೋವಿಡ್ -19 ಪ್ರಕರಣವು ಕಳೆದ 24 ಗಂಟೆಗಳಲ್ಲಿ 93,337 ಹೊಸ ಪ್ರಕರಣಗಳು ಮತ್ತು 1,247 ಸಾವುಗಳ ಏರಿಕೆಯೊಂದಿಗೆ 53 ಲಕ್ಷ ದಾಟಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. 10,13,964 ಸಕ್ರಿಯ ಪ್ರಕರಣಗಳು, 42,08,432 ಡಿಸ್ಚಾರ್ಜ್ ಮತ್ತು 85,619 ಸಾವುಗಳು ಸೇರಿದಂತೆ ಒಟ್ಟು ಪ್ರಕರಣಗಳ ಸಂಖ್ಯೆ 53,08,015 ಆಗಿದೆ.





ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಸೆಪ್ಟೆಂಬರ್ 18 ರವರೆಗೆ ಪರೀಕ್ಷಿಸಲಾದ ಒಟ್ಟು ಮಾದರಿಗಳು 6,24,54,254. ಸೆಪ್ಟೆಂಬರ್ 18 ರಂದು ಪರೀಕ್ಷಿಸಿದ ಮಾದರಿಗಳ ಸಂಖ್ಯೆ 8,81,911. ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಆರೋಗ್ಯ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ 301273 ಸಕ್ರಿಯ ಪ್ರಕರಣಗಳು, ಕರ್ನಾಟಕ 101148, ಆಂಧ್ರಪ್ರದೇಶ 84423, ಉತ್ತರ ಪ್ರದೇಶ 67825 ಮತ್ತು ತಮಿಳುನಾಡು 46506 ಪ್ರಕರಣಗಳಿವೆ.

మరింత సమాచారం తెలుసుకోండి: