ಕೊರೋನಾ ವೈರಸ್ ಇಡೀ ವಿಶ್ವ ವ್ಯಾಪಿಯಾಗಿ ಹರಡಿಕೊಂಡಿರುವಂತಹ ಈ ಸಂದರ್ಭದಲ್ಲಿ ಕೊರೋನಾ ವೈರಸ್ ನಿರ್ಮೂಲನೆಗೆ ಔಷಧಿ ಬೇಕೇ ಬೇಕು ಹಾಗಾಗಿ ವಿಶ್ವದ ಎಲ್ಲಾ ರಾಷ್ಟ್ರಗಳೂ ಕೊರೋನಾ ಔಷಧಿಗೆ ಸಂಶೋಧಿಸಲು ಮುಂದಾಗಿದೆ ಈಗಾಗಲೇ ಅನೇಕ ರಾಷ್ಟ್ರಗಳು ಕೊರೋನಾ ವೈರಸ್ ಔಷಧಿಯನ್ನು ಸಂಶೋಧಿಸಿದೆ. ಅದೇ ರೀತಿ ಭಾರತವೂ ಕೂಡ ಕೊರೋನಾ ಔಷಧಿಯನ್ನು ತಯಾರಿಸಿ ಈಗಾಗಲೇ ಕ್ಲಿನಿಕಲ್ ಟೆಸ್ಟ್ ಮಾಡುತ್ತಿದೆ. ಇದರ ಜೊತೆಗೆ ಭಾರತದ ಸಂಶೋಧನಾ ಸಂಸ್ಥೆ ಒಂದು ತಾನು ಮುಂದೆ ತಯಾರಿಸುವಂತಹ ಒಂದು ಔಷಧಿಗೆ ಅಮೇರಿಕಾದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.
ಹೌದು ಕೋವಿಡ್-19 ಚಿಕಿತ್ಸೆಗಾಗಿ ಇನ್‌ಟ್ರಾನಾಸಲ್ (ಮೂಗಿನ ಮೂಲಕ ನೀಡುವ) ಲಸಿಕೆ ತಯಾರಿಸಲು ದೇಶದ ಭಾರತ್ ಬಯೋಟೆಕ್ ಕಂಪನಿಯು ಅಮೆರಿಕದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ, ಯುರೋಪ್ ಹಾಗೂ ಜಪಾನ್ ಹೊರತು ಪಡಿಸಿ ಉಳಿದ ಎಲ್ಲ ರಾಷ್ಟ್ರಗಳ ಮಾರುಕಟ್ಟೆಗಳಿಗೂ ಕೋವಿಡ್ ಇನ್‌ಟ್ರಾನಾಸಲ್ ಲಸಿಕೆ ಪೂರೈಕೆ ಮಾಡುವ ಹಕ್ಕನ್ನು ಭಾರತ್ ಬಯೋಟೆಕ್ ಪಡೆದುಕೊಂಡಿದೆ.
ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ಯೂನಿವರ್ಸಿಟಿ ಲಸಿಕೆ ಮತ್ತು ಚಿಕಿತ್ಸೆ ಪರಿಶೀಲನಾ ಘಟಕದಲ್ಲಿ ಈ ಲಸಿಕೆಯ ಮೊದಲ ಹಂತದ ಪ್ರಯೋಗ ನಡೆಯಲಿದೆ. ಅಗತ್ಯ ಅನುಮತಿಗಳು ದೊರೆತ ಬಳಿಕ ಭಾರತ್ ಬಯೊಟೆಕ್ ಭಾರತದಲ್ಲಿ ಮಾನವರ ಮೇಲೆ ಮುಂದಿನ ಹಂತಗಳ ಪರೀಕ್ಷೆ ನಡೆಸಲಿದ್ದು, ಹೈದರಾಬಾದ್‌ನ ಘಟಕದಲ್ಲಿ ಲಸಿಕೆ ತಯಾರಿಕೆ ಆರಂಭಿಸಲಿದೆ. ವಿನೂತನ ಲಸಿಕೆಯ ಪೂರೈಕೆಗೆ ಒಪ್ಪಂದ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
100 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸುವ ಗುರಿ ಹೊಂದಿದ್ದೇವೆ. ಮೂಗಿನ ಮೂಲಕ ನೀಡಲಾಗುವ ಲಸಿಕೆಯಾಗಿರುವುದರಿಂದ ಬಳಕೆಯೂ ಸುಲಭ ಹಾಗೂ ಸೂಜಿ, ಸಿರಿಂಜ್‌ಗಳು ಸೇರಿದಂತೆ ಬಹಳಷ್ಟು ವೈದ್ಯಕೀಯ ವಸ್ತುಗಳ ಉಪಯೋಗ ಕಡಿಮೆಯಾಗಲಿದೆ. ಇದರಿಂದಾಗಿ ಲಸಿಕೆ ಪೂರೈಕೆಯ ಒಟ್ಟಾರೆ ವೆಚ್ಚ ಇಳಿಕೆಯಾಗಲಿದೆ ಎಂದು ಭಾರತ್ ಬಯೋಟೆಕ್‌ನ ಮುಖ್ಯಸ್ಥ ಕೃಷ್ಣ ಎಲ್ಲಾ ಹೇಳಿದ್ದಾರೆ.
ಪ್ರಸ್ತುತ ಪ್ರಯೋಗಗಳ ಪ್ರಕಾರ, ಮೂಗಿನ ಮೂಲಕ ಒಬ್ಬ ವ್ಯಕ್ತಿಗೆ ಒಂದು ಡೋಸ್ ಲಸಿಕೆ ನೀಡುವ ಮೂಲಕ ಕೊರೊನಾ ವೈರಸ್ ಸೋಂಕಿನ ವಿರುದ್ಧ ರೋಗ ನಿರೋಧ ಶಕ್ತಿ ಉಂಟು ಮಾಡಬಹುದಾಗಿದೆ. ಇದರಿಂದ ಸೋಂಕು ಹರಡುವುದನ್ನೂ ತಪ್ಪಿಸಬಹುದಾಗಿದೆ ಎಂದು ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ರೇಡಿಯೇಷನ್ ಆಂಕಾಲಜಿ ಪ್ರೊಫೆಸರ್ ಡಾ.ಡೇವಿಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆ ಕೊವ್ಯಾಕ್ಸಿನ್ ಮನುಷ್ಯರ ಮೇಲಿನ ಪ್ರಯೋಗ ಭಾರತದಲ್ಲಿ ಎರಡನೇ ಹಂತದಲ್ಲಿದೆ.
click and follow Indiaherald WhatsApp channel