ಮುಂಬೈ: ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಬಲಿಷ್ಠ ಟೀಂ ಇಂಡಿಯಾ ತಂಡ ಪ್ರಕಟಿಸಲಾಗಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ನಡೆಯಲಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ 16 ಸದಸ್ಯ ಬಲದ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆ. ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಶಮ್ ಮರಳಿ ತಂಡ ಸೇರಿದರೆ ಯಾರನ್ನು ಕೈ ಬಿಡಲಾಗಿದೆ ಗೊತ್ತಾ!? 
 
ಹಿಟ್ ಮ್ಯಾನ್ ರೋಹಿತ್ ಶರ್ಮಾ  ಭಾನುವಾರ ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾದ 16 ಸದಸ್ಯರ ಭಾರತ ಟಿ20 ತಂಡಕ್ಕೆ ವಾಪಸಾಗಿದ್ದಾರೆ. ಆದರೆ, ಎಂಎಂಸ್‌ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಎಳೆಯ ವಿಕೆಟ್ ಕೀಪರ್ ಸಂಜು ಸ್ಯಾಮ್ಸ‌ನ್‌ ಅವರನ್ನು ಟಿ20 ತಂಡದಿಂದ ಕೋಕ್ ನೀಡಿದೆ. ಭಾರತ ತಂಡ ಜನವರಿ 20ರಂದು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಐದು ಟಿ20, ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲಿದೆ. ಜನವರಿ 24ರಂದು ಆಕ್ಲೆಂಡ್‌ನಲ್ಲಿ ಸರಣಿ ಆರಂಭಗೊಳ್ಳಲಿದೆ.
 
ಭಾನುವಾರ ಕೇವಲ ಟಿ20 ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ಮತ್ತು ಟೆಸ್ಟ್ ಸರಣಿಗಳಿಗೆ ತಂಡ ಪ್ರಕಟಿಸಲಾಗಿಲ್ಲ. ನ್ಯೂಜಿಲೆಂಡ್ ಪ್ರವಾಸಕ್ಕೆ ಲಭ್ಯವಾಗಬಹುದೆಂದು ನಿರೀಕ್ಷಿಸಲಾಗಿದ್ದ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯರ ಫಿಟ್ನೆಸ್ ಪರೀಕ್ಷೆ ಸಾಬೀತಾಗದ ಕಾರಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಲಿಲ್ಲ. ರೋಹಿತ್ ಶರ್ಮಾ ಜೊತೆಗೆ ವಿಶ್ರಾಂತಿಯಲ್ಲಿದ್ದ ಮೊಹಮ್ಮದ್ ಶಮಿ ಕೂಡಾ ಕಮ್‌ಬ್ಯಾಕ್ ಮಾಡಿದ್ದಾರೆ. ಒಟ್ಟಾರೆ ಬಲಿಷ್ಠ ಟೀಂ ಇಂಡಿಯಾವನ್ನೇ ಪ್ರಕಟಿಸಲಾಗಿದೆ. 
 
ಟೀಂ ತಂಡ ಇಂತಿದೆ:
1. ವಿರಾಟ್ ಕೊಹ್ಲಿ (ನಾಯಕ),
2. ರೋಹಿತ್ ಶರ್ಮಾ (ಉಪನಾಯಕ)
3. ಕೆಎಲ್ ರಾಹುಲ್
4. ಶಿಖರ್ ಧವನ್
5. ಶ್ರೇಯಸ್ ಅಯ್ಯರ್
6. ರಿಷಬ್ ಪಂತ್ (ವಿಕೆಟ್ ಕೀಪರ್)
7. ಕುಲ್‌ದೀಪ್ ಯಾದವ್
8. ಯುಜ್ವೇಂದ್ರ ಚಹಲ್
9. ಮನೀಶ್ ಪಾಂಡೆ
10. ಶಿವಂ ದುಬೆ
11. ಜಸ್ಪ್ರೀತ್ ಬುಮ್ರಾ
12. ಶಾರ್ದೂಲ್ ಠಾಕೂರ್
13. ನವದೀಪ್ ಸೈನಿ
14. ವಾಷಿಂಗ್ಟನ್ ಸುಂದರ್
15. ರವೀಂದ್ರ ಜಡೇಜಾ
16. ಮೊಹಮ್ಮದ್ ಶಮಿ.

మరింత సమాచారం తెలుసుకోండి: